ಕವನಗಳು

ವಿಧ: ಕವನ
December 19, 2023
ಪರಶಿವನ ಆತ್ಮಜನೆ ಷಣ್ಮಖ ಸ್ವಾಮಿಯೇ/ ದುರಿತಗಳ ಪರಿಹರಿಸು ಕಾರ್ತಿಕೇಯನೇ//   ಸುಬ್ರಹ್ಮಣ್ಯದಲಿ ನೆಲೆನಿಂತ ಸುಬ್ಬಪ್ಪನೇ/ ಭಕ್ತರು ನಮಿಪರು ನಿನ್ನಂಘ್ರಿಗೆ ಸ್ಕಂದನೇ//   ದುಷ್ಟ ತಾರಕನ ಅಟ್ಟಹಾಸವ ಮೆಟ್ಟಿದವನೇ/ ಕಷ್ಟಗಳ ನಿವಾರಿಸಿ ಅನವರತ ಪೊರೆಯುವವನೇ//    ಪೂಜೆ ಉಪವಾಸ ವ್ರತ ನೇಮ ನಾಗರಾಜನೇ/ ಹಾಲು ಮೊಸರು ತುಪ್ಪ ಹೂಗಳ ನೈವೇದ್ಯ ಗೊಂಬವನೇ //   ಬ್ರಹ್ಮ ರಥೋತ್ಸವ ಪಲ್ಲಕ್ಕಿ ಮೆರವಣಿಗೆ ವಿಶೇಷನೇ/ ಕರ್ಮಗಳ ನಿವಾರಿಸಿ ಹರಸಿ ಪೊರೆಯುವವನೇ//   ಪಲ್ಲಪೂಜೆ ಬೀದಿ ಮೆರವಣಿಗೆ ವೈಭವ ಗುಹನೇ/…
ವಿಧ: ಕವನ
December 18, 2023
ಕಾರ್ತಿಕೇಯ ಸುಬ್ರಹ್ಮಣ್ಯ ಚರಣಕೆರಗುವೆ ಹರನ ಸುತನೆ ಗಣಪನನುಜ ನಿನಗೆ ನಮಿಸುವೆ   ಕುಕ್ಕೆಯಲ್ಲಿ ನೆಲೆಸಿದಂಥ ನಾಗರೂಪನೆ ಮಾರ್ಗಶಿರದ ಷಷ್ಠಿ ದಿನದೆ ಭಕ್ತಿ ವಂದನೆ   ಅಸುರರನ್ನು ಅಳಿಸಿದಂಥ ಪುಣ್ಯ ದಿನವಿದು ಜಗದಲಿರುವ ಶಿಷ್ಟ ಜನಕೆ ಅಭಯವಿತ್ತುದು   ಸುರರ ಸೇನೆಗಧಿಪ ನೀನು ಭಜಿಪೆ ನಿನ್ನನು ನವಿಲನೇರಿ ಬಾರೊ ದೊರೆಯೆ ಹರಸು ನಮ್ಮನು||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
December 18, 2023
ನಯನವ ತೆರೆಯದೆ ಮುರಳಿಯ ನುಡಿಸುವ ಕೃಷ್ಣನು ಮೈಯನು ಮರೆತಿಹನೆ ಅಧರದಲಿರಿಸುತ ಊದುವ ಕೊಳಲನು ರಾಧೆಯ ಮನದಲಿ ನೆನೆದಿಹನೆ   ನಾದವು ಹರಿಯಲು ತನ್ಮಯಗೊಂಡನೆ ರಾಗಕೆ ಶ್ರೀಹರಿ ಸೋತಿಹನೆ ತಾನೇ ನುಡಿಸುತ ಪರವಶಗೊಂಡನೆ ಮಾಧವ ಏನಿದು ಈ ನಟನೆ   ಈ ಜಗದೊಡೆಯನೆ ನಿನ್ನನು ಅರಿಯಲು ನನಗದು ಸಾಧ್ಯವೆ ಕೇಶವನೆ? ಸೂತ್ರವು ನಿನ್ನದು ಪಾತ್ರವು ನನ್ನದು ಪಾಲಿಸು ಕರುಣದಿ ಮುರಹರನೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
December 17, 2023
ಕೊಬ್ಬಿದ ಕೋಣಗಳೆರಡರ ಓಟವು ಹಬ್ಬವು ನೋಡುವ ಕಣ್ಗಳಿಗೆ   ನಮ್ಮಯ ನಾಡಿನ ಜನಪದದಾಟವು ಗಮ್ಮತ್ತೀವುದು ಮನಗಳಿಗೆ   ಕೋಣದ ಜೋಡಿಗೆ ನೊಗವಿದೆ ಹೆಗಲಿಗೆ ಬಾಣದ ವೇಗವು ಗುರಿಯೆಡೆಗೆ   ನಮ್ಮಯ ನಾಡಲಿ ಮನೆಮಾತಾಗಿದೆ ಹೆಮ್ಮೆಯು ನಮ್ಮ ಕರಾವಳಿಗೆ   ರೋಚಕ ಎನಿಸುವ ಆಟದ ವೈಖರಿ ಯೋಚನೆ ಏತಕೆ ನೋಡುಗಗೆ   ನಾಡಿನ ಮಿತಿಯನು ಮೀರಿದ ಕ್ರೀಡೆಯು ಓಡುತ ಬಂದಿದೆ ಬೆಂಗ್ಳೂರ್ಗೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
