ಸುಂದರ ಪಂದ್ಯ
ಕವನ
ಎಲೆಗಳ ಜೊತೆಯಲಿ ಹೂಗಳಿಗೀದಿನ
ನಡೆದಿಹ ಚಂದದ ಪಂದ್ಯವಿದು
ಎಲೆಗಳ ಲೆಕ್ಕವ ಮೀರಿಸಿ ಬಿರಿಯುವ
ಹೂಗಳ ಛಲವಿದು ಕಂಡಿಹುದು
ತರುವನು ಮರೆಸಲು ಪಣವನು ತೊಟ್ಟಿವೆ
ಅರಳಿದೆ ಹೂಗಳು ಘಮ ಘಮಿಸಿ
ಸುಂದರವೆನ್ನುವ ಪದವಿದು ಸಾಲದು
ಬಣ್ಣಿಸೆ ಕೊರತೆಯ ಪದವೆನಿಸಿ
ಬಯಲಿನ ನಡುವಲಿ ಮೊಳೆತಿಹ ಗಿಡವಿದು
ಹರಡಿದೆ ಕೊಂಬೆಯ ಸೊಗಸಾಗಿ
ಹಸಿರಿನ ಎಲೆಗಳ ಪರದೆಯಲಿರಿಸಿದೆ
ಗಿಡದಲಿ ತುಂಬಿದ ಹೂವಾಗಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಅಂತರ್ಜಾಲ
ಚಿತ್ರ್
