ರುಚಿ ಸಂಪದ

  • ಪಾಲಕ್ ಎಲೆಗಳನ್ನು ತೊಳೆದು ಶುಭ್ರವಾದ ತೆಳು ಬಟ್ಟೆಯ ಮೇಲೆ ಹರಡಿ ಆರಲು ಹಾಕಿ. ನೀರು ಪೂರ ಆರಿದ ಪಾಲಕ್ ಎಲೆಗಳನ್ನು ಅರ್ಧಕ್ಕೆ ಕತ್ತರಿಸಿ ಎರಡು ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ಕಡಲೇ ಹಿಟ್ಟಿಗೆ ಮೆಣಸಿನ ಪುಡಿ, ಉಪ್ಪು ಮತ್ತು ಅಡುಗೆ ಸೋಡ ಹಾಕಿ ಚೆನ್ನಾಗಿ ಬೆರೆಸಿ. ನಂತರ ಅಳತೆಗೆ ತಕ್ಕಂತೆ ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲೆಸಿ. ಬಾಣಲೆಗೆ ಎಣ್ಣೆ ಹಾಕಿ ಎಣ್ಣೆ ಕಾಯಲು ಇಡಿ. ಎಣ್ಣೆ ಕಾದ ನಂತರ ತುಂಡು ಮಾಡಿದ ಪಾಲಕ್ ಎಲೆಗಳನ್ನು ಹಿಟ್ಟಿನಲ್ಲಿ ಅದ್ದಿ ಬಾಣಲೆಗೆ ಹಾಕಿ. ಕೆಂಪಗೆ ಕರಿದ ಬಜ್ಜಿಗಳನ್ನು ಜಾಲರಿ ತಟ್ಟೆಗೆ ತೆಗೆಯಿರಿ. ಬಿಸಿ ಬಿಸಿ ಪಾಲಕ್ ಬಜ್ಜಿಗಳು ಟೀಯೊಂದಿಗೆ ಸವಿಯಲು ಬಲು…

    5
  • ಬದನೆಕಾಯಿಯನ್ನು ಸಣ್ಣ ಸಣ್ಣ ಹೊಳುಗಳನ್ನಾಗಿ ಹೆಚ್ಚಿಕೊಂಡು, ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ತೆಂಗಿನ ತುರಿ, ಹಸಿ ಮೆಣಸಿನ ಕಾಯಿ ಮತ್ತು ಸಾಸಿವೆಯನ್ನು ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣವನ್ನು ಒಂದು ಸಣ್ಣ ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ. ಬೆಂದ ಬದನೆ ಹೋಳು ತಣ್ಣಗಾದೊಡನೆ ಅದನ್ನು ಕಿವುಚಿ, ರುಬ್ಬಿದ ಮಿಶ್ರಣಕ್ಕೆ ಬೆರೆಸಿ. ನಂತರ ಅದಕ್ಕೆ ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ. ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿ. ಬಿಸಿ ಬಿಸಿ ಅನ್ನದೊಂದಿಗೆ ಕಲೆಸಿ ತಿನ್ನಲು ರುಚಿಯಾಗಿರುತ್ತದೆ…

    3
  • ಟೊಮ್ಯಾಟೋವನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿಟ್ಟುಕೊಳ್ಳಿ. ಕುಕ್ಕರಿನಲ್ಲಿ ನೀರು ಹಾಕಿ ತೊಗರಿ ಬೇಳೆ, ಅರಿಶಿನ ಮತ್ತು ಎಣ್ಣೆ ಹಾಕಿ ಬೇಯಲು ಇಡಿ. 3 ಅಥವಾ 4 ಕೂಗು ಬಂದೊಡನೆ ಕುಕ್ಕರನ್ನು ಇಳಿಸಿ. ಒಂದು ಅಗಲ ಬಾಯಿಯ ಪಾತ್ರೆಗೆ ನೀರು ಹಾಕಿ, ಉದ್ದಕ್ಕೆ ಸೀಳಿದ ಹಸಿ ಮೆಣಸಿನಕಾಯಿಯನ್ನು ಅದಕ್ಕೆ ಹಾಕಿ. ಬೆಲ್ಲ ಮತ್ತು ಉಪ್ಪು ಹಾಕಿ. ಸಣ್ಣಗೆ ಹೆಚ್ಚಿದ ಟೊಮ್ಯಾಟೋವನ್ನು ಹಾಕಿ. ನಂತರ ಒಗ್ಗರಣೆಗೆ ಹೇಳಿದ ಪದಾರ್ಥಗಳನ್ನೆಲ್ಲ ಹಾಕಿ ಒಗ್ಗರಣೆ ಮಾಡಿ. ಈಗ ಈ ಮಿಶ್ರಣವನ್ನು ಕುದಿಯಲು ಇಡಿ. ಒಂದು ಕುದಿ ಬಂದನಂತರ 10 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ನಂತರ…