December 16, 2023
ಎಲೆಗಳ ಜೊತೆಯಲಿ ಹೂಗಳಿಗೀದಿನ ನಡೆದಿಹ ಚಂದದ ಪಂದ್ಯವಿದು ಎಲೆಗಳ ಲೆಕ್ಕವ ಮೀರಿಸಿ ಬಿರಿಯುವ ಹೂಗಳ ಛಲವಿದು ಕಂಡಿಹುದು   ತರುವನು ಮರೆಸಲು ಪಣವನು ತೊಟ್ಟಿವೆ ಅರಳಿದೆ ಹೂಗಳು ಘಮ ಘಮಿಸಿ ಸುಂದರವೆನ್ನುವ ಪದವಿದು ಸಾಲದು ಬಣ್ಣಿಸೆ ಕೊರತೆಯ ಪದವೆನಿಸಿ   ಬಯಲಿನ ನಡುವಲಿ ಮೊಳೆತಿಹ ಗಿಡವಿದು ಹರಡಿದೆ ಕೊಂಬೆಯ ಸೊಗಸಾಗಿ ಹಸಿರಿನ ಎಲೆಗಳ ಪರದೆಯಲಿರಿಸಿದೆ ಗಿಡದಲಿ ತುಂಬಿದ ಹೂವಾಗಿ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ ಚಿತ್ರ ಕೃಪೆ: ಅಂತರ್ಜಾಲ 
ವಿಧ: ಕವನ
December 15, 2023
ಪುರುಷರ ದಿನ! ಪುರುಷರ ದಿನವಂತೆ ಪುರುಷರ ದಿನ...! ಕಂಡಿರುವಿರಾ ಎಂದಾದರೂ ಅವನ ಮುಖದಲಿ ಹರುಷ...?   ಹುಟ್ಟಿನಿಂದ ಸಾಯುವವರೆಗೂ ಬರೀ ಕ್ಲೇಶ... ಓ ಪುರುಷ-  ನೀನೆಲ್ಲಿ ಕಂಡೆಯೋ ಸಂತೋಷ...!? *** ಅತ್ಯುತ್ತಮ ತಂಡ-ಭಾರತ  ‌ಈ ಬಾರಿ ವಿಶ್ವ ಕಪ್ ಸೋತರೇನು? ಭಾರತೀಯರದು ಪ್ರಪಂಚದ ಅತ್ಯುತ್ತಮ ತಂಡವೇ ಬಿಡಿ...   ಇದಕಿಂತಲೂ ಹೆಚ್ಚಾಗಿ ನಾವು ಗೆಲ್ಲಲು ಹೊರಟಿಹೆವು ವಿಶ್ವ ಭಾತೃತ್ವವೆಂಬ ಹೃದಯದ ಗುಡಿ! *** ಸ್ನೇಹಿತರು!  ಸಿದ್ರಾಮಣ್ಣ ಡಿಕೆಶಿ-ಕುಮಾರಣ್ಣ ಮೂವರೂ ರಾಜಕೀಯ ಗರಡಿಯಿಂದ ಬಂದವರೆ;…
ವಿಧ: ಕವನ
December 14, 2023
ಜಳಕಾವ ಮುಗಿಸ್ಕೊಂಡು ನಾಷ್ಟಕ್ಕೆ ಮಾಡಿವ್ನಿ ಕಾಳುಗಳ ಹಾಕಿರುವ ಚಿತ್ರಾನ್ನ   ನೆತ್ತೀಯ ಮೇಲಿಂದ ಸುಡುತಾನೆ ನೇಸರನು ಆಯ್ತಲ್ಲ ಬಲುಬೇಗ ಮಧ್ಯಾಹ್ನ   ಕುಡುಗೋಲು ಹಿಡ್ಕೊಂಡು ಹೋಗವ್ನೆ ಯಜಮಾನ ತೋಟಾದ ಕಳೆಯ ತೆಗೆಯಾಕ   ಬೆಳಗಾನ ಹೋದವ್ನು ದುಡಿತಾನೆ ಉಳಿದವ್ನೆ ಉಣ್ಣಾಕ ಮನೆಗೆ ಬಂದಿಲ್ಲ   ಎಷ್ಟೊಂದು ಹಸಿವಲ್ಲಿ ಕೂತಿಹನೋ ನನ್ನ ರಾಯ ಬುತ್ತೀಯ ತೋಟಕ್ಕೆ ಒಯ್ತೀನಿ   ದೇಹಕ್ಕೆ ಬಲವೀಯೆ ದಾಹಕ್ಕೆ ಕುಡಿಯೋಕೆ ಜೊತೆಯಲ್ಲಿ ಒಂದಿಷ್ಟು ಹಾಲನ್ನು||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
