ಬೆಂಗ್ಳೂರಲ್ಲಿ ಕಂಬಳ
ಕವನ
ಕೊಬ್ಬಿದ ಕೋಣಗಳೆರಡರ ಓಟವು
ಹಬ್ಬವು ನೋಡುವ ಕಣ್ಗಳಿಗೆ
ನಮ್ಮಯ ನಾಡಿನ ಜನಪದದಾಟವು
ಗಮ್ಮತ್ತೀವುದು ಮನಗಳಿಗೆ
ಕೋಣದ ಜೋಡಿಗೆ ನೊಗವಿದೆ ಹೆಗಲಿಗೆ
ಬಾಣದ ವೇಗವು ಗುರಿಯೆಡೆಗೆ
ನಮ್ಮಯ ನಾಡಲಿ ಮನೆಮಾತಾಗಿದೆ
ಹೆಮ್ಮೆಯು ನಮ್ಮ ಕರಾವಳಿಗೆ
ರೋಚಕ ಎನಿಸುವ ಆಟದ ವೈಖರಿ
ಯೋಚನೆ ಏತಕೆ ನೋಡುಗಗೆ
ನಾಡಿನ ಮಿತಿಯನು ಮೀರಿದ ಕ್ರೀಡೆಯು
ಓಡುತ ಬಂದಿದೆ ಬೆಂಗ್ಳೂರ್ಗೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