    0
  • ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ ಹಾಕಿ ಹುರಿಯಿರಿ. ಕೊನೆಯಲ್ಲಿ ಹಸಿ ಮೆಣಸಿನ ಕಾಯಿ, ಕಾಕಿ ಕೊಡಿ ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್ನು ಒಂದು ಪುಟ್ಟ ಪಾತ್ರೆಗೆ ತೆಗೆದು ಮೊಸರು ಮತ್ತು ಉಪ್ಪನ್ನು ಮಿಶ್ರ ಮಾಡಿ. ನಂತರ ಮೇಲೆ ಹೇಳಿದ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿ. ರುಚಿಯಾದ ಕಾಕಿ ಕೊಡಿ ತಂಬುಳಿ ರೆಡಿ....

    1
  • ಮಾವಿನ ಹಣ್ಣುಗಳನ್ನು ತೊಳೆದು ಸಿಪ್ಪೆ, ಗೊರಟು ತೆಗೆದು ಸಣ್ಣ ಸಣ್ಣ ಹೊಳುಗಳನ್ನಾಗಿ ಹೆಚ್ಚಿಕೊಳ್ಳಿ. ತೆಂಗಿನ ತುರಿ, ಒಣಮೆಣಸಿನ ಕಾಯಿ
    ಮತ್ತು ಸಾಸಿವೆಯನ್ನು ಹಾಕಿ ನುಣ್ಣಗೆ ರುಬ್ಬಿ. ನಂತರ ಅದಕ್ಕೆ ಮಾವಿನ ಹಣ್ಣಿನ ಹೋಳು ಮತ್ತು ಬೆಲ್ಲ ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿ. ಬಿಸಿ ಬಿಸಿ ಅನ್ನದೊಂದಿಗೆ ಕಲೆಸಿ ತಿನ್ನಲು ರುಚಿಯಾಗಿರುತ್ತದೆ.

    3
  • ಸಾರಿನ ಪುಡಿ :

    ಮಾಡುವ ವಿಧಾನ : ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ (ಇಂಗನ್ನು ಬಿಟ್ಟು) ಕೆಂಪಗಾಗುವಂತೆ ಹುರಿಯಿರಿ. ಬಾಣಲೆ ಕೆಳಗಿಳಿಸಿದ ನಂತರ ಇಂಗನ್ನು ಹಾಕಿ ಒಮ್ಮೆ ಮೊಗೆಚಿ. ಮಸಾಲೆ ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಕೆಲವು ದಿನಗಳು ಇಟ್ಟು ಉಪಯೋಗಿಸಬಹುದು.

    ಸಾರು ಮಾಡುವ ವಿಧಾನ :…

    10
  • ಅಗಲ ಬಾಯಿಯ ಪಾತ್ರೆಯಲ್ಲಿ 2 ½ ಕಪ್ ನೀರು ಹಾಕಿ ಒಲೆಯ ಮೇಲಿಡಿ. ನೀರು ಕುದಿ ಬಂದ ನಂತರ ಅಕ್ಕಿಯನ್ನು ಹಾಕಿ. ಅಕ್ಕಿ ಅರೆ ಬೆಂದಾಗ ಒಂದು ಕಪ್ ಹಾಲನ್ನು ಹಾಕಿ ಪುನಃ ಕುದಿಸಿ. ಅಕ್ಕಿ ಪೂರ್ತಿ ಬೆಂದ ನಂತರ ಕೆಳಗಿಳಿಸಿ. (ಹಾಲು ಪೂರ್ತಿ ಇಂಗಿರಬೇಕು). ಅನ್ನ ತಣ್ಣಗಾದ ನಂತರ ಅದಕ್ಕೆ ಮೊಸರು, ಉಳಿದ ಒಂದು ಕಪ್ ಹಾಲು, ಉಪ್ಪು, ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ, ಅರ್ಧ ಭಾಗ ಮಾಡಿದ ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣಿನ ಕಾಳುಗಳನ್ನು ಹಾಕಿ ಚೆನ್ನಾಗಿ ಬೆರೆಸಿ. ಒಗ್ಗರಣೆಗೆ ಹೇಳಿದ ಪದಾರ್ಥಗಳನ್ನೆಲ್ಲ ಹಾಕಿ ಒಗ್ಗರಣೆ ಮಾಡಿ. (ಗೋಡಂಬಿಯನ್ನು ಕೊನೆಯಲ್ಲಿ ಹಾಕಿ ಇಲ್ಲದಿದ್ದರೆ ಕರಟಿ ಹೋಗುತ್ತದೆ). ಬಾಣಲೆ…

    8
  • ಹಸಿ ಮೆಣಸಿನಕಾಯಿಯನ್ನು ತೊಳೆದು ಶುಭ್ರವಾದ ಬಟ್ಟೆಯ ಮೇಲೆ ಹರಡಿ. ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಉದ್ದಿನಬೇಳೆ, ಮೆಂತೆ ಮತ್ತು ಜೀರಿಗೆಯನ್ನು ಹಾಕಿ ಕೆಂಪಗಾಗುವಂತೆ ಹುರಿಯಿರಿ. ಬಾಣಲೆ ಇಳಿಸಿದ ನಂತರ ಇಂಗು ಹಾಕಿ ಮೊಗೆಚಿ. ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಉಪ್ಪನ್ನು ಹಾಕಿ ಎರಡು ಸುತ್ತು ತಿರುಗಿಸಿ. ಪುಡಿಯನ್ನು ಒಂದು ಪುಟ್ಟ ಬೌಲಿನಲ್ಲಿ ಹಾಕಿಟ್ಟುಕೊಳ್ಳಿ. ಈಗ ನೀರು ಆರಿದ ಹಸಿಮೆಣಸಿನಕಾಯಿಯನ್ನು ಒಂದೊಂದಾಗಿ ತೆಗೆದುಕೊಂಡು ಹೊಟ್ಟೆಯ ಭಾಗವನ್ನು ಮಧ್ಯದಲ್ಲಿ ಉದ್ದಕ್ಕೆ ಸೀಳಿ. (ಮೆಣಸಿನ ಕಾಯಿ ಎರಡು ಭಾಗವಾಗಬಾರದು). ತೊಟ್ಟನ್ನು…

    0
  • ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ, ಒಣ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಕೊನೆಯಲ್ಲಿ ಕಿಸ್ಕಾರು ಹೂವಿನ

    ದಳಗಳನ್ನು ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್ನು ಒಂದು ಪುಟ್ಟ ಪಾತ್ರೆಗೆ ತೆಗೆದು ಮೊಸರು ಮತ್ತು

    ಉಪ್ಪನ್ನು ಮಿಶ್ರ ಮಾಡಿ. ನಂತರ ಮೇಲೆ ಹೇಳಿದ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿ. ರುಚಿಯಾದ ಕಿಸ್ಕಾರು ಹೂವಿನ ತಂಬುಳಿ

    ರೆಡಿ....

    0
  • ಉದ್ದಿನ ಬೇಳೆಯನ್ನು ತೊಳೆದು ಒಂದು ಘಂಟೆ ನೆನೆಸಿ. ಶುಂಠಿಯನ್ನು ಸಣ್ಣಗೆ ತುಂಡು ಮಾಡಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ನೆನೆದ ಬೇಳೆಯನ್ನು ನೀರು ಬಸಿದು ನುಣ್ಣಗೆ ರುಬ್ಬಿ. ರುಬ್ಬಿದ ಹಿಟ್ಟಿಗೆ ಹುಳಿ ಮೊಸರು, ಹೆಚ್ಚಿದ ಶುಂಠಿ ಮತ್ತು ಹೆಚ್ಚಿದ ಹಸಿಮೆಣಸಿನ ಕಾಯಿ ಹಾಕಿ ಕಲೆಸಿ. ನಂತರ ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿ ಬಿಸಿ ಅನ್ನದೊಂದಿಗೆ ಈ ಗೊಜ್ಜನ್ನು ಕಲೆಸಿಕೊಂಡು ತಿನ್ನಲು ರುಚಿಯಾಗಿರುತ್ತದೆ.

    ಸೂಚನೆ: ಒಗ್ಗರಣೆಗೆ ಬೆಳ್ಳುಳ್ಳಿ ಹಾಕಿದರೆ ಇಂಗನ್ನು ಹಾಕುವ…

    0