ಭಾವಜೀವಿ

ಭಾವಜೀವಿ

ಕವನ

ಪದಪುಂಜಗಳ ಎಳೆಯುತ

ಬರೆದೆ ಅಕ್ಷರಗಳ ಸಾಲು ಸಾಲು

ಕಾಲುವೆಯ ನೀರು ಹರಿಯುವ ಹಾಗೆ

 

ಬರೆದದ್ದು ಆಯ್ತು ಗದ್ಯವೋ ಪದ್ಯವೋ

ಓದಿದ್ದು ಆಯ್ತು ಕವನವೋ ಕವಿತೆಯೋ

ತ್ರಾಸದಿಂದ ಪ್ರಾಸ ಛಂದಸ್ಸು ಎಳೆದೆನೋ

 

ಬರೆದಿದ್ದೆಲ್ಲಾ ಕವಿತೆಯಾಗಲಿಲ್ಲ

ಪ್ರಾಸ ಜೋಡಿಸಿದ್ದೆಲ್ಲ ಕವನವಾಗಲಿಲ್ಲ

ನಾ ದೊಡ್ಡ ಕವಿ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದೆ

 

ಲೇಖನ ಹಿಡಿದು ಲೇಖನಿ ಬರೆದಾಯಿತು

ಸಾಹಿತ್ಯ ಬರೆದು ಬರೆದು ನಾನಾಗಲಿಲ್ಲ ಕವಿ

ಅನ್ನಿಸುತ್ತಿತ್ತು ಆದೇ ನೆನೋ ಬರೀ ಭಾವಜೀವಿ.

-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್