ಕೃಷ್ಣನ ಆಲಿಸಿ
ಕವನ
ಮುರಳಿಯ ನಾದವ ಕೇಳುತ ಸುಮ್ಮನೆ
ಕುಳಿತಿರಲಾರದೆ ಚಡಪಡಿಕೆ||
ಕೊಳಲನು ನುಡಿಸುವ ಶ್ರೀಹರಿ ಮಾಧವ
ಅವನೇ ಕಾರಣ ತಳಮಳಕೆ||೧||
ಧರ್ಮವನುಳಿಸಲು ಧರೆಯಲಿ ಉದಿಸಿದ
ದನುಜರನಳಿಸಿದ ದನುಜಾರಿ||
ತುರುಗಳ ರಕ್ಷಿಸೆ ಬೆರಳಿನ ತುದಿಯಲಿ
ಗಿರಿಯನು ಎತ್ತಿದ ಗಿರಿಧಾರಿ||೨||
ಕೃಷ್ಣನ ಆಲಿಸಿ ತನುವಿರೆ ದೂರದಿ
ಮನವಿದು ಸೇರಿದೆ ಕೇಶವನ||
ವೇಣುವ ನಾದದಿ ಜಗವನೆ ಕುಣಿಸುವ
ಕರುಣಾಮಯನಾ ಮೋಹನನ||೩||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
