ಬ್ರೆಡ್ ಒಗ್ಗರಣೆ

ಬ್ರೆಡ್ ಒಗ್ಗರಣೆ

ಬೇಕಿರುವ ಸಾಮಗ್ರಿ
  • ಸ‍‍ಣ್ಣಗೆ ತುಂಡರಿಸಿದ ಬ್ರೆಡ್ - ೧ ಪ್ಯಾಕ್ ನಷ್ಟು  
  • ‍ಮಜ್ಜಿಗೆ - ೧/೪ ಕಪ್
  • ಕಾಯಿ ತುರಿ

ಒಗ್ಗರಣೆಗೆ: 

  • ‍ಕರಿಬೇವು
  • ಕೊತ್ತಂಬರಿ ಸೊಪ್ಪು 
  • ಸಾಸಿವೆ
  • ಜೀರಿಗೆ
  • ಉದ್ದಿನ ಬೇಳೆ
  • ಅರಸಿನ
  • ಸಣ್ಣಗೆ ತುಂಡರಿಸಿದ ಹಸಿರು ಮೆಣಸು - ಖಾರಕ್ಕೆ ತಕ್ಕಷ್ಟು 
  • ಎಣ್ಣೆ 

 

ತಯಾರಿಸುವ ವಿಧಾನ
  • ‍ಒಂದು ಬಾಣಲೆಯಲ್ಲಿ ಎಣ್ಣೆ (ನಿಮ್ಮ ರುಚಿಗೆ ತಕ್ಕಷ್ಟು) ಹಾಕಿ, ಒಲೆಯ ಮೇಲಿಡಿ 
  • ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ, ಮೆಣಸು, ಉದ್ದಿನಬೇಳೆ, ಕರಿಬೇವು ಸೇರಿಸಿ ಒಗ್ಗರಣೆ ಕೊಡಿ 
  • ಜೊತೆಗೆ ಅರಸಿನ ಸೇರಿಸಿ
  • ತುಂಡರಿಸಿದ ಬ್ರೆಡ್ ಹಾಕಿ, ‍ಮಜ್ಜಿಗೆ ಸೇರಿಸಿ, ಚೆನ್ನಾಗಿ mix ಮಾಡಿ
  • ಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ garnish ‍ಮಾಡಿ 

 

ಸಾಯಂಕಾಲಕ್ಕೆ ಸೂಕ್ತವೆನಿಸಿದ, ಜಟ್-ಪಟ್ ಅಡಿಗೆ ಇದು. 

ಮಾಡಿ ನೋಡಿ ನಿಮ್ಮ ಅನಿಸಿಕೆ ತಿಳಿಸಿ. ‍

Comments

Submitted by nageshamysore Thu, 09/26/2013 - 00:58

ವಾಹ್ ! ಕ್ರಿಯಾಶೀಲತೆಯ ಗಿರಣಿಯಲ್ಲಿ ಹೊಸ ಸರಳ ರುಚಿಗಳು ಸಾಲಾಗಿ ಬರುತ್ತಿರುವಂತೆ ಕಾಣುತ್ತಿದೆ - ಗಣೆಶರ ಬಿಸ್'ಕತ್ತಿನ' ಕೇಕು, ನಿಮ್ಮ ನೆಲಗಡಲೆ ಟಿಕ್ಕಿ, ಕ್ಯಾಬೇಜ್ ಗಟ್ಟಿ, ಈಗ ಬ್ರೆಡ್ ಒಗ್ಗರಣೆ (ಇದೆ ಬ್ರೆಡ್ಡು ಉಪ್ಪಿಟ್ಟಾ ಅಂತ ಅನುಮಾನ..?). ಎಲ್ಲಾ ಸುಲಭ ಸರಳ ಸಾಮಾನ್ಯ ಬಳಕೆ ವಿಧಾನಗಳು - ಅದೆ ಇಲ್ಲಿ ಹೈಲೈಟು :-)
 
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
 

Submitted by ಗಣೇಶ Fri, 09/27/2013 - 00:01

ಸುಮ ಅವರೆ,
ನಮ್ಮಲ್ಲಿ -ಯಾರಿಗಾದರೂ ಅನಾರೋಗ್ಯವಾದರೆ ಮಾತ್ರ ಬ್ರೆಡ್ ತರುವುದು. ಅದರಲ್ಲಿ ಎರಡು ಪೀಸ್ ಅವರು ಕಷ್ಟದಲ್ಲಿ ಹಾಲಲ್ಲಿ ಮುಳುಗಿಸಿ ತಿನ್ನುವರು. ಉಳಿದದ್ದನ್ನು ಆರೋಗ್ಯದಿಂದಿರುವವರು, ಮೇಲೆ ಹೇಳಿದಂತೆ ಸಂಜೆ ಒಗ್ಗರಣೆ ಹಾಕಿ ತಿನ್ನುವುದು ಮಾಡುತ್ತಿದ್ದೆವು.:)