ರುಚಿ ಸಂಪದ

  • ಕಡಲೇ ಬೇಳೆ ಮತ್ತು ಅಕ್ಕಿಯನ್ನು ತೊಳೆದು ನೆನೆಸಿಡಿ.  ಚಗ್ತೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ.  ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ತೊಳೆದು (ಹಸಿಮೆಣಸಿನಕಾಯಿ) ಸಣ್ಣಗೆ ಹೆಚ್ಚಿಕೊಳ್ಳಿ. ನೆನೆದ ಬೇಳೆ ಮತ್ತು ಅಕ್ಕಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಿ.  ಈ ಹಿಟ್ಟಿಗೆ ಹೆಚ್ಚಿದ ಸೊಪ್ಪು, ಮೆಣಸಿನಕಾಯಿ, ಈರುಳ್ಳಿ,  ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ.  ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ.  ಎಣ್ಣೆ ಕಾದ ನಂತರ ಪುಟ್ಟ ಪುಟ್ಟ ಉಂಡೆಗಳನ್ನಾಗಿ ಎಣ್ಣೆಗೆ ಹಾಕಿ ಕೆಂಪಗೆ ಕರಿದು ಕಾಯಿ ಚಟ್ನಿಯೊಂದಿಗೆ ಸವಿಯಿರಿ.  ಸಾಯಂಕಾಲ  ಟೀಯೊಂದಿಗೆ ತಿನ್ನಲು ಬಹಳ…

    4
  • ಅವಲಕ್ಕಿಯನ್ನು ಒಮ್ಮೆ ತೊಳೆದಿಟ್ಟುಕೊಂಡು ನೆಂದಿರುವ ಹೆಸರು ಬೇಳೆ ಹಾಗೂ ಹಸಿರು ಮೆಣಸಿನಕಾಯಿಯೊಂದಿಗೆ ಮಿಕ್ಸರಿನಲ್ಲಿ ನೀರು ಹಾಕದೆ ಸ್ವಲ್ಪ ನುಣುಪಾಗಿಸಿಟ್ಟುಕೊಳ್ಳಿ.

    ಇದಕ್ಕೆ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪು, ನಿಂಬೆ ರಸ‌, ಸಕ್ಕರೆ, ಉಪ್ಪು ಹಾಕಿ ಕಲೆಸಿ.

    ಮತ್ತಷ್ಟು ಖಾರ ಬೇಕಿದ್ದರೆ ಇನ್ನಷ್ಟು ಹಸಿರು ಮೆಣಸಿನಕಾಯಿ ಹೆಚ್ಚಿ ಇದಕ್ಕೆ ಹಾಕಬಹುದು.

    ಕಲೆಸಿಟ್ಟುಕೊಂಡದ್ದನ್ನು ಚಪ್ಪಟೆಯಾಗಿ ‍ಪುಟ್ಟ ಪುಟ್ಟ ತಟ್ಟೆಯಾಕಾರದಲ್ಲಿ ಕಟ್ಲೆಟ್ ತಟ್ಟಿಟ್ಟುಕೊಳ್ಳಿ.

