ಕುಶಲಮತಿ

ಕುಶಲಮತಿ

ಕವನ

ವಾನರ ದೇವ ವೀರ ಹನುಮನೆ

ದೃಢಭಕುತಿಗೆ ಹೆಸರಾದವನೆ/

ಕೇಸರಿ ಅಂಜನಾ ಮಾತೆಯ ಪುತ್ರನೆ

ಅದ್ವಿತೀಯ ಮಹಿಮಾತೀತನೆ//

 

ಪುರುಷೋತ್ತಮನ ಚರಣ ಸೇವಕ

ಶಕ್ತಿ ಸಾಮರ್ಥ್ಯ ಬ್ರಹ್ಮಚರ್ಯದ ಪ್ರತೀಕ/

ಹನ್ನೆರಡು ನಾಮಗಳಿಂದ ಮೆರೆವ ಧೀಮಂತ

ಸಪ್ತ ಚಿರಂಜೀವಿಗಳಲ್ಲಿ ಸ್ಥಾನಪಡೆದಾತ//

 

ರಾಮಾಯಣದ ಪರಮ ಧೀರ ಮೇಧಾವಿ

ಸಂಜೀವಿನಿಯ ಹೊತ್ತು ತಂದ ಸಾಹಸಿ/

ಇಚ್ಛಾರೂಪಿ ಕುಶಲಮತಿ  ಮಹಾಶಕ್ತಿ

ಸುಗ್ರೀವ ಸಖ್ಯಕೆ  ಕಾರಣವಾದ ಭಕ್ತಿ//

 

ಚೈತ್ರಮಾಸದಿ ಉದಯಿಸಿ ಖ್ಯಾತಿ ಪಡೆದವ 

ಹನುಮ ಜಯಂತಿಯ ಶುಭದಿನವು/

ಕೆಂಪು ವಸ್ತ್ರ ಧಾರಣೆ ಕುಂಕುಮ ಅರ್ಪಣೆ

ಗುಲಾಬಿ ಹೂವಿನ ಅಲಂಕಾರವು ನಿನಗೆ//

 

ಶ್ರದ್ಧಾ ಭಕ್ತಿಯಲಿ ಬೇಡುವರು ಭಕುತರು

ಲಾಡು ಬಾಳೆಹಣ್ಣು ಹಲ್ವಾ ನೈವೇದ್ಯ ಮಾಡುವರು/

ಅನ್ನಸಂತರ್ಪಣೆ ಮಾಡಿ ಪೂಜಿಪರು

ದುಷ್ಟಶಕ್ತಿಗಳ ನಾಶ ಗೈಯುತ ರಕ್ಷಿಸು//

 

(ಹನುಮ ಜಯಂತಿಯ ಶುಭಾಶಯಗಳು)

-ರತ್ನಾ ಕೆ ಭಟ್.ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್