ದಶರಥಾತ್ಮಜ ಶ್ರೀರಾಮ
ಮಹಾವಿಷ್ಣುವಿನ ಸಪ್ತಮಾವತಾರ
ಭೂಮಿಗಿಳಿದ ಭಗವಂತನ ನರಾವತಾರ
ಸರಯೂ ಪುಣ್ಯ ನದಿ ತೀರ
ಸಾಕೇತದ ಪವಿತ್ರ ನೆಲ ಸಾರ//
ದಶರಥಾತ್ಮಜ ಪ್ರಿಯ ನಂದನ
ಕೌಸಲ್ಯಾ ಮಡಿಲ ಕಂದನು
ಚೈತ್ರಶುಕ್ಲ ಮಾಸದಿ ಉದಿಸಿದ
ನವಮಿಯ ಶುಭದಿನದಿ ಜನಿಸಿದ//
ರಾಮನೇ ಮನಸ ಪರಿಶುದ್ಧ ಬೆಳಕು
ಆತ್ಮ ಮನಸುಗಳ ಸಂಯಮದ ಸರಕು
ದುಷ್ಟ ಶಕ್ತಿಗಳ ಸರ್ವನಾಶ
ದೈವೀ ಶಕ್ತಿಗಳ ಉಪಾಸನೆ //
ಶಬರಿಗೆ ಮೋಕ್ಷವ ತಂದ
ಮಾತೆ ಅಹಲ್ಯೆಯ ಪೊರೆದ
ಹನುಮಂತ ಪ್ರೀತ ರಾಜಾರಾಮ
ಶಿಷ್ಟರ ಪರಿಪಾಲಿಸಿದ ಸೋಮ
ಅಯೋಧ್ಯೆಯ ಪುಣ್ಯ ನೆಲದಲಿ
ಪ್ರತಿಷ್ಠಾಪನೆ ಆಗುತಿಹ ವೇಳೆಯಲಿ
ಭಕ್ತಜನಸ್ತೋಮದ ಹೃದಯಲಿ
ಶ್ರೀರಾಮ ತಾರಕಮಂತ್ರ ಜಪಿಸುತಲಿ
ಅಳಿಲ ಸೇವೆಯ ಕೊಂಡಾಡಿದ ದೇವ
ಶಿಷ್ಟರ ಅನವರತ ಕಾವ
ನಮ್ಮೆಲ್ಲರ ಪ್ರಾರ್ಥನೆ ಸ್ವೀಕರಿಸು
ದುಷ್ಟ ಮನಗಳ ಪರಿವರ್ತಿಸು
***
ಶ್ರೀರಾಮಚಂದ್ರ ನಮೋ*
ದಶರಥಾತ್ಮಜ ರಾಮ ನಮೋ
ಕೌಸಲ್ಯಾ ನಂದನ ರಾಮ ನಮೋ
ಸಾಕೇತದರಸ ಶ್ರೀರಾಮ ನಮೋ
ಲಕ್ಷ್ಮಣಾಗ್ರಜ ರಾಮಚಂದ್ರ ನಮೋ
ರಘುವಂಶ ದೀಪ ರಾಮ ನಮೋ
ವಿಶ್ವಾಮಿತ್ರ ಪ್ರಿಯ ರಾಮ ನಮೋ
ಹನುಮ ವಂದಿತ ರಾಮ ನಮೋ
ಸತ್ಯವಾಕ್ಯ ಆಚರಿಪ ರಾಮ ನಮೋ
ಪಿತೃವಾಕ್ಯ ಪರಿಪಾಲಕ ರಾಮ ನಮೋ
ಕೋದಂಡಪಾಣಿ ರಾಮ ನಮೋ
ದುಷ್ಟ ಸಂಹಾರ ರಾಮ ನಮೋ
ಮುನಿ ವೃಂದ ಸೇವಿತ ರಾಮ ನಮೋ
ದಶಕಂಠನ ವಧಿಸಿದ ರಾಮ ನಮೋ
ಅಹಲ್ಯಾ ಶಾಪ ನಿವಾರಣ ರಾಮ ನಮೋ
ಶಬರಿಗೆ ಮೋಕ್ಷವು ರಾಮ ನಮೋ
ದೇವರ ದೇವ ರಾಮ ನಮೋ
ಭಕ್ತರ ಕಾವ ರಾಮ ನಮೋ
ಅಯೋಧ್ಯೆಯೆ ಪಾವನ ರಾಮ ನಮೋ
ರಾಮ ರಾಮ ಜೈ ಶ್ರೀರಾಮನಮೋ
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