    ಹೆಂಚು ಅಥವ‌ ಪ್ಯಾನಿನಲ್ಲಿ ಐದು ಚಮಚ‌ ತೆಂಗಿನ‌ ಎಣ್ಣೆ ಕಾಯಿಸಿ ಕಟ್ಲೆಟ್ಟನ್ನು ಫ್ರೈ ಮಾಡಿ…

    0
  • ಮೂದಲು ಅಕ್ಕಿಯನ್ನು ತೊಳೆದು ಮತ್ತು ಕಾರ್ನ್ ನನ್ನು  ಹಾಕಿ ಅನ್ನ ಮಾಡಿಕೊಳ್ಳಬೇಕು
    ನಂತರ ಪುದೀನ,ಕೊತಂಬರಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಬೇಕು
    ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಮತ್ತು ಎಣ್ಣೆ ಹಾಕಿ ಅದು ಕಾದ ನಂತರ ಅದಕ್ಕೆ ಜೀರಿಗೆ ಹಾಕಿಕೊಳ್ಳಬೇಕು
    ನಂತರ ಸಣ್ಣಗೆ ಹಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೆ ಹುರಿಯ ಬೇಕು
    ನಂತರ ನಾವು ರುಬ್ಬಿಕೊಂಡಿದ್ದ ಪುದೀನ ಎಲ್ಲವನ್ನು ಹಾಕಿ ಆಮೇಲೆ ಸ್ವಲ್ಪ ಒಂದು ಚಮಚ ಮೊಸರು( ಇದು ಬೇಕ್ಕಿದರೆ ಮಾತ್ರ) ಹಾಕಿ ಅದಕ್ಕೆ ಉಪ್ಪು ಬೆರಸಿ ಹಸಿ ವಾಸನೆ ಹೋಗವರೆಗೂ ಬಾಡಿಸಬೇಕು.
    ಎಲ್ಲ ಆದ ಮೇಲೆ ಇದಕ್ಕೆ ನಾವು ಮಾಡಿಕೊಂಡಿದ್ದ…

    0
  • ಮಾಡುವ ವಿಧಾನ: 

    1. ನೀರಿನ ಬಟ್ಟಲಿಗೆ ಹುಣಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಹುಣಸೆ ರಸ ಮಾಡಿಕೊಳ್ಳಿ (ಕಿವುಚಿದ ಹಣ್ಣನ್ನು ಹೊರಗೆಸೆಯಲು ಮರೆಯಬೇಡಿ - ಬಾಯಿಗೆ ಸಿಕ್ಕರೆ, ರುಚಿ ಮುಖ ಕಿವಿಚಿಸುತ್ತದೆ; ಬೇಕಿದ್ದರೆ ಆ ಹಿಂಡಿ ಹಿಪ್ಪೆ ಮಾಡಿದ ಹಣ್ಣನ್ನು ಪಾತ್ರೆ ತೊಳೆಯಲು ಉಪಯೋಗಿಸಬಹುದು). 
    2. ಕಿವುಚಿ ತೆಗೆದ ಹುಣಸೆ ನೀರಿಗೆ ಉಪ್ಪನ್ನು ಹಾಕಿ ಕಲಕಿ.
    3. ಈಗ ಕಾರದ ಪುಡಿಯನ್ನು ಹಾಕಿ ಚೆನ್ನಾಗಿ ಕಲಕಿ.
    4. ನಂತರದ ಸರದಿ - ಬೆಲ್ಲದ ಚೂರಿಗೆ; ತುಸು ಮೆಲು ರುಚಿಗೆ ಬೆರೆಸಿದರೆ ಸಾಕು - ಬೆಲ್ಲದ ಪಾನಕವಾಗುವಷ್ಟು ಬೇಡಾ!

    0
  • ಒಂದು ಪುಟ್ಟ ಬೌಲಿನಲ್ಲಿ ಹುಣಿಸೆ ಹಣ್ಣನ್ನು ನೆನೆಯಲು ಇಡಿ. ಸಾಸಿವೆ, ಜೀರಿಗೆ, ಮೆಂತ್ಯ, ಕಾಳು ಮೆಣಸು, ಇಂಗು, ಧನಿಯ ಮಾತು ಬ್ಯಾಡಗಿ ಮೆಣಸಿನ ಕಾಯಿ ಎಲ್ಲವನ್ನೂ ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಎಣ್ಣೆಯನ್ನು ಹಾಕಿ ಸಾಧಾರಣ ಉರಿಯಲ್ಲಿ ಹುರಿದು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ.  (ಈ ಪುಡಿಯಿಂದ ಸಾರನ್ನೂ ಮಾಡಬಹುದು.)  ಎಳ್ಳು ಮತ್ತು ಒಣಕೊಬ್ಬರಿಯನ್ನು ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ.  ಕಡಲೆ ಬೀಜವನ್ನು ಬೇರೆಯಾಗಿ ಹುರಿದು ಇಟ್ಟುಕೊಳ್ಳಿ.

