ರುಚಿ ಸಂಪದ

 • ದಪ್ಪ ತಳವಿರುವ ಬಾಣಲೆಗೆ ಎಣ್ಣೆ ಹಾಕಿ ಸ್ಟೌ ಮೇಲಿಡಿ. ಎಣ್ಣೆ ಬಿಸಿಯಾದ ನಂತರ ಉದ್ದಿನ ಬೇಳೆ ಹಾಕಿ ಹುರಿದು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ. ನಂತರ ಬಾಣಲೆಗೆ ಬ್ಯಾಡಗಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಅರ್ಧ ಹುರಿದಾದಾಗ ಹೀರೇಕಾಯಿ ಸಿಪ್ಪೆ ಹಾಕಿ ಬಾಡಿಸಿ. ನಂತರ ಬಾಡಿಸಿದ ಹೀರೇಕಾಯಿ ಸಿಪ್ಪೆ, ಮೆಣಸಿನಕಾಯಿ, ತೆಂಗಿನ ತುರಿ, ಉಪ್ಪು ಮತ್ತು ಹುಣಿಸೆ ಹಣ್ಣು, ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ತಿರುವಿಕೊಳ್ಳಿ. ಪೂರಾ ನುಣ್ಣಗಾಗುವ ಮೊದಲು ಹುರಿದ ಉದ್ದಿನ ಬೇಳೆ ಹಾಕಿ ತರಿತರಿಯಾಗಿ ತಿರುವಿ ಒಂದು ಬೌಲಿಗೆ ಬಗ್ಗಿಸಿಕೊಳ್ಳಿ. ನಂತರ ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. ರುಚಿ…

  3
 • ದಪ್ಪ ತಳವಿರುವ ಬಾಣಲೆಯನ್ನು ಒಲೆಯ ಮೇಲಿರಿಸಿ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಆದಾಗ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಜೀರಿಗೆ ಹಾಗೂ ಮೆಣಸಿನ ಕಾಯಿ ಹಾಕಿ ಬಾಡಿಸಿ. ನಂತರ ಸಬ್ಬಕ್ಕಿ ಹಾಕಿ ಹುರಿಯಿರಿ. ಒಲೆಯಿಂದ ಕೆಳಗಿಳಿಸಿ ಸಬ್ಬಕ್ಕಿ ಮಿಶ್ರಣ ಆರಿದ ನಂತರ, ಮಜ್ಜಿಗೆ ಹಾಕಿ, ಉಪ್ಪು, ಕಡಲೆಕಾಯಿ ಬೀಜ ಸೇರಿಸಿ ಒಂದು ಗಂಟೆ ನೆನೆಯಲು ಬಿಡಿ. ಕೊತ್ತಂಬರಿ ಸೊಪ್ಪು, ಮೊಸರು ಹಾಕಿ ಚೆನ್ನಾಗಿ ಕಲಕಿ. ರುಚಿ ರುಚಿಯಾದ ಮೊಸರು ಸಬ್ಬಕ್ಕಿ ರೆಡಿ.

  0
 • ಮೊದಲು ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು, ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಗರಿಬೇಳೆ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ ಬೇಯಿಸಿ. ಬೇಳೆಯನ್ನು ತುಂಬಾ ಬೇಯಿಸಬೇಡಿ. ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಸೊಪ್ಪನ್ನು ಹಾಕಿ, ರುಚಿಗೆ ತಕ್ಕ ಷ್ಟು ಉಪ್ಪನ್ನು ಹಾಕಿ, ಸೊಪ್ಪು ಬೇಯುವವರೆಗೂ ಬೇಯಿಸಿ.

  ನಂತರ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಜಾಲರಿಯಲ್ಲಿ ಸೋಸಿಕೊಂಡು ಸೊಪ್ಪಿನ ನೀರನ್ನು ಮತ್ತು ಸೊಪ್ಪನ್ನು ಬೇರೆ ಬೇರೆಯಾಗಿ ತೆಗೆದಿಟ್ಟುಕೊಳ್ಳಿ.

  ಮಸಾಲೆಗೆ:
  ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ…

  0
 • ಹುರುಳಿಕಾಳನ್ನು 10ಗಂಟೆಗಳ ಕಾಲ ನೆನೆಸಿಡಿ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಎರಡು ಗಂಟೆ ನೆನಸಿಡಿ. ಅಕ್ಕಿಯನ್ನು ತರಿತರಿಯಾಗಿ, ಉದ್ದಿನಬೇಳೆಯನ್ನು ನುಣ್ಣಗೆ ರುಬ್ಬಿ, ಎರಡನ್ನೂ ಬೆರೆಸಿ ಹುದುಗಲು ಬಿಡಿ. ಹುರುಳಿಕಾಳನ್ನು ನುಣ್ಣಗೆ ರುಬ್ಬಿ , ಹುದುಗಿದ ಅಕ್ಕಿ, ಉದ್ದಿನಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಉಪ್ಪು ಸೇರಿಸಿ ಕಲಸಿಕೊಳ್ಳಿ, ತಕ್ಷಣ ಲೋಟದಲ್ಲಿ ಹಾಕಿ, ಕಡುಬಿನ ರೀತಿಯಲ್ಲಿ ಹಬೆಯಲ್ಲಿ ಬೇಯಿಸಿ. ಬಿಸಿಯಿರುವಾಗ ಮೃದುವಾದ ಈ ಸುರುಳಿ ಕಡುಬನ್ನು ಬೆಣ್ಣೆ ಮತ್ತು ಕಾಯಿ ಚಟ್ನಿಯೊಂದಿಗೆ ಸವಿಯಿರಿ.

