ಹನಿಗಳ ಲೋಕದಲ್ಲಿ...

ಹನಿಗಳ ಲೋಕದಲ್ಲಿ...

ಕವನ

ಪುರುಷರ ದಿನ!

ಪುರುಷರ ದಿನವಂತೆ

ಪುರುಷರ ದಿನ...!

ಕಂಡಿರುವಿರಾ

ಎಂದಾದರೂ

ಅವನ ಮುಖದಲಿ

ಹರುಷ...?

 

ಹುಟ್ಟಿನಿಂದ

ಸಾಯುವವರೆಗೂ

ಬರೀ ಕ್ಲೇಶ...

ಓ ಪುರುಷ- 

ನೀನೆಲ್ಲಿ ಕಂಡೆಯೋ

ಸಂತೋಷ...!?

***

ಅತ್ಯುತ್ತಮ ತಂಡ-ಭಾರತ 

ಈ ಬಾರಿ ವಿಶ್ವ ಕಪ್

ಸೋತರೇನು?

ಭಾರತೀಯರದು

ಪ್ರಪಂಚದ

ಅತ್ಯುತ್ತಮ

ತಂಡವೇ ಬಿಡಿ...

 

ಇದಕಿಂತಲೂ

ಹೆಚ್ಚಾಗಿ

ನಾವು ಗೆಲ್ಲಲು

ಹೊರಟಿಹೆವು

ವಿಶ್ವ ಭಾತೃತ್ವವೆಂಬ

ಹೃದಯದ ಗುಡಿ!

***

ಸ್ನೇಹಿತರು! 

ಸಿದ್ರಾಮಣ್ಣ

ಡಿಕೆಶಿ-ಕುಮಾರಣ್ಣ

ಮೂವರೂ ರಾಜಕೀಯ

ಗರಡಿಯಿಂದ

ಬಂದವರೆ;ಅತ್ಯಾಪ್ತ 

ಸ್ನೇಹಿತರಾಗಿದ್ದವರೇ...

 

ಈಗ ಪರಸ್ಪರ

ದೋಷಾರೋಪಣೆ?

ಇದು-ಹಣ;ಅಧಿಕಾರಗಳ

ಸ್ಥಾನಪಲ್ಲಟವಷ್ಟೇ;

ನಾಳೆ ಮತ್ತೆ ಹೆಗಲ ಮೇಲೆ

ಕೈ ಹಾಕುವವರೇ!

***

ಯಾರಿಟ್ಟರೀ ದಿನ...? 

ವರುಷದ

ಒಂದೊಂದು

ದಿನವೂ

ಒಬ್ಬೊಬ್ಬರ

ದಿನದ ವಿಶೇಷ

ಆಚರಣೆ...

 

ವರುಷವನು ಹಿಗ್ಗಿಸಿ

ಸಾವಿರ ದಿನ

ಮಾಡಿದರೆ-

ಆಚರಿಸಬಹುದು

ಕೈಗೊಂದು ಕಾಲ್ಗೊಂದು

ದಿನಾಚರಣೆ!

***

ಚೆಂದದ ಒಳಗೆ...

ಬಾನಿನಲಿ

ಚೆಂದದ ಸೊಬಗಿನಲಿ

ಮಿನುಗಿ-ನಗುತಿಹ

ಆ ನಕ್ಷತ್ರವನು

ಕಂಡೆಯಾ

ಕಂದ...

 

ಅದರಂತರಾಳದಲಿ

ಕುದಿಯುತಿಹ ಅನಿಲಗಳ

ಉಷ್ಣತೆ-ಒತ್ತಡಗಳ

ತುಮುಲವನು

ನೀನರ್ಥಮಾಡಿಕೋ

ಎಂದ!

***

ಬಫೂನ್ಸ್ 

ರಾಜಕೀಯ-

ಹಣ ದೋಚುವ

ದೋಷಾರೋಪಣೆ

ಮಾಡುವ

ಗ್ರೇಟ್ ಗ್ರ್ಯಾಂಡ್

ಸರ್ಕಸ್...

 

ಓಟು ಹಾಕಿ

ಪೇಪರ್ನಲಿ ಓದಿ

ಟಿ ವಿಯಲಿ ನೋಡಿ-

ಪೆದ್ದು ಪೆದ್ದಾಗಿ

ನಲಿಯುವ

ನಾವೇ ಬಫೂನ್ಸ್!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್