ಅಭಿಷೇಕ ಪ್ರಿಯ

ಅಭಿಷೇಕ ಪ್ರಿಯ

ಕವನ

ಜಯ ಜಯ ಶಂಕರ ಸಾಂಬ ಸದಾಶಿವ

ಭಕ್ತರ ಪೊರೆಯುವ ಮಹಾದೇವ

ಕರವನು ಮುಗಿಯುತ ನಮಿಸುವೆ ಶಂಕರ

ನೀನಿಹ ಭೂಮಿಯೆ ಕೈಲಾಸ/

 

ಭಕ್ತಿಗೆ ಒಲಿಯುವ ಕರುಣಾ ಸಾಗರ

ಭಕ್ತರ ಮನದಲಿ ಸಾಕಾರ

ಮಣಿದಿಹ ಶರಣರ ಪೊರೆಯುವ ಈಶ್ವರ

ಭಜಿಸಿದೆ ಭಕ್ತರ ಪರಿವಾರ/

 

ಹಸಿರಿನ ಬನದಲಿ ಹಕ್ಕಿಗಳಿಂಚರ

ಶಂಕರ ನಾಮದ ಝೇಂಕಾರ

ಬಿಲ್ವವನರ್ಪಿಸಿ ಛಮೆಯನು ಪಠಿಸುತ

ಮಾಡುವೆ ಪೂಜೆ ಪುನಸ್ಕಾರ/

 

ಓಂಕಾರ ರೂಪಿ ತ್ರಿಶೂಲ ಪಾಣಿ

ಅಭಿಷೇಕ ಪ್ರಿಯನೆ ಗಂಗಾಧರ

ಚರಣಕೆ ಎರಗುತ ಕಷ್ಟವನರುಹಲು

ಮಾಡುವೆ ಕ್ಷಣದಲಿ ಪರಿಹಾರ/

 

ಜಗದಲಿ ದುರ್ಜನ ಮೆರೆಯುತಲಿರುವರು

ಕಾಟವು ಹೆಚ್ಚಿದೆ ಮಿತಿ ಮೀರಿ

ಪಾರ್ವತಿ ರಮಣನೆ ನಂದಿ ವಾಹನನೆ

ಶಿಷ್ಟರ ಕಾಯೋ ಮದನಾರಿ/

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್