      ದಪ್ಪ ತಳದ ಬಾಣಲೆಗೆ ಉಪ್ಪು, ಬೆಲ್ಲ, ಅರಿಶಿನ, ಕರಿಬೇವಿನ ಸೊಪ್ಪು, ಹುಣಿಸೆ ರಸ ಮತ್ತು ಎಣ್ಣೆಯನ್ನು ಹಾಕಿ…

    0
  • ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಯನ್ನು ತೊಳೆದು ನೆನೆಸಿಡಿ. ಬದನೆ ಕಾಯಿಯನ್ನು ಉರುಟುರುಟಾಗಿ ತೆಳ್ಳಗೆ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿಡಿ. ನೆನೆದ ಅಕ್ಕಿ, ಉದ್ದಿನ ಬೇಳೆ , ಧನಿಯ, ಜೀರಿಗೆ, ಒಣ ಮೆಣಸಿನ ಕಾಯಿ, ಹುಣಿಸೆ ಹಣ್ಣು ಮತ್ತು ಉಪ್ಪನ್ನು ಒಟ್ಟಿಗೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿದ ಹಿಟ್ಟು ಸಾಧಾರಣ ದೋಸೆ ಹಿಟ್ಟಿನ ಹದ ಇರಬೇಕು. ಈ ಹಿಟ್ಟಿಗೆ ಕತ್ತರಿಸಿಕೊಂಡ ಬದನೆ ಕಾಯಿಯನ್ನು ಹಾಕಿ. ಅರ್ಧ ಗಂಟೆಯ ನಂತರ ದೋಸೆ ಕಾವಲಿಯ ಮೇಲೆ ತೆಳ್ಳಗೆ ಹರಡಿ ಎರಡೂ ಬದಿ ಬೇಯಿಸಿ. ರುಚಿಯಾದ ಚಟ್ಟಿ ತಯಾರಾಯಿತು. ಬಿಸಿ ಬಿಸಿ ಅನ್ನವನ್ನು ಕೊಬ್ಬರಿ ಎಣ್ಣೆಯೊಂದಿಗೆ ಕಲೆಸಿಕೊಂಡು…

    8
  • ವಿಧಾನ :

    ಬೆಲ್ಲಕ್ಕೆ ಸ್ವಲ್ಪ ನೀರು ಬೆರೆಸಿ ಬಾಣಲೆಯಲ್ಲಿ .. ಒಲೆಯ ಮೇಲಿಡಬೇಕು ಮಂದ ಉರಿಯಲ್ಲಿ ... ಅದು ಪಾಕವಾಗಿ ನೊರೆ ನೊರೆಯಾಗಿ ಉಕ್ಕಲು ಶುರು ಮಾಡಿದಾಗ .. ಬೆಂದ ಅನ್ನ , ತುಪ್ಪ, ಕಾಯಿ ತುರಿ ಹಾಕಿ ಚೆನ್ನಾಗಿ ಗೊಟಾಯಿಸಬೆಕು. ಎಲ್ಲವೂ ಚೆನ್ನಾಗಿ ಒಂದು ಮಿಶ್ರಣವಾಗಿದ ಮೇಲೆ ... ಏಲಕ್ಕಿ ಪುಡಿ, ಚಿಟಿಕೆ ಪಚ್ಕರ್ಪೂರ , ಗೋಡಂಬಿ ಮತ್ತು ದ್ರಾಕ್ಷಿ ತುಪ್ಪದಲ್ಲಿ ಹುರಿದು ಹಾಕಿದಲ್ಲಿ.. ಕಾಯನ್ನ ಸಿದ್ದ.

    ಈ ತಿಂಡಿಯನ್ನು ಮಾಡಿದ ದಿನ ಅದರ ಸುವಾಸನೆಯಿಂದ ಮನೆಯೆಲ್ಲಾ ಒಂದು ರೀತಿಯ ಮದುವೆ ಮುಂಜಿ ವಾತಾವರಣ.. ಮಾಡಿದ…

    0
  • ನೆನೆಸಿದ ರಾಗಿಗೆ ತೆಂಗಿನ ತುರಿ ಸೇರಿಸಿ ರುಬ್ಬಿ ಸೋಸಿ ಹಾಲು ತೆಗೆಯಿರಿ.ಇದಕ್ಕೆ ಬೆಲ್ಲ,ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಿರಿ.ತುಪ್ಪ ಏಲಕ್ಕಿಸೇರಿಸಿ. ತಳಬಿಟ್ಟಾಗ ತುಪ್ಪ ಸವರಿದ ತಟ್ಟೆಯಲ್ಲಿ ಹರಡಿ.ಆರಿದಮೇಲೆ ಕತ್ತರಿಸಿ. ಮೇಲೆ ತುಪ್ಪ ಹಾಕಿ ಸವಿಯಿರಿ.
    (ಡಯಟ್ ನಲ್ಲಿರುವವರು ತುಪ್ಪ ಮತ್ತು ಕಾಯಿತುರಿ ಹಾಕದೆ ಮಾಡಬಹುದು.)

    ಅರ್ಧ ಕಪ್ ನೆನೆಸಿದ ರಾಗಿ ಮತ್ತು ಅರ್ಧ ಕಪ್ ನೆನೆಸಿದ ಗೋಧಿ ಸೇರಿಸಿ ಕೂಡಾ ಹಾಲುಬಾಯಿ ಮಾಡಬಹುದು.ಮಾಡುವ ವಿಧಾನ ಮೇಲಿನಂತೆ.
    ಹಾಲುಬಾಯಿಯನ್ನು ಜೋನಿಬೆಲ್ಲದಲ್ಲಿ ಮಾಡಿದರೆ ತುಂಬಾ ರುಚಿಯಾಗಿರುತ್ತದೆ.

    ಜೋನಿಬೆಲ್ಲ -ಮಲೆನಾಡಿನ ಕಬ್ಬಿನ…

    0
  • ನೆನೆಸಿದ ರಾಗಿಯನ್ನು ರುಬ್ಬಿ ಸೋಸಿ ಹಾಲು ತೆಗೆಯಿರಿ.ಅದಕ್ಕೆ ಬೆಲ್ಲದ ಪುಡಿ ಸೇರಿಸಿ ರುಬ್ಬಿ.ನಂತರ ಹಾಲು, ಬಾದಾಮಿ ತರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಕುಡಿಯಿರಿ.
    ರಾಗಿ ಎಂದಾಕ್ಷಣ ಮೂಗು ಮುರಿಯುವವರಿಗೆ ಇದನ್ನು ರಾಗಿಯದ್ದು ಎಂದು ಹೇಳದೆ ಕುಡಿಯಲು ಕೊಟ್ಟು ನೋಡಿ.

    2
  • ಮೊದಲು ಬೆಣ್ಣೆ ಹಣ್ಣಿನ ತಿರುಳು,ಸಕ್ಕರೆ ಮತ್ತು ೧ ಕಪ್ ಹಾಲನ್ನು ಮಿಕ್ಸಿಗೆ ಹಾಕಿ ತಿರುಗಿಸಿ.ನಂತರ ಉಳಿದ ಹಾಲನ್ನು ಸೇರಿಸಿ ಮತ್ತೊಮ್ಮೆ ತಿರುಗಿಸಿ.ರುಚಿಕರವಾದ ಬೆಣ್ಣೆಹಣ್ಣಿನ ಮಿಲ್ಕ್ ಶೇಕ್ ನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಸವಿಯಿರಿ.

    5