ಕವನಗಳು

ವಿಧ: ಕವನ
January 14, 2024
ಅಪ್ಪನು ಹೋದರು ಸ್ನಾನವ ಮಾಡಲು ನಂತರ ಪೂಜೆಯ ಮಾಡುವರು ಅಣ್ಣನು ತಂಗಿಯು ಹೂಗಳ ಕೀಳಲು ಹೂವಿನ ತೋಟಕೆ ನಡೆದಿಹರು   ಘಮ್ಮನೆ ಪರಿಮಳ ಬೀರುವ ಹೂಗಳು ಮಲ್ಲಿಗೆ ಸಂಪಿಗೆ ಹೂವುಗಳ ತುಳಸಿಯ ದಳಗಳ ಕಿತ್ತಿಹ ಸಂತಸ ತುಂಬಿದೆ ಈ ಎಳೆ ಮನಸುಗಳ   ಕಿತ್ತಿಹ ಹೂಗಳ ಬುಟ್ಟಿಯಲಿರಿಸುತ ನಡೆದರು ಮನೆಕಡೆ ಜೊತೆ ಸೇರಿ ಬುಟ್ಟಿಯ ಹಿಡಿಯಲು ತನ್ನಲಿ ನೀಡಲು ಕೇಳಿದ ತಂಗಿಯು ಹಟಮಾರಿ   ಎಡವಿದ ತಂಗಿಯ ಬುಟ್ಟಿಯ ಒಳಗಿನ ಹೂಗಳು ಬಿದ್ದಿತು ಮಣ್ಣಿನಲಿ ತಂಗಿಯ ನೋವನು ಅರಿತಿಹ ಅಣ್ಣನು ಅಳದಿರು ಎಂದನು ಪ್ರೀತಿಯಲಿ||   -…
ವಿಧ: ಕವನ
January 13, 2024
ಮೌನವಾಗಿಯೆ ಮನವ ಸೇರಿದೆ ಉಳಿದು ಮೆರೆಯುವೆ ಅಲ್ಲಿಯೇ|| ಮರೆತು ನನ್ನನೆ ನೆನೆವೆ ನಿನ್ನನೆ ನೀನು ಮಾಡಿದ ಮೋಡಿಯೇ||೧||   ಕಣ್ಣಿನಲ್ಲಿಯೆ ಕಾವ್ಯ ಬರೆಯುವೆ ನನ್ನ ಹೃದಯದ ಪುಟದಲಿ|| ನಿತ್ಯ ಪಠಿಸುತ ಮುದವಗೊಳ್ಳುವೆ ಜೇನ ಸವಿಯಿದೆ ಅದರಲಿ||೨||   ನಿನ್ನ ನೆನಪಲಿ ಹಿಗ್ಗಿ ಮನವಿದು ಅರುಣನೆದುರಿನ ತಾವರೆ|| ಬಾಳ ಪಯಣವು ಹಿತದ ಯಾನವು ನನ್ನ ಜೊತೆಯಲಿ ನೀನಿರೆ||೩||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
January 12, 2024
ಮುದ್ದು  ಕಂದ ಮುದ್ದು ಕಂದ ನಿನ್ನ ಅಂದ ನೋಡಲೆಂತು ಚಂದ/ ಅಮ್ಮನ ಕಣ್ಣು ತಪ್ಪಿಸಿ ಬಂದ ಆಡಲೆಂದು ತುಂಬಿದ ಮನದಿಂದ//   ತೆವಲಿ  ತೆವಲಿ ಬಂದು ನಿಂದ ಅಪ್ಪ ನಿಗೆ ಸಿಕ್ಕಿದ ನರಿ ಮರಿ ಯೊಂದ/ ಸಾಕಿದರು ಪ್ರೀತಿಯಲಿ ಬಹುದಿನದಿಂದ ಸ್ನೇಹವು ಬೆಳೆಯಿತು ದಿನ ದಿನದಿಂದ//   ಒಟ್ಟಿಗೆ ಆಡುತ ಕುಳಿತಿಹ ಸೊಬಗದು ಮೇಲಕೆ ನೋಡಲು ಕಂಡಿತು ಕಿವಿಯದು/ ಕೋಟಲಿರುವುದೆಂದು ತಿಳಿಯದಿರುವುದು ಪ್ರಾಣಿಯೆಂದು ಹೆದರಿ ಕುಳಿತಿಹುದು//   ಆಡುವುದ ನಿಲ್ಲಿಸಿ ಓಡುವ ತರದಲಿಹುದು ಅಮ್ಮನು ಹಾಕಿದ ಉಡುಪದು/ ಕಂದನಿಗೆಂದು…
ವಿಧ: ಕವನ
January 11, 2024
ಗಝಲ್ - ೧ ಮೆಲ್ಲುಸಿರಿನ ಗಾಯನದಲ್ಲಿ ಅರಳಿಬಿಡೆ ನನ್ನವಳೆ ಚೆಲುವಿನ ಅಪ್ಪುಗೆಯಲ್ಲಿ ನರಳಿಬಿಡೆ ನನ್ನವಳೆ   ಬೆಸುಗೆಯ ಬಂಧನದಲ್ಲಿ ಪ್ರೀತಿಯಿಲ್ಲವೆಂದೆ ಏಕೆ ಹಿತವಾಗಿಯೆ ಬಿಗಿದಿರುವೆ ಕೆರಳಿಬಿಡೆ ನನ್ನವಳೆ   ತಂಪು ಹನಿಸುವ ಚಂದ್ರ ಇನ್ನೂ ಮುಳುಗಿಲ್ಲ ನೋಡು ಹಾಸಿಗೆಯ ತುಂಬೆಲ್ಲ ಹೊರಳಿಬಿಡೆ ನನ್ನವಳೆ   ಆಲಿಂಗನ ಚೆನ್ನಾಟ ಕುಡಿನೋಟದ ಪ್ರೇಮದೊಸಗೆ ಮುತ್ತುಗಳ ಮತ್ತಿನಲ್ಲಿ ಸುರುಳಿಬಿಡೆ ನನ್ನವಳೆ   ಕೈಹಿಡಿದ ಚೆಲುವನೀಗ ಬಿಡುವನೇನು ಹೇಳು ಈಶಾ ಹಗಲು ಕಳೆದು ರಾತ್ರಿಗೆಲ್ಲ ಮರಳಿಬಿಡೆ ನನ್ನವಳೆ…
ವಿಧ: ಕವನ
January 10, 2024
ತಮ್ಮಯ ಮರಿಗಳು ವಿದ್ಯೆಯ ಕಲಿಯಲಿ ಎಂದನು ಕೋತಿಗಳೆಜಮಾನ ಕಾಡಿನ ನಡುವಲಿ ಶಾಲೆಯ ತೆರೆಯಲು ಮರ್ಕಟ ರಾಜನ ತೀರ್ಮಾನ   ಕೋತಿಯ ಮರಿಗಳು ಶಾಲೆಗೆ ಸೇರುತ ವಿದ್ಯೆಯ ಚಂದದಿ ಕಲಿತಿಹವು ವರ್ಷವು ಉರುಳಿತು ಈದಿನ ನಡೆವುದು ಶಾಲೆಯ ವಾರ್ಷಿಕ ಉತ್ಸವವು   ನಾನಾ ಸ್ಪರ್ಧೆಯು ನಡೆಯುತಲಿರುವುದು ಮರ್ಕಟ ಮರಿಗಳ ನಡುವಿನಲಿ ಛದ್ಮ ವೇಷದ ಸ್ಪರ್ಧೆಗೆ ಮರಿಯಿದು ಸಿದ್ಧವಿದಾಗಿದೆ ಹುರುಪಿನಲಿ   ಮಾನವ ವೃದ್ಧನ ವೇಷವ ಧರಿಸಿದೆ ಉಡುಪಲಿ ಮೈಯನು ಮುಚ್ಚಿಹುದು ವೃದ್ಧರ ತರದಲಿ ಊರುವ ಕೋಲನು ಚಂದದಿ ಕರದಲಿ ಹಿಡಿದಿಹುದು  …
