ಕೆಲವು ಚಟಾಕಿಗಳು

ಕೆಲವು ಚಟಾಕಿಗಳು

ಕವನ

೧. ತರ್ಜುಮೆ

ಇನಿಯ ಬರೆದ ಪ್ರೇಮಪತ್ರ

ಇಂಗ್ಲೀಷ್ ನಲ್ಲಿ

ತರ್ಜುಮೆ ಮಾಡಿಸಲಿ ಯಾರ ಹತ್ರ

೨. ಕಡ್ಡಾಯ

ದ್ವಿಚಕ್ರ ವಾಹನದಲ್ಲಿ ಕಡ್ಡಾಯ ಶಿರಸ್ತ್ರಾಣ

ತಪ್ಪಿದರೆ

ಅನ್ಯರಿಗೆ ಅಡವಿಟ್ಟಂತೆ ನಿನ್ನ ಪ್ರಾಣ

೩. ಫರ್ಮಾನು

ತಡೆಯದಿರೆಂದು ನನ್ನಾಕೆಯ ಫರ್ಮಾನು

ಇಲ್ಲ

ಬಸ್ ತನಕ ಬಂದು ಬೀಳ್ಕೊಡುವೆ ನಾನು

೪. ರಾಜಕೀಯ

ಒಂದು ಸಮಾಜಸೇವೆ ರಾಜಕೀಯ

ಬದಲಾಗಿದೆ

ಈಗ ಸ್ವಹಿತಾಸಕ್ತಿಯೇ ಮೊದಲ ಧ್ಯೇಯ

೫. ಹೆಂಡತಿ

ಹೆಂಡತಿ ನಕ್ಕರೆ ಮನೆಯೇ ನಾಕ

ಮುನಿದರೆ

ಎಲ್ಲಾ ಇದ್ದರೂ ಬರಿಯ ನರಕ

೬. ಬಹುಮಾನ

ಬಹುಮಾನ ದೊರೆತು ಹೂವಾಯ್ತು ಮನಸು

ಎಚ್ಚರವಾಯ್ತು

ನಾನು ಕಂಡದ್ದೆಲ್ಲಾ  ಕನಸು

೭. ಸೂಚನೆ

ತವರಿಂದ ಮರಳಿದಳು ನೀಡದೆಯೆ ಸೂಚನೆ

ರೇಗಿದಳು

ಸಂತೆಯಂತಾಗಿತ್ತು ನಮ್ಮ ಮನೆ

೮. ಗೊತ್ತಿರಲಿಲ್ಲ

ಸಿಗರೇಟು ಸೇದಿದರೆ ಮುನಿವಳೆಂದು ಗೊತ್ತಿರಲಿಲ್ಲ

ಸೇದಿದೆ

ಉರಿಗಣ್ಣಿಗೆ ಹೆದರಿ ನಾನಿಲ್ಲಲಿಲ್ಲ

೯. ಪಲಾಯನ

ಪಲಾಯನ ಎಂಬ ಪದ ನನ್ನ ಬದುಕಿನಲ್ಲೆ ಇಲ್ಲ

ಆದರೆ

ಸಮಾನಾರ್ಥಕ ಪದಗಳು ಬೇರೆ ಉಂಟಲ್ಲ

೧೦. ನದಿ

ನದಿಯಂತೆ ಹರಿಸಿದಳು ಕಣ್ಣೀರು

ಕರಗಿದೆ

ನೋಡಿದರೆ ಎರಚಿಕೊಂಡ ತಣ್ಣೀರು

೧೧. ಕಡಲಿನ ಅಲೆ

ಕಡಲಿನ ಅಲೆ ಬರುತ್ತಿತ್ತು ದಡಕ್ಕೆ

ಮೈಮರೆತಿದ್ದೆ

ಬಂದು ಬಡಿಯಿತು ಬುಡಕ್ಕೆ

೧೨. ವ್ಯವಹಾರ

ಎಲ್ಲಾ ಬಂಧಗಳೂ ಆದರೆ ವ್ಯವಹಾರ

ಉಳಿಯದು

ಕೂಡಿ ಬಾಳುವ ಸಂಸಾರ.

-ಪೆರ್ಮುಖ ಸುಬ್ರಹ್ಮಣ್ಯ ಭಟ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್