ಮುಗ್ಧ ಮನಸು…
ಕವನ
ನೀನು ಎಳೆಯ ನನ್ನ ಗೆಳೆಯ
ಬಾರೊ ಜೊತೆಗೆ ಆಡುವೆ
ಬೇರೆ ನನಗೆ ಗೆಳೆಯರಿಲ್ಲ
ನಿನ್ನ ಜೊತೆಗೆ ಕೂಡುವೆ
ಪಾಠದಲ್ಲಿ ಓದಿಕೊಂಡೆ
ಮಂಗನಿಂದ ಮಾನವ
ನೀನು ಮನುಜನಾಗಬಹುದು
ಸ್ವಲ್ಪ ಸಮಯ ಕಾಯುವ
ಬಾಳೆಹಣ್ಣು ತಂದೆ ನೋಡು
ಹಂಚಿ ನಾವು ತಿನ್ನುವ
ಸುಲಿದೆ ನೋಡು ಬೇಗ ಬೇಗ
ಈಗ ಪಾಲು ಮಾಡುವ
ಸುಲಿದ ಹಣ್ಣು ನೋಡಿ ನಿನ್ನ
ಮುಖದಲೆಂಥ ನಗುವಿದೆ
ನಿನ್ನ ನಗುವ ಕಂಡು ನನಗೆ
ಖುಷಿಯ ನಗುವ ತರುತಿದೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
