ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧.

ಹಣ್ಣುಗಳು ಸಿಹಿಯಾಗಿದ್ದರು ಒಳಗೊಳಗೆ ಹುಳಗಳು ಇರಬಹುದು ಸತಿಯೆ

ಕಣ್ಣುಗಳು ಸುಂದರವಾಗಿದ್ದರು ಸುತ್ತಲು ಕಲೆಗಳು ಮೂಡಬಹುದು ಸತಿಯೆ

 

ಓಡುತ್ತಲೇ ಅವನು ಗಟ್ಟಿಯಾಗಿ ಅವಳ ತಬ್ಬಿ ಹಿಡಿದ ಯಾಕೋ ಕಾಣೆ

ಮನದೆನ್ನೆಯ ಕಂಪಲಿ ಸುವಾಸನೆಯ ಅಲೆಗಳು ಏಳಬಹುದು ಸತಿಯೆ

 

ಒಳ್ಳೆಯ ಮನುಷ್ಯರು ಬರುವವರೆಗೂ ಪ್ರೀತಿಯ ದಾರಿಯನ್ನು ಕಾಯೋಣ

ಕೆಟ್ಟವರ ಜಗತ್ತಿನಲ್ಲಿ ಕೆಲವೊಂದು ಚಿಗುರಿದ ಮರಗಳು ಕಾಣಬಹುದು ಸತಿಯೆ

 

ಹಸಿವು ಎಲ್ಲರಲ್ಲೂ ಇದೆ ಹಾಗೆಂದು ಯಾರೂ ಹೇಳಿಕೊಳ್ಳುವುದ ನಾನು ಕಾಣೆ

ಜೀವನದ ಸಂಜೆಯಲಿ ನಮ್ಮ ಜೊತೆಗೆ ಬೇರೆ ಆತ್ಮಗಳು ಇರಬಹುದು ಸತಿಯೆ

 

ಕವಿತೆಗೆ ಬಣ್ಣವನು ಕಟ್ಟಿ ಹಾಡಿದಂತೆ ನಮ್ಮ ಹೃದಯದೊಳಗೆ ಇಹನು ಈಶಾ

ಹಳತು ವಿಷಯವ ಬದಿಗಿಟ್ಟು ಇಂದಲ್ಲ ನಾಳೆ ಬಂಧುಗಳು ಸೇರಬಹುದು ಸತಿಯೆ

***

ಗಝಲ್ ೨

ಮಾತನಾಡದೆ ಮಲಗಿದ ಶವದ ಬಾಯಿಯಿಂದ ಪಿಸುಮಾತು ಕೇಳಿಸುತ್ತದೆ

ಸ್ಮಶಾನದಲ್ಲಿಯ ಮೂಲೆಯ ಗೋರಿಯೊಳಗಿಂದ ಪಿಸುಮಾತು ಕೇಳಿಸುತ್ತಿದೆ

 

ರಾತ್ರಿ ಹನ್ನೆರಡರ ಸಮಯ ಸ್ವಾತಂತ್ರ್ಯ ಸಿಕ್ಕಿತೆಂದು ಕೇಕೆಯ ಹಾಕಿ ನಲಿದ ನೆನಪು

ಸ್ವಾತಂತ್ರ್ಯ ಹರಣವಾದದ್ದೂ ಬಹುತೇಕ ಹಿರಿಯರಿಂದ ಪಿಸುಮಾತು ಕೇಳಿಸುತ್ತಿದೆ

 

ಪ್ರೀತಿಯೊಳಗಿನ ಅಮಲಿನ ಧ್ವನಿಯೆಲ್ಲವೂ ಕೇಳಿಸಿಕೊಂಡದ್ದು ಮಧ್ಯರಾತ್ರಿಯಲ್ಲಿ

ಉಪ್ಪರಿಗೆಯ ಕೋಣೆಯಲ್ಲಿ ಮಲಗಿದ ಪ್ರೇಮಿಗಳಿಂದ ಪಿಸುಮಾತು ಕೇಳಿಸುತ್ತಿದೆ

 

ನಿರೋಗಿಗಳು ಈ ಜಗದಗಲದ ಮೂಲೆಯಲ್ಲಿ ಯಾರಿಹರು ಬಲ್ಲವರು ಹೇಳುವಿರಾ

ಜೀವನದ ಕೊನೆಯ ಕ್ಷಣದಲ್ಲಿ ರೋಗಿಗಳಿಗೆ ದೇವರಿಂದ ಪಿಸುಮಾತು ಕೇಳಿಸುತ್ತಿದೆ

 

ಕರ್ಮಗಳಿಗೆ ಅನುಗುಣವಾಗಿಯೇ ಜೀವಿತದಲ್ಲಿ ಬದುಕು ಸಾಗುತ್ತಿದೆ ನೋಡು ಈಶಾ

ಐಕ್ಯತೆಯಿಲ್ಲದ ಮನುಜರ ಬೇಜವಾಬ್ದಾರಿ ನಟನೆಯಿಂದ ಪಿಸುಮಾತು ಕೇಳಿಸುತ್ತಿದೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್