ವಿಧ: ಕವನ
January 09, 2024
ಸ್ನೇಹವೆಂಬ ಬೆಳಕ ಚೆಲ್ಲಿ ಸೂರ್ಯ ಮೂಡಿಲಿ ರೋಷ ದ್ವೇಷ ಅಳಿಸಿ ಹಾಕಿ ಶಾಂತಿ ಮೂಡಲಿ   ಪ್ರೀತಿ ಎಂಬ ಕಿರಣದಿಂದ ಜೀವ ತುಂಬಲಿ ಕೋಪವನ್ನು ತೊಡೆದು ಹಾಕಿ ಸ್ನೇಹ ಮೂಡಲಿ   ಅಂದವಾದ ಪ್ರಕೃತಿಯಿಂದ ಜಗವು ಬೆಳೆಯಲಿ ಚಂದವಾದ ಹಕ್ಕಿ ಕೂಗಿ ಹರುಷ ನೀಡಲಿ   ಚಿನ್ನದಂತ ಕಿರಣದಿಂದ ಹೂವು ಅರಳಲಿ ಬಣ್ಣ ಬಣ್ಣದ ಚಿಟ್ಟೆ ಕೂಡ ನಲಿದು ಕುಣಿಯ   ಮಧುರ ಕಂಠದಿಂದ ಕೋಗಿಲೆ ಹಾಡು ಹಾಡಲಿ ಚದುರಿ ಹೋದ ಮನಸುಗಳನ್ನು ಒಂದು ಮಾಡಲಿ   ಎಂಥ ಚಂದ ಸೃಷ್ಟಿ ಸೊಬಗು ನೀವು ಕಾಣಿರಿ ದೇವನಿತ್ತವರವನೆಂದು ಒಲ್ಲೆ ಎನದಿರಿ.  -ಕೆ.…
ವಿಧ: ಕವನ
January 08, 2024
ಮಂದಿ ವಾಸಕೆ ಸೂರು ನಿರ್ಮಿಸೆ ಅರಸಿ ಜಾಗವ ಒಂದೆಡೆ ಅಲ್ಲಿ ಬೆಳೆದಿಹ ವೃಕ್ಷ ಕಡಿವರು ಸಸ್ಯಕೊದಗುವ ಹಿನ್ನಡೆ   ಅದುವೆ ಮರಗಳ ಕಾಂಡ ಬಳಸುತ ಕಿಟಿಕಿ ಬಾಗಿಲು ಸಕಲವ ಸಾಲದಾದರೆ ಉಳಿದ ಮರಗಳ ನಡೆಸಿ ಮಾರಣ ಹೋಮವ   ಇಲ್ಲಿ ಓರ್ವನು ಮರವನುಳಿಸುತ ಕಟ್ಟಿಕೊಂಡನು ಕಟ್ಟಡ ಅವನ ಋಣವನು ಸಲಿಸುತಿರುವುದು ಬಿಟ್ಟು ರುಚಿಕರ ಕಾಯ್ಗಳ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
January 07, 2024
ಕಾಡಿನ ನಡುವಲಿ ಹಾದಿಯು ತಪ್ಪಿತು ನಾಡಿಗೆ ಬಂದಿತು ನರಿಯ ಮರಿ ತಾಯಿಯ ಕಾಣದೆ ಚಿಂತೆಯು ಕಾಡಿತು ನೋಡಿತು ಸುತ್ತಲು ಅದು ಹೆದರಿ   ಉದರದ ಒಳಗಡೆ ಹಸಿವಿನ ವೇದನೆ ಎಳೆಮರಿ ತಿನ್ನುವುದೇನನ್ನು ಪರಿಚಯವಿಲ್ಲದ ಜಾಗದಿ ಸಿಲುಕಿದೆ ಯಾರನು ಕೇಳಲಿ ತಿನಿಸನ್ನು   ಅಂಜಿಕೆಯಿಂದಲಿ ಮುಂದಡಿ ಇಡುತಿರೆ ಪಕ್ಕದೆ ಕಂಡಿತು ಕಂದನನು ಮಗುವಿನ ಮೊಗದಲಿ ಶುದ್ಧದ ನಗುವಿದೆ ನೋಡುತಲಿದ್ದನು ಮರಿಯನ್ನು   ಇಬ್ಬರು ಎಳೆಯರು ಆದರು ಗೆಳೆಯರು ನೀಡಿದ ತಿನಿಸಲಿ ಪಾಲನ್ನು ಅನುದಿನ ಸೇರುತ ಅಡುತಲಿದ್ದರು ಸ್ನೇಹವು ಬೆಸೆದಿದೆ…
ವಿಧ: ಕವನ
January 06, 2024
ಜಯ ಜಯ ಶಂಕರ ಸಾಂಬ ಸದಾಶಿವ ಭಕ್ತರ ಪೊರೆಯುವ ಮಹಾದೇವ ಕರವನು ಮುಗಿಯುತ ನಮಿಸುವೆ ಶಂಕರ ನೀನಿಹ ಭೂಮಿಯೆ ಕೈಲಾಸ/   ಭಕ್ತಿಗೆ ಒಲಿಯುವ ಕರುಣಾ ಸಾಗರ ಭಕ್ತರ ಮನದಲಿ ಸಾಕಾರ ಮಣಿದಿಹ ಶರಣರ ಪೊರೆಯುವ ಈಶ್ವರ ಭಜಿಸಿದೆ ಭಕ್ತರ ಪರಿವಾರ/   ಹಸಿರಿನ ಬನದಲಿ ಹಕ್ಕಿಗಳಿಂಚರ ಶಂಕರ ನಾಮದ ಝೇಂಕಾರ ಬಿಲ್ವವನರ್ಪಿಸಿ ಛಮೆಯನು ಪಠಿಸುತ ಮಾಡುವೆ ಪೂಜೆ ಪುನಸ್ಕಾರ/   ಓಂಕಾರ ರೂಪಿ ತ್ರಿಶೂಲ ಪಾಣಿ ಅಭಿಷೇಕ ಪ್ರಿಯನೆ ಗಂಗಾಧರ ಚರಣಕೆ ಎರಗುತ ಕಷ್ಟವನರುಹಲು ಮಾಡುವೆ ಕ್ಷಣದಲಿ ಪರಿಹಾರ/   ಜಗದಲಿ ದುರ್ಜನ…
ವಿಧ: ಕವನ
January 05, 2024
ಸುಂದರ ಉಡುಪಲಿ ಹೊರಟುದು ಎಲ್ಲಿಗೆ ಮೊದಲಿಗೆ ನುಡಿಯೆಯ ನೀನಾರು ಉರಿಯುವ ಹಣತೆಯ ಹಣ್ಣೆಂದೆಣಿಸುತ ಬೆಂಕಿಯ ಉರಿಯಲಿ ಬೀಳದಿರು   ತನುವಿಗೆ ಈತರ ಹಸಿರಿನ ಬಣ್ಣವ ಚಂದದಿ ಯಾರದು ಹಚ್ಚಿದರು ಹಸಿರಿನ ಮೇಲೆಯೆ ಬೆಳ್ಳನೆ ಗೆರೆಯನು ಹೇಗದು ನೆಟ್ಟಗೆ ಎಳೆದಿಹರು   ನಿನ್ನನು ನೋಡಿದ ಚಿಣ್ಣರು ಹರ್ಷದೆ ಕರೆದರು ನನ್ನನು ನೋಡೆಂದು ಕೀಟವೊ,ಚಿಟ್ಟೆಯೊ ಏನೇ ಆಗಿರು ಸೊಗಸಿಗೆ ಸೋತೆನು ನಾನಿಂದು|| -ಪೆರ್ಮುಖ ಸುಬ್ರಹ್ಮಣ್ಯ ಭಟ್