ಹಲಸಿನ ಹಣ್ಣಿನ ಗಾರಿಗೆ

ಹಲಸಿನ ಹಣ್ಣಿನ ಗಾರಿಗೆ

ಬೇಕಿರುವ ಸಾಮಗ್ರಿ

ಹಲಸಿನ ಹಣ್ಣಿನ ಸೊಳೆ ೧ ಕಪ್, ಬೆಳ್ತಿಗೆ ಅಕ್ಕಿ ಅರ್ಧ ಕಪ್, ಎಳ್ಳು, ರುಚಿಗೆ ಉಪ್ಪು, ಸ್ವಲ್ಪ ತೆಂಗಿನ ಕಾಯಿಯ ತುರಿ, ರುಚಿಗೆ ತಕ್ಕಷ್ಟು ಬೆಲ್ಲ, ಕರಿಯಲು ಎಣ್ಣೆ

 

ತಯಾರಿಸುವ ವಿಧಾನ

ಅಕ್ಕಿಯನ್ನು ೨ ಗಂಟೆ ನೆನೆಸಿ ತೆಗೆದಿಡಿ. ಅದನ್ನು ಹಲಸಿನ ಹಣ್ಣಿನ ಸೊಳೆ, ಬೆಲ್ಲ, ತೆಂಗಿನ ತುರಿ, ಉಪ್ಪು ಸೇರಿಸಿ ದಪ್ಪನೆ ಬರುವಂತೆ ನೀರು ಹಾಕದೇ ರುಬ್ಬಿ. ಅದಕ್ಕೆ ಎಳ್ಳು ಸೇರಿಸಿ. ಒಂದು ಕಾವಲಿಯಲ್ಲಿ ಎಣ್ಣೆಯನ್ನು ಕಾಯಿಸಿ. ಎಣ್ಣೆ ಕಾದ ಬಳಿಕ ರುಬ್ಬಿದ ಹಿಟ್ಟನ್ನು ಗೋಲಿಯಾಕಾರದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಸರಿಯಾಗಿ ಕರಿದ ಮೇಲೆ ಗಾರಿಗೆಯನ್ನು ಹೊರ ತೆಗೆದು ಬಿಸಿ ಬಿಸಿಯಾಗಿ ತಿನ್ನಿರಿ. ಇದಕ್ಕೆ ಹಲಸಿನ ಹಣ್ಣಿನ ಮುಳಕ ಎಂದೂ ಕರೆಯುತ್ತಾರೆ.