  0
 • ಹುರುಳಿಕಾಳು ಮತ್ತು ಉಳಿದ ಎಲ್ಲ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿ. ಉಪ್ಪನ್ನೂ ಪುಡಿ ಮಾಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ. ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
  ಎರಡು ತಿಂಗಳವರೆಗೂ ಇದನ್ನು ಬಳಸಬಹುದು. ಬಿಸಿ ಅನ್ನ, ಇಡ್ಲಿ, ದೋಸೆಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

  0
 • ಹಣ್ಣಾದ ಹಲಸಿನ ತೊಳೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ನೆನೆಸಿಟ್ಟ ಅಕ್ಕಿಯೊಂದಿಗೆ ಸೇರಿಸಿ, ಉಪ್ಪು, ಜೀರಿಗೆ, ಕಾಳುಮೆಣಸು ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಬೇಕು. ಹಲಸಿನ ದೋಸೆ ಸಿಹಿಯಾಗುವುದರಿಂದ ತುಂಬಾ ಸಿಹಿ ಆಗದವರು, ಮಿಕ್ಸಿಗೆ ಹಾಕಿ ರುಬ್ಬುವ ಮಿಶ್ರಣಕ್ಕೆ ಎರಡು ಮೆಣಸು ಹಾಕಿಕೊಳ್ಳಬಹುದು. ರುಬ್ಬಿದ ಮಿಶ್ರಣವನ್ನು ಇಡ್ಲಿಯ ಹಿಟ್ಟಿನ ಹದ ಬರುವಂತೆ ನೀರು ಹಾಕಿ ಕಲಸಿ. ಹೆಚ್ಚು ನೀರಾಗಬಾರದು. ನಂತರ ದೋಸೆ ಕಾವಲಿಯನ್ನು ಇಟ್ಟು ಹದವಾದ ಉರಿಯಲ್ಲಿ ಕಾವಲಿಯನ್ನು ಕಾಯಿಸಿ, ಎಣ್ಣೆಯನ್ನು ಹಚ್ಚಬೇಕು. ಕಾವಲಿ ಕಾದ ನಂತರ ಹಿಟ್ಟಿನಿಂದ ದೋಸೆಯನ್ನು ಹುಯ್ಯಿರಿ. ಈ ದೋಸೆ ದಪ್ಪ…

  1
 • ಕಾಳು ಮೆಣಸು ಮತ್ತು ಜೀರಿಗೆಯನ್ನು ಹುರಿದಿಡಿ, ಮಿಕ್ಸಿಗೆ ಕಾಯಿತುರಿ, ಹುರಿದಿಟ್ಟ ಕಾಳು ಮೆಣಸು ಮತ್ತು ಜೀರಿಗೆ ಹಾಕಿ ನುಣ್ಣಗೆ ರುಬ್ಬಿ, ಒಂದೆಲಗವನ್ನು ಬೇರೆಯಾಗಿಯೇ ರುಬ್ಬಿ ಸೋಸಿ ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ರುಬ್ಬಿದ ಕಾಯಿತುರಿ ಮಿಶ್ರಣ, ಸೋಸಿದ ಒಂದೆಲಗದ ರಸ, ಮಜ್ಜಿಗೆ, ಉಪ್ಪು, ಮತ್ತು ಬೆಲ್ಲವನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಎಣ್ಣೆ, ಸಾಸಿವೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ತಂಬುಳಿ ರೆಡಿ.

  0
 • ಇಡ್ಲಿ ಬೇಯಿಸುವ ಪಾತ್ರದಲ್ಲಿ ನೀರು, ಉಪ್ಪು ಹಾಕಿ ಹಲಸಿನ ಬೀಜವನ್ನು, ಹದವಾದ ಹಬೆಯಲ್ಲಿ ಚೆನ್ನಾಗಿ ಬೇಯಿಸಿ.
  ನಂತರ ತಟ್ಟೆ ಅಥವಾ ಪ್ಲಾಸ್ಟಿಕ್ ನಲ್ಲಿ ಹಾಕಿ ಒಂದು ವಾರ ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ನಂತರ ಒಂದು ಪ್ಲಾಸ್ಟಿಕ್ ನಲ್ಲಿ