ಕೊರೋನಾ ಮಹಾಮಾರಿ

ಕೊರೋನಾ ಮಹಾಮಾರಿ

ಕವನ

ಇಡೀ ವಿಶ್ವಕೆ ಭಯ ಹುಟ್ಟಿಸಿರುವ ರೋಗವು

ಕೊರೊನಾ ಎಂಬ ಮಹಾಮಾರಿಯ ತಲ್ಲನವು

ಹೆದರಬೇಡಿ ಹೆದರಿಸಬೇಡಿ ಮನಕುಲವು

ಸಾಮಾಜಿಕ ಅಂತರದಿ ಬದುಕೋಣ ನೀವು ನಾವು

 

ಚೀನಾ ದೇಶದಿಂದ ಬಂದಿದೆ ಕೊರೋನಾ ವೈರಸ್ಸು 

ಕದ್ದಿದೆ ಭೂಮಿಯ ಮೇಲೆ ಎಲ್ಲರ ಉಮ್ಮಸ್ಸು

ಯಾರ ಬಳಿಯು ಇಲ್ಲ ಲವಲವಿಕೆಯ ತೇಜಸ್ಸು

ಚಳಿಗಾಲದಲ್ಲಿ ಮಾತ್ರ ನಡೆಯುತ್ತೆ ಇದರ ಸರ್ಕಸ್ಸು

 

ಬಳಸಿರಿ ನಿತ್ಯ ನೂತನ ಸ್ಯಾನಿಟೈಸರ್ 

ಮಾಸ್ಕಗಳಿಂದ ಆಗಲಿ ನಿಮ್ಮ ಮುಖವು ಕವರ್

ಕೊರೋನ ರೋಗಕ್ಕೆ ತೋರಿಸಿ ನಿಮ್ಮ ಪವರ್

ಬಳಸಿರಿ ಪ್ರತಿನಿತ್ಯ ಬೆಳಿಗ್ಗೆ ಬಿಸಿಯ ವಾಟರ್

 

ವೈದ್ಯರ ಸಲಹೆ ಮೇರೆಗೆ ಜೀವನ ನಡೆಸಿರಿ

ಆರೋಗ್ಯ ಸಲಹೆಗಳನ್ನು ಚಾಚು ತಪ್ಪದೇ ಪಾಲಿಸಿರಿ

ವ್ಯಾಕ್ಸಿನೇಷನ್ ಗಳನ್ನು ಎಲ್ಲರಿಗೂ ತಪ್ಪದೇ ಹಾಕಿಸಿರಿ

ಪ್ರತಿಯೊಬ್ಬರಲ್ಲಿ ಅರಿವಿನ ಜಾಗೃತಿಯನ್ನು ಮೂಡಿಸಿರಿ

 

ಸುಖ ಸುಮ್ಮನೆ ಹೊರಗೆ ತಿರುಗಾಡದಿರಿ

ಕೊರೋನಕ್ಕೆ ಹೆದರಿ ಮಾನಸಿಕವಾಗಿ ಬಲಿಯಾಗದಿರಿ

ಕುಟುಂಬದೊಂದಿಗೆ ಸದಾ ನೆಮ್ಮದಿಯಿಂದ ಬಾಳಿರಿ

ನೀವು ಬದುಕಿ ಮತ್ತೊಬ್ಬರನ್ನು ಬದುಕಿಸಿರಿ

 

-ಶ್ರೀ ಮುತ್ತು. ಯ. ವಡ್ಡರ, ಶಿಕ್ಷಕರು, ಬಾಗಲಕೋಟ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್