ರುಚಿ ಸಂಪದ

  • ಬೇಯಿಸಿದ ಅಲೂಗಡ್ಡೆಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಎರಡು ಚಮಚ ಕಾರ್ನ್ ಫ್ಲೋರ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಸ್ಮಾಷ್ ಮಾಡಿಕೊಳ್ಳಬೇಕು. ಬೇಯಿಸಿದ ಮೊಟ್ಟೆಯನ್ನು ಎರಡು ಭಾಗ ಮಾಡಿ ಕತ್ತರಿಸಿ ಒಂದು ಭಾಗಕ್ಕೆ ಸ್ಮಾಷ್ ಮಾಡಿದ ಅಲೂಗಡ್ಡೆಯನ್ನು ಹಚ್ಚಿ. ಕಡಿಮೆ ಉರಿಯಲ್ಲಿ ಎಣ್ಣೆಯನ್ನು ಇಟ್ಟು ಫ್ರೈ ಮಾಡಬೇಕು. ಬಿಸಿ ಬಿಸಿ ಬೋಂಡಾ ರೆಡಿ. ಮೊಟ್ಟೆ ನಾಲಿಗೆಗೆ ಎಷ್ಟು ರುಚಿಯೋ ಆರೋಗ್ಯಕ್ಕೂ ಅಷ್ಟೇ ಹಿತಕರ.

    0
  • ಟೊಮ್ಯಾಟೋ ಕಾಯಿಯನ್ನು ತೊಳೆದು ಕತ್ತರಿಸಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಮಧ್ಯಕ್ಕೆ ಸೀಳಿಕೊಳ್ಳಿ. ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಸ್ಟೌ ಮೇಲಿಡಿ. ಎಣ್ಣೆ ಬಿಸಿಯಾದ ನಂತರ ಟೊಮ್ಯಾಟೋ ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. ಕೊನೆಯಲ್ಲಿ ಅರಿಶಿನ ಹಾಕಿ. ಚೆನ್ನಾಗಿ ಫ್ರೈ ಆದ ನಂತರ ಕೆಳಗಿಳಿಸಿ, ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ತಿರುವಿರಿ. ಟೊಮ್ಯಾಟೋ ಚೆನ್ನಾಗಿ ನುಣ್ಣಗಾದ ನಂತರ ಉಪ್ಪನ್ನು ಹಾಕಿ ಪುನಃ ಒಂದೆರಡು ಬಾರಿ ತಿರುವಿರಿ. ಈಗ ಈ ಮಿಶ್ರಣವನ್ನು ಒಂದು ಪುಟ್ಟ ಬೌಲಿಗೆ ಬಗ್ಗಿಸಿಕೊಳ್ಳಿ. ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. ದಿಢೀರ್ ಟೊಮ್ಯಾಟೋ ಕಾಯಿ ಚಟ್ನಿ…

    0
  • ಗೋಡಂಬಿಯನ್ನು ಹದವಾಗಿ ಹುರಿಯಿರಿ. ಗೋಡಂಬಿ ಮತ್ತು ಬಾದಾಮಿಯನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಟ್ಟುಕೊಳ್ಳಿ. ಏಲಕ್ಕಿಯನ್ನು ಪುಡಿ ಮಾಡಿಟ್ಟುಕೊಳ್ಳಿ. ಸಕ್ಕರೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಬಿಸಿಯಾದ ನಂತರ ಏಲಕ್ಕಿ ಪುಡಿಯನ್ನು ಮತ್ತು ಕಡಲೆ ಹಿಟ್ಟನ್ನು ಹಾಕಿ ಹುರಿಯಿರಿ. ಹುರಿದ ಪರಿಮಳ ಬಂದ ಮೇಲೆ ಕೆಳಗಿಸಿ (ಕಡಲೆ ಹಿಟ್ಟಿನ ಹಳದಿ ಬಣ್ಣವು ಹೊಂಬಣ್ಣಕ್ಕೆ ತಿರುಗಿರುತ್ತದೆ). ತಣ್ಣಗಾದ ನಂತರ ಸಕ್ಕರೆ ಪುಡಿ, ಗೋಡಂಬಿ ಮತ್ತು ಬಾದಾಮಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಗಟ್ಟಿಯಾದ ನಂತರ ಉಂಡೆ ಕಟ್ಟಿ.…

    3
  • ಪಾಲಕ್ ಸೊಪ್ಪನ್ನು ತೊಳೆದು ಬೇಯಿಸಿಟ್ಟುಕೊಳ್ಳಿ. ಸಣ್ಣ ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಲವಂಗ, ಚಕ್ಕೆ ಹಾಕಿ ಹುರಿಯಿರಿ. ಕೆಳಗಿಳಿಸುವ ಮೊದಲು ಹಸಿ ಮೆಣಸಿನ ಕಾಯಿ ಹಾಕಿ ಬಾಡಿಸಿ. ಹುರಿದ ಮಸಾಲೆ, ಈರುಳ್ಳಿ ಮತ್ತು ಬೇಯಿಸಿದ ಪಾಲಕ್ ಸೊಪ್ಪನ್ನು (ತಣ್ಣಗಾಗಿರಬೇಕು) ಮಿಕ್ಸಿಗೆ ಹಾಕಿ ನುಣ್ಣಗೆ ಅರೆಯಿರಿ. ಅಗಲ ಬಾಯಿಯ ಪಾತ್ರೆಯಲ್ಲಿ ಮುಕ್ಕಾಲು ಲೋಟ ನೀರು ತೆಗೆದುಕೊಂಡು, ಕಾರ್ನ್ ಫ್ಲೋರ್ ಹಾಕಿ ಬೆರೆಸಿ ಅದಕ್ಕೆ ಈ ಮಿಶ್ರಣ, ಉಪ್ಪು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ನಂತರ ಸ್ಟೌ ಮೇಲಿಟ್ಟು ಕುದಿಸಿ. ಕುದಿ ಬರುವವರೆಗೆ ತಳ ಹಿಡಿಯದಂತೆ ಮೊಗೆಚುತ್ತಿರಬೇಕು. ಕುದಿ ಬಂದ ನಂತರ ಕೆಳಗಿಳಿಸಿ,…

    0
  • ಹುಣಸೆ ಹಣ್ಣನ್ನು ಪುಟ್ಟ ಬೌಲಿನಲ್ಲಿ ಹಾಕಿ ನೆನೆಯಲು ಇಡಿ. ಬೆಲ್ಲವನ್ನು ಪುಡಿ ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಹಸಿ ಮೆಣಸಿನ ಕಾಯಿಯನ್ನು ನುರಿಯಿರಿ. ನಂತರ ಹುಣಿಸೆ ಹಣ್ಣನ್ನು ಕಿವುಚಿ ರಸವನ್ನು ಮಿಶ್ರಣಕ್ಕೆ ಬೆರೆಸಿ. ಕಾಯಿ ಹಾಲು, ಪುಡಿ ಬೆಲ್ಲ ಮತ್ತು ಉಪ್ಪನ್ನು ಹಾಕಿ ಕಲಕಿ. ಒಗ್ಗರಣೆಗೆ ಹೇಳಿದ ಸಾಮಗ್ರಿಗಳನ್ನೆಲ್ಲಾ ಹಾಕಿ ಒಗ್ಗರಣೆ ಮಾಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.... ಬಿಸಿ ಬಿಸಿ ಅನ್ನ, ತುಪ್ಪದೊಂದಿಗೆ ಸವಿಯಲು ಬಲು ರುಚಿ ಈ ದಿಢೀರ್ ಸಾರು. ...
    ಮಾಹಿತಿ : ಹಸಿ ಮೆಣಸಿನ ಕಾಯಿ ನುರಿದಾಗ ಕೈಗೆ ಹತ್ತಿದ ಖಾರ, ಹುಣಿಸೆ ಹಣ್ಣನ್ನು ಕಿವುಚಿದಾಗ…

    1
  • ಅಗಲ ಬಾಯಿಯ ಪಾತ್ರೆಯಲ್ಲಿ ಗೋಧಿ ಹಿಟ್ಟು, ಉಪ್ಪು, ಸಕ್ಕರೆ ಮತ್ತು ಸಬ್ಬಕ್ಕಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ನೀರು ಹಾಕಿ ಚೆನ್ನಾಗಿ ಕಲೆಸಿ. ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿ ತಟ್ಟೆಯಿಂದ ಮುಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿ ಚಪಾತಿ ಲಟ್ಟಿಸಿ ಬೇಯಿಸಿ. ಬಿಸಿ ಬಿಸಿ ಚಪಾತಿಯನ್ನು ಕಾಯಿ ಚಟ್ನಿಯೊಂದಿಗೆ ತಿನ್ನಲು ಬಲು ರುಚಿಯಾಗಿರುತ್ತದೆ.

    12
  • ಬೆಳ್ತಿಗೆ ಅಕ್ಕಿಯನ್ನು ಎರಡು ಗಂಟೆ ನೀರಿನಲ್ಲಿ ನೆನಸಿ. ನಂತರ ಚೆನ್ನಾಗಿ ತೊಳೆದು, 2 ಗಂಟೆ ನೆನೆಸಿದ ಉದ್ದಿನ ಬೇಳೆ, ಮೆಂತೆ ಹಾಗೂ ತೊಂಡೆಕಾಯಿ ಚೂರು, ಉಪ್ಪು ಹಾಕಿ ನಯವಾಗಿ ರುಬ್ಬಿ ಪಾತ್ರದಲ್ಲಿ ಹಾಕಿಡಿ. ಮಾರನೇ ದಿನ ತವಾ ಒಲೆಯ ಮೇಲಿಟ್ಟು ಎಣ್ಣೆ ಪಸೆ ಮಾಡಿ ನಂತರ ರುಬ್ಬಿದ ಹಿಟ್ಟು ಹಾಕಿ ದೋಸೆ ಹೊಯ್ಯಿರಿ. ನಂತರ ಕವುಚಿ ಹಾಕಿ ಎರಡು ಬದಿ ಬೇಯಿಸಿದರೆ ತೆಳ್ಳಗಿನ ಗರಿಗರಿಯಾದ ದೋಸೆ ತಿನ್ನಲು ಸಿದ್ಧ. ಹಣ್ಣಾದ ತೊಂಡೆಕಾಯಿಯಿಂದಲೂ ಇದೇ ರೀತಿ ದೋಸೆ ಮಾಡಬಹುದು. ಕಾಯಿಮೆಣಸಿನ ಚಟ್ನಿಯೊಂದಿಗೆ ಬಿಸಿ ದೋಸೆ ಸವಿಯಲು ರುಚಿ ಬಹಳ.

    0
  • ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಘಂಟೆ ನೆನೆಸಿ. ಕಡಲೇ ಬೇಳೆಯನ್ನು ತೊಳೆದು ನೆನೆಸಿ. ಹಸಿ ಮೆಣಸಿನಕಾಯಿ ಮತ್ತು ಕರಿ ಮೆಣಸು ಎರಡನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ ಚೆನ್ನಾಗಿ ನೆನೆದ ನಂತರ ನುಣ್ಣಗೆ ರುಬ್ಬಿ. ಹಿಟ್ಟು ತೆಳ್ಳಗೆ ನೀರಾಗಿ ಬರಿ ಅಕ್ಕಿ ದೊಸೆಗಿರುವಂತೆ (ನೀರು ದೋಸೆ) ಇರಬೇಕು. ಈ ಹಿಟ್ಟನ್ನು ಒಂದು ಅಗಲ ಬಾಯಿಯ ಪಾತ್ರೆಗೆ ಹಾಕಿ ಸ್ಟೌ ಮೇಲಿಟ್ಟು ತಳಹಿಡಿಯದಂತೆ ಮೊಗೆಚುತ್ತಿರಿ. ಹಿಟ್ಟು ಬೆಂದು ಮುದ್ದೆಯಾಗುತ್ತದೆ. ಈ ಮುದ್ದೆಗೆ ರುಬ್ಬಿದೆ ಮಸಾಲೆ, ಎಣ್ಣೆ, ಕಾಯಿ ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ನೆನೆಸಿದ ಕಡಲೇ ಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರ…

    10
  • ಚಿರೋಟಿ ರವೆ ಹಾಗೂ ಮೈದಾ ಹಿಟ್ಟನ್ನು ಮೆತ್ತಗೆ ಆಗುವ ರೀತಿಯಲ್ಲಿ ಕಲಸಿ. ಒಂದು ತೆಳುವಾದ ಬಟ್ಟೆಯಲ್ಲಿ ಸುತ್ತಿ ಒಂದು ಗಂಟೆ ಹಾಗೇ ಇಡಿ. ನಂತರ ಒಲೆಯ ಮೇಲೆ ಪಾತ್ರವನ್ನು ಇಟ್ಟು ತುರಿದ ಕಾಯಿ ಹಾಗೂ ಬೆಲ್ಲವನ್ನು ಹಾಕಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಉರಿ ಸಣ್ಣದಾಗಿರಲಿ, ಚೆನ್ನಾಗಿ ಪಾಕ ಬಂದ ನಂತರ ಇಳಿಸಿ.
    ಆರಿದ ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಕಲಸಿ ಇಟ್ಟಿರುವ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿ, ಮೊದಲೇ ಮಾಡಿಟ್ಟಿರುವ ಉಂಡೆಗಳನ್ನು ಮಧ್ಯದಲ್ಲಿ ಇಟ್ಟು, ಲಟ್ಟಣಿಗೆಯಿಂದ ಪುನಃ ಲಟ್ಟಿಸಿ. ನಂತರ ಕಾವಲಿಯಲ್ಲಿ ಹಾಕಿ ಎರಡೂ ಬದಿಯನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ, ನಂತರ…

    0
  • ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ ಹಾಕಿ ಹುರಿಯಿರಿ. ಕೊನೆಯಲ್ಲಿ ಹಸಿ ಮೆಣಸಿನ ಕಾಯಿ, ಚಗ್ತೆ ಸೊಪ್ಪಿನ ಎಲೆಗಳನ್ನು ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್ನು ಒಂದು ಪುಟ್ಟ ಪಾತ್ರೆಗೆ ತೆಗೆದು ಮೊಸರು ಮತ್ತು ಉಪ್ಪನ್ನು ಮಿಶ್ರ ಮಾಡಿ. ನಂತರ ಮೇಲೆ ಹೇಳಿದ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿ. ರುಚಿಯಾದ ಚಗ್ತೆ ಸೊಪ್ಪಿನ ತಂಬುಳಿ ರೆಡಿ....

    0