ರುಚಿ ಸಂಪದ

  • ಹಸಿ ಮೆಣಸಿನಕಾಯಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಅನ್ನ ಮಾಡುವಾಗ ಸ್ವಲ್ಪ ನೀರು ಜಾಸ್ತಿ ಹಾಕಿ ಗಂಜಿ ಬಸಿದಿಟ್ಟುಕೊಳ್ಳಿ. ಗಂಜಿ ತಣ್ಣಗಾದನಂತರ ಅದಕ್ಕೆ ಹುಳಿಮೊಸರು, ಕಾಯಿಹಾಲು ಮತ್ತು ಹೆಚ್ಚಿಟ್ಟುಕೊಂಡ ಹಸಿಮೆಣಸಿನ ಕಾಯಿಯನ್ನು ಹಾಕಿ. ಈ ಮಿಶ್ರಣಕ್ಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಿಸಿ. ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ಧಿಡೀರ್ ಸಾರು ರೆಡಿ.

    ಕಾಯಿಹಾಲು ಮಾಡುವ ವಿಧಾನ:
    ತೆಂಗಿನ ತುರಿಗೆ ಸ್ವಲ್ಪ ನೀರನ್ನು ಹಾಕಿ ಹಿಸುಕಿ, ಹಿಂಡಿ ಸೋಸಿ ಹಾಲನ್ನು ತೆಗೆಯಿರಿ. ಉಳಿದ ಚರಟವನ್ನು ಪಲ್ಯಕ್ಕೆ ಉಪಯೋಗಿಸಬಹುದು…

    0
  • ಹಿತುಕಿದಹಿತುಕಿದ ಅವರೇ ಕಾಳನ್ನು ಶುಭ್ರವಾದ ತೆಳು ಬಟ್ಟೆಯ ಮೇಲೆ ಹರಡಿ ಗಾಳಿಯಲ್ಲಿ ಆರ ಹಾಕಿ. ನೀರೆಲ್ಲ ಆರಿದನಂತರ ತೆಗೆದಿಟ್ಟು ಕೊಳ್ಳಿ. ಒಣ ಕೊಬ್ಬರಿಯನ್ನು 1 ಇಂಚಿನಷ್ಟು ಉದ್ದಕ್ಕೆ ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ . ಅವರೇ ಕಾಳು, ಹುರಿಗಡಲೆ ಮತ್ತು ಕಡಲೆ ಬೀಜವನ್ನು ಬೇರೆ ಬೇರೆಯಾಗಿ ಎಣ್ಣೆಯಲ್ಲಿ ಕರಿದು ತೆಗೆದಿಟ್ಟುಕೊಳ್ಳಿ. ಬಾಣಲೆಯನ್ನು ಸ್ಟೌ ಮೇಲಿಟ್ಟು ಎರಡು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಹಸಿಮೆಣಸಿನ ಕಾಯಿ, ಕರಿಬೇವಿನ ಎಸಳುಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. ನೀರಿನಂಶ ಪೂರಾ ಹೋದನಂತರ ತೆಳುವಾಗಿ ಕತ್ತರಿಸಿಟ್ಟುಕೊಂಡ ಒಣ ಕೊಬ್ಬರಿಯನ್ನು ಹಾಕಿ ಬಿಸಿ ಮಾಡಿ. ನಂತರ…

    0
  • ಚಕ್ಕೆ, ಲವ‌oಗ‌, ಜಾಪತ್ರೆ ಮತ್ತು ಗೋಡ‌oಬಿಯನ್ನು 1 ಘ‌oಟೆ ನೀರಿನಲ್ಲಿ ನೆನೆಸಿಡಿ. (ನೆನೆಸದಿದ್ದರೆ ಒಗ್ಗರಣೆ ಮಾಡುವಾಗ‌ ಕರಟಿ ಹೋಗುತ್ತದೆ) ಬೆಳ್ಳುಳ್ಳಿಯನ್ನು ಬಿಡಿಸಿಟ್ಟು ಕೊಳ್ಳಿ. ಪುದಿನ‌ ಸೊಪ್ಪನ್ನು ಬಿಡಿಸಿಕೊoಡು ಚೆನ್ನಾಗಿ ತೊಳೆದು ಶುಭ್ರವಾದ‌ ತೆಳು ಬಟ್ಟೆಯ‌ ಮೇಲೆ ಹರಡಿ. ತರಕಾರಿಗಳನ್ನು ಹೆಚ್ಚಿಟ್ಟು ಕೊಳ್ಳಿ. (ಅಲoಕಾರಿಕವಾಗಿ ಹೆಚ್ಚಿದರೆ ಚೆನ್ನಾಗಿರುತ್ತದೆ). ಈರುಳ್ಳಿಯನ್ನು ಸ್ಲೈಸ್ ಮಾಡಿಟ್ಟುಕೊಳ್ಳಿ.

    0
  • ಬದನೆಯನ್ನು ಗ್ಯಾಸ್ ಸ್ಟೌ ಮೇಲಿಟ್ಟು ಕಾಯಿಸಿ. (ಹಿoದೆಲ್ಲ‌ ನಮ್ಮ‌ ಊರಿನಲ್ಲಿ ಒಲೆಯ‌ ಕೆoಡದ‌ ಮೇಲಿಟ್ಟು ಕಾಯಿಸುತ್ತಿದ್ದರು). ಚೆನ್ನಾಗೆ ಬೆoದ‌ ಬದನೆ ತಣ್ಣಗಾದ‌ ನ‌oತರ‌ ಮೇಲಿನ‌ ಸಿಪ್ಪೆಯನ್ನು ಸುಲಿದು ತೆಗೆದು ಒಳಗಿನ‌ ತಿರುಳನ್ನು ಬಿಡಿಸಿಕೊಳ್ಳಿ. (ಸಿಪ್ಪೆ ಸುಲಭವಾಗಿ ಸುಲಿಯಲು ಬರುತ್ತದೆ). ಬಿಡಿಸಿದ‌ ಬದನೆಯನ್ನು ಚೆನ್ನಾಗಿ ಕಿವಿಚಿಕೊಳ್ಳಿ. ಹಸಿ ಮೆಣಸಿನಕಾಯಿಯನ್ನೂ ಸಹ‌ ಕಿವಿಚಿದ‌ ಬದನೆಯೊoದಿಗೆ ನುರಿಯಿರಿ. ನ‌oತರ‌ ಈ ಮಿಶ್ರಣಕ್ಕೆ ಹುಣಿಸೆ ರಸ‌ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಮೇಲೆ ಹೇಳಿದ‌ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. ನ‌oತರ‌ ಕೊತ್ತ‌oಬರಿ ಸೊಪ್ಪಿನಿoದ‌ ಅಲ…

    0
  • ಕೊತ್ತ‌))oಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಶುಭ್ರವಾದ‌ ತೆಳು ಬಟ್ಟೆಯ‌ ಮೇಲೆ ಹರಡಿ. ನೀರು ಪೂರಾ ಹೋದ‌ ನ‌oತರ‌ ಬಿಡಿಸಿ ಸಣ್ಣದಾಗೆ ಹೆಚ್ಚಿಟ್ಟುಕೊಳ್ಳಿ. ಒಣ‌ ಕೊಬ್ಬರಿಯನ್ನು ತುರಿದಿಟ್ಟುಕೊಳ್ಳಿ. ನ‌oತರ‌ ಮೇಲೆ ಹೇಳಿದ‌ ಎಲ್ಲಾ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ನೀರು ಸೇರಿಸದೆ ರುಬ್ಬಿ. ನುಣ್ಣಗಾದ‌ ನ‌oತರ‌ ಗಾಳಿಯಾಡದ‌ ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳಿ. ಬಿಸಿ ಬಿಸಿ ಅನ್ನಕ್ಕೆ ಈ ಚಟ್ನಿ ಮತ್ತು ಕೊಬ್ಬರಿ ಎಣ್ಣೆಯನ್ನು ಹಾಕಿ ಕಲಸಿ ತಿನ್ನಲು ಬಲು ರುಚಿಯಾಗಿರುತ್ತದೆ. ಸ್ವಲ್ಪವು ನೀರು ಸೇರಿಸದೆ ತಯಾರಿಸುವುದರಿoದ‌ 10 ರಿoದ‌ 15 ದಿನಗಳವರೆಗೆ ಕೆಡದೆ ಇರುತ್ತದೆ.

    0
  • ಕಡಲೆಬೇಳೆಯನ್ನು ಬಾಂಡಲೆಯಲ್ಲಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಕೊಬ್ಬರಿ ತುರಿ, ಹಾಗು ಕರಿಬೇವಿನ ಸೊಪ್ಪನ್ನು ಹುರಿದು ಬಿಸಿ ಮಾಡಿಕೊಳ್ಳಿ. ಹಾಗೆ (ಒಣ) ಕೆಂಪುಮೆಣಸಿನಕಾಯಿ ಸಹ ಚೆನ್ನಾಗಿ ಬಿಸಿಮಾಡಿ. ನಂತರ ಕಡಲೆಬೇಳೆ, ಕೊಬ್ಬರಿ ತುರಿ, ಕೆಂಪು ಮೆಣಸಿನಕಾಯಿ, ಉಪ್ಪು , ಹುಣಸೆ ಹಣ್ಣು , ಬೇಕಾದಷ್ಟು ನೀರು ಎಲ್ಲವನ್ನು ಮಿಕ್ಸಿಯಲ್ಲಿ ಹಾಕಿ ತಿರುಗಿಸಿ. ನೀರನ್ನು ಹೆಚ್ಚಿಗೆ ಹಾಕಬೇಡಿ, ಸ್ವಲ್ಪ ಗಟ್ಟಿಯಾಗಿಯೆ ಇರಲಿ, ಹಾಗೆ ಪೂರ್ತಿ ಪೇಸ್ಟಿನಂತೆ ರುಬ್ಬದೆ ಸ್ವಲ್ಪ ತರಿ ತರಿಯಾಗೆ ತೆಗೆಯಿರಿ, ಚಟ್ನಿಯನ್ನು ಪಾತ್ರೆಗೆ ಹಾಕಿ. ನಂತರ ಸ್ವಲ್ಪ ಎಣ್ಣೆ, ಸಾಸುವೆ, ಇಂಗು ಹಾಕಿ ಒಗ್ಗರಣೆ ಮಾಡಿ ಚಟ್ನಿಗೆ ಹಾಕಿ…

    0
  • ಸಕ್ಕರೆ ಹಾಗು ಸ್ವಲ್ಪ ನೀರು (ಅರ್ದ ಅಳತೆ) ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಸಣ್ಣ ಉರಿಯ ಒಲೆಯ ಮೇಲಿಡಿ, ನೀರಿನಲ್ಲಿ ಸಕ್ಕರೆ ಪೂರ್ಣ ಕರಗಿದ ನಂತರ ಅರ್ದ ಲೋಟದಷ್ಟು ತುಪ್ಪವನ್ನು ಅದರಲ್ಲಿ ಹಾಕಿ, ಏಲಕ್ಕಿ ಪುಡಿಯನ್ನು ಸೇರಿಸಿ. ದೊಡ್ಡ ಚಮಚ ಅಥವ ಕೋಲಿನಿಂದ ಸಕ್ಕರೆ ಮಿಶ್ರಣದಲ್ಲಿ ಆಡಿಸುತ್ತ ಇರಿ. ಒಂದೆರಡು ನಿಮಿಷ ತುಪ್ಪ ಬೆರೆತ ನಂತರ ಕಡ್ಲೆಹಿಟ್ಟನ್ನು ಅದರಲ್ಲಿ ಹಾಕಿ ಅರ್ದ ನಿಮಿಷ ಹಾಗೆ ಬಿಡಿ, ನಿಧಾನವಾಗಿ ಅದನ್ನು ತಿರುಗಿಸಿತ್ತ ಹೋಗಿ (ರಾಗಿ ಮುದ್ದೆ ಮಾಡುವ ರೀತಿಯಂತೆ). ಈಗ ಸ್ವಲ್ಪ ಸ್ವಲ್ಪ ತುಪ್ಪ ಅದರಲ್ಲಿ ಬೆರೆಸುತ್ತ, ಕೋಲಿನಿಂದ ತಿರುಗಿಸುತ್ತ ಇರಿ. ತುಪ್ಪವೆಲ್ಲ ಮುಗಿಯುತ್ತ ಬರುತ್ತಿರುವಂತೆ, ಸಕ್ಕರೆ…

    0
  • ನಮಗೆ ಬೇಕಿರುವ ಖಾರಕ್ಕೆ ತಕ್ಕಂತೆ ಹಸಿರುಮೆಣಿಸಿನಕಾಯಿ ಮತ್ತು ಶುಂಠಿಯ ಪೇಸ್ಟ್ ಮಾಡಿ ತೆಗೆದಿಟ್ಟುಕೊಳ್ಳಬೇಕು. ಬಾಸ್ಮತಿ ಅಕ್ಕಿಯನ್ನು ತೊಳೆದು ಒಂದರ್ಧ ತಾಸು ನೆನೆಸಿಟ್ಟುಕೊಳ್ಳುವುದು ಉತ್ತಮ.

    ಮೆಂತ್ಯದ ಸೊಪ್ಪನ್ನು ಕುದಿಯಲು ಬಂದಿರುವ ನೀರಿನಲ್ಲಿ ಒಂದಷ್ಟು ಹೊತ್ತು ನೆನೆಸಿ ಬ್ಲಾಂಚ್ ಮಾಡಿಟ್ಟುಕೊಳ್ಳಬೇಕು. ಕುಕ್ಕರಿನಲ್ಲಿ ಸ್ವಲ್ಪ ಮಾತ್ರ ಎಣ್ಣೆಯನ್ನು ಕಾಯಿಸಿ ಅದರಲ್ಲಿ ಹಸಿರುಮೆಣಸಿನಕಾಯಿ ಮತ್ತು ಶುಂಠಿಯ ಪೇಸ್ಟ್, ಪಲಾವ್ ಎಲೆ ಹಾಕಿ ಹುರಿದಿಟ್ಟುಕೊಳ್ಳಬೇಕು. ತದನಂತರ ಮೆಂತ್ಯದ ಸೊಪ್ಪು, ಬಟಾಣಿ, ಬಾಸ್ಮತಿ ಅಕ್ಕಿಯನ್ನು ಸೇರಿಸಿ ಒಂದೆರಡು ನಿಮಿಷ ಹುರಿದಿಟ್ಟುಕೊಳ್ಳಬೇಕು. ಅಳತೆಗೆ ತಕ್ಕಂತೆ…

    0
  • ಉಳಿದ ಸಾಮಗ್ರಿಗಳು :

    ನೆನಸಿದ ಹುಣಸೇ ಹಣ್ಣು (ಅಥವಾ ಹುಣಸೇ ರಸ) - 1/2 ಚಮಚ
    ಉಪ್ಪು - ರುಚಿಗೆ ತಕ್ಕಷ್ಟು
    ಎಣ್ಣೆ - 1 ಚಮಚ

    ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಕಾದನಂತರ ಮೊದಲು ತೊಗರಿಬೇಳೆ ಹಾಕುವುದು. ಬೇಳೆ ಕೆಂಪಗಾಗುತ್ತಿದಂತೆ, ಮೆಣಸು,ಶುಂಠಿ,ಬೆಳ್ಳುಳ್ಳಿ,ಈರುಳ್ಳಿ ಒಂದರನಂತರ ಒಂದನ್ನು ಹಾಕಿ ಎಣ್ಣೆಯಲ್ಲಿ 3-4 ನಿಮಿಷ ಹುರಿಯಬೇಕು.   ಈ ಮಿಶ್ರಣವನ್ನು ಮಿಕ್ಸರಿನಲ್ಲಿ ಹಾಕಿ,ಕಾಯಿತುರಿ,ಹುಣಸೆಹಣ್ಣು,ಉಪ್ಪಿನೊಂದಿಗೆ ಹದಕ್ಕೆ ಬೇಕಾಗುವಷ್ಟು ನೀರು (1 ಬಟ್ಟಲು) ಹಾಕಿ ನುಣ್ಣಗೆ ರುಬ್ಬಬೇಕು.ಕೊತ್ತಂಬರಿ/ಪುದೀನಾ ಸೊಪ್ಪು ಕೂಡ ರುಬ್ಬುವ ಮುಂಚೆ ಹಾಕಬಹುದು.

    ಒಗ್ಗರಣೆ (…

    0
  • ೧. ಬದನೇಕಾಯಿಗಳನ್ನು ೪ ತುಂಡು ಮಾಡಿ
    ೨.ತವ(deep fry pan)ದಲ್ಲಿ ಎಣ್ಣೆ ಬಿಸಿ ಮಾಡಿ
    ೩. ಬದನೇಕಾಯಿಯನ್ನು ಎಣ್ಣೆಯಲ್ಲಿ ಬಾಡಿಸಿ

    ಬದನೇಕಾಯಿಯನ್ನು ತೆಗೆದು ಪಕ್ಕಕ್ಕಿಡಿ.

    ೪. ಒಂದು ಕಪ್ ಟೊಮಟೊ ಮತ್ತು ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ
    ೫. ಬಾಣಲೆಯಲ್ಲಿ ಉಳಿದ ಎಣ್ಣೆಯನ್ನು ಬಿಸಿ ಮಾಡಿ ಉಳಿದ ಈರುಳ್ಳಿಯನ್ನು ಕೆಂಪಗಾಗುವಂತೆ ಹುರಿಯಿರಿ.
    ೬. ಟೊಮಾಟೊ ಸೇರಿಸಿ.
    ೭. ಗರಮ್ ಮಸಾಲಾ, ಮೆಣಸಿನ ಪುಡಿ, ಧನಿಯ ಪುಡಿ ಮತ್ತು ಉಪ್ಪು ಸೇರಿಸಿ.
    ೮. ಮಸಾಲೆ ದಪ್ಪವಾಗುವ ವರೆಗೆ ಬೇಯಿಸಿ
    ೯. ಹುರಿದ ಬದನೇಕಾಯಿ ಸೇರಿಸಿ ಐದು ನಿಮಿಷ ಬೇಯಿಸಿ
    ನಿಮಗೆ…

    2