ಚರಿತೆಯ ಪುಟಕ್ಕೆ...

ಚರಿತೆಯ ಪುಟಕ್ಕೆ...

ಕವನ

ಸರಳಿನ ಪಂಜರ ಬಂಧನದಲ್ಲಿರೆ

ತೊರೆದಿದೆ ಮನವು ಬಯಕೆಗಳ

ಬರುವವರೆಲ್ಲರ ಕಾಣುವೆನನುದಿನ

ಕರುಣೆಯು ಬರದ ಮನಸುಗಳ

 

ಬರುವರು ಬಹುಜನ ನುಡಿವರು ಬಹುವಿಧ

ಕರೆವರು ಮುನ್ನ ಗಿಣಿರಾಮ

ಪರಿ ಪರಿ ತಿನಿಸನು ನೀಡುವರಾದರು

ಕರೆವುದು ನನ್ನ ಗಿರಿಧಾಮ

 

ಬೆರೆಯುವ ಮನವಿದೆ ಬಂಧುಗಳೆಲ್ಲರ

ಕರೆವುದು ಕನಸು ನೂರಾರು

ತೆರಳಲು ಕಾಡಿಗೆ ಬಿಡಿಸಲು ಬಂಧನ

ತೆರೆಯಲು ಕದವ ಯಾರಿಹರು

 

ಮರೆಯುವೆನೆಂದರು ನೆನಪದು ಹೋಗದು

ಮರಳುತ ಮನವ ಕಾಡುವುದು

ಕರುಳಿನ ಕೂಗಿದು ಗುರಿಯನು ಸೇರದೆ

ಚರಿತೆಯ ಪುಟವ ಸೇರುವುದು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್