ಜೋಳದ ಟಿಕ್ಕಿ (ಕಾರ್ನ್ ಟಿಕ್ಕಿ)

ಜೋಳದ ಟಿಕ್ಕಿ (ಕಾರ್ನ್ ಟಿಕ್ಕಿ)

ಬೇಕಿರುವ ಸಾಮಗ್ರಿ

ಆಲೂಗಡ್ಡೆ ೪-೫ (ಮೀಡಿಯಂ ಗಾತ್ರ), ಕಾಯಿಮೆಣಸು ೨, ಅಮೇರಿಕನ್ ಕಾರ್ನ್ (ಬಿಡಿಸಿದ್ದು) ೧ ಕಪ್, ಚೀಸ್ ೧ ಟೇಬಲ್ ಸ್ಪೂನ್, ಬ್ರೆಡ್ ಕ್ರಮ್ಸ್ (ಹುಡಿ) ಸ್ವಲ್ಪ, ಕೊತ್ತಂಬರಿ ಸೊಪ್ಪು, ಗರಂ ಮಸಾಲೆ ಹುಡಿ ೧ ಚಮಚ, ಮೆಣಸಿನ ಹುಡಿ ೧ ಚಮಚ, ರುಚಿಗೆ ಉಪ್ಪು.

ತಯಾರಿಸುವ ವಿಧಾನ

ಮೊದಲಿಗೆ ಕುಕ್ಕರ್ ನಲ್ಲಿ ಆಲೂಗಡ್ಡೆಯನ್ನು ಬೇಯಿಸಿ. ನಂತರ ಕಾರ್ನ್ ಅನ್ನು ಸ್ವಲ್ಪ ಬಿಸಿ ಮಾಡಿ.(ಓವನ್ ಇದ್ದರೆ ಅದರಲ್ಲಿ ಬಿಸಿ ಮಾಡಬಹುದು). ಕಾರ್ನ್ ಹುರಿಯಬೇಡಿ. ಬೇಯಿಸಿದ ಬಟಾಟೆಯನ್ನು ಹುಡಿ ಮಾಡಿ, ಅದಕ್ಕೆ ಹಸಿಮೆಣಸು ಕತ್ತರಿಸಿ ಮಿಕ್ಸ್ ಮಾಡಿರಿ. ನಂತರ ಅದಕ್ಕೆ ಕೊತ್ತಂಬರಿಸೊಪ್ಪು, ಕಾರ್ನ್, ಚೀಸ್, ಗರಂ ಮಸಾಲೆ, ಉಪ್ಪು ಮತ್ತು ಮೆಣಸಿನ ಹುಡಿಯನ್ನು ಸೇರಿಸಿ ಸರಿಯಾಗಿ ಬೆರೆಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಅವುಗಳ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿರಿ. ಆ ಉಂಡೆಗಳನ್ನು ಚಪ್ಪಟೆ ಆಕಾರಕ್ಕೆ ಬರುವಂತೆ ಕೈಯಿಂದ ಒತ್ತಿ, ಬ್ರೆಡ್ ಹುಡಿಯಲ್ಲಿ ಹೊರಳಿಸಿ ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ. ಒಂದು ಬದಿ ಬೆಂದ ಬಳಿಕ ಇನ್ನೊಂದು ಬದಿಯನ್ನು ಕಾಯಿಸಿರಿ. ಎರಡೂ ಬದಿ ಚೆನ್ನಾಗಿ ಬೆಂದ ಬಳಿಕ ತವಾದಿಂದ ಹೊರ ತೆಗೆದು, ಟೋಮೆಟೊ ಸಾಸ್ ಜೊತೆ ತಿನ್ನಿರಿ. ಬಿಸಿ ಬಿಸಿಯಾಗಿ ತಿಂದರೆ ಊಟಕ್ಕೂ ಚೆನ್ನಾಗಿರುತ್ತದೆ.