ಪ್ರೀತಿಯ ಬುತ್ತಿ
ಕವನ
ಜಳಕಾವ ಮುಗಿಸ್ಕೊಂಡು ನಾಷ್ಟಕ್ಕೆ ಮಾಡಿವ್ನಿ
ಕಾಳುಗಳ ಹಾಕಿರುವ ಚಿತ್ರಾನ್ನ
ನೆತ್ತೀಯ ಮೇಲಿಂದ ಸುಡುತಾನೆ ನೇಸರನು
ಆಯ್ತಲ್ಲ ಬಲುಬೇಗ ಮಧ್ಯಾಹ್ನ
ಕುಡುಗೋಲು ಹಿಡ್ಕೊಂಡು ಹೋಗವ್ನೆ ಯಜಮಾನ
ತೋಟಾದ ಕಳೆಯ ತೆಗೆಯಾಕ
ಬೆಳಗಾನ ಹೋದವ್ನು ದುಡಿತಾನೆ ಉಳಿದವ್ನೆ
ಉಣ್ಣಾಕ ಮನೆಗೆ ಬಂದಿಲ್ಲ
ಎಷ್ಟೊಂದು ಹಸಿವಲ್ಲಿ ಕೂತಿಹನೋ ನನ್ನ ರಾಯ
ಬುತ್ತೀಯ ತೋಟಕ್ಕೆ ಒಯ್ತೀನಿ
ದೇಹಕ್ಕೆ ಬಲವೀಯೆ ದಾಹಕ್ಕೆ ಕುಡಿಯೋಕೆ
ಜೊತೆಯಲ್ಲಿ ಒಂದಿಷ್ಟು ಹಾಲನ್ನು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