December 13, 2023
ಗಝಲ್ ೧. ಹಣ್ಣುಗಳು ಸಿಹಿಯಾಗಿದ್ದರು ಒಳಗೊಳಗೆ ಹುಳಗಳು ಇರಬಹುದು ಸತಿಯೆ ಕಣ್ಣುಗಳು ಸುಂದರವಾಗಿದ್ದರು ಸುತ್ತಲು ಕಲೆಗಳು ಮೂಡಬಹುದು ಸತಿಯೆ   ಓಡುತ್ತಲೇ ಅವನು ಗಟ್ಟಿಯಾಗಿ ಅವಳ ತಬ್ಬಿ ಹಿಡಿದ ಯಾಕೋ ಕಾಣೆ ಮನದೆನ್ನೆಯ ಕಂಪಲಿ ಸುವಾಸನೆಯ ಅಲೆಗಳು ಏಳಬಹುದು ಸತಿಯೆ   ಒಳ್ಳೆಯ ಮನುಷ್ಯರು ಬರುವವರೆಗೂ ಪ್ರೀತಿಯ ದಾರಿಯನ್ನು ಕಾಯೋಣ ಕೆಟ್ಟವರ ಜಗತ್ತಿನಲ್ಲಿ ಕೆಲವೊಂದು ಚಿಗುರಿದ ಮರಗಳು ಕಾಣಬಹುದು ಸತಿಯೆ   ಹಸಿವು ಎಲ್ಲರಲ್ಲೂ ಇದೆ ಹಾಗೆಂದು ಯಾರೂ ಹೇಳಿಕೊಳ್ಳುವುದ ನಾನು ಕಾಣೆ ಜೀವನದ ಸಂಜೆಯಲಿ ನಮ್ಮ…
ವಿಧ: ಕವನ
December 12, 2023
ಬೆಂಕಿಯುಗುಳುವ ವೇಗದಿಂದಲಿ ಚೆಂಡನೆಸದನೆ ಎಸೆವವ ಭಯವ ತೋರದೆ ಅದನು ಎದುರಿಸಿ ಆಡುತಿರುವನು ದಾಂಡಿಗ   ತನ್ನ ನಿಗದಿತ ಜಾಗದಲ್ಲಿಯೆ ನಿಂತು ಆಡುತಲಿರುವನು ಪೂರ್ಣ ಪರಿಣಿತ ಆಟಗಾರನು ಭಯವನೇತಕೆ ಪಡುವನು?   ಉರಿವ ಸೂರ್ಯನು ಮುಗಿಸಿ ದಿನಚರಿ ಶರಧಿ ಕಡೆಗವ ಸಾಗುತ ಹೊಳೆವ ಚೆಂಡಿನ ತರದಿ ಕಾಣುವ ರವಿಯ ಚೆಲುವಿದು ಅದ್ಭುತ   ಮುಳುಗೊ ಸೂರ್ಯನ ಆಟಗಾರನು ಚೆಂಡು ಎನ್ನುವ ತರದಲಿ ಬೀಸಿ ದಾಂಡನು ಭ್ರಮೆಯ ತರಿಸುವ ಸೆಳೆವ ಯತ್ನವು ಮನದಲಿ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
December 11, 2023
ಪದಪುಂಜಗಳ ಎಳೆಯುತ ಬರೆದೆ ಅಕ್ಷರಗಳ ಸಾಲು ಸಾಲು ಕಾಲುವೆಯ ನೀರು ಹರಿಯುವ ಹಾಗೆ   ಬರೆದದ್ದು ಆಯ್ತು ಗದ್ಯವೋ ಪದ್ಯವೋ ಓದಿದ್ದು ಆಯ್ತು ಕವನವೋ ಕವಿತೆಯೋ ತ್ರಾಸದಿಂದ ಪ್ರಾಸ ಛಂದಸ್ಸು ಎಳೆದೆನೋ   ಬರೆದಿದ್ದೆಲ್ಲಾ ಕವಿತೆಯಾಗಲಿಲ್ಲ ಪ್ರಾಸ ಜೋಡಿಸಿದ್ದೆಲ್ಲ ಕವನವಾಗಲಿಲ್ಲ ನಾ ದೊಡ್ಡ ಕವಿ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದೆ   ಲೇಖನ ಹಿಡಿದು ಲೇಖನಿ ಬರೆದಾಯಿತು ಸಾಹಿತ್ಯ ಬರೆದು ಬರೆದು ನಾನಾಗಲಿಲ್ಲ ಕವಿ ಅನ್ನಿಸುತ್ತಿತ್ತು ಆದೇ ನೆನೋ ಬರೀ ಭಾವಜೀವಿ. -ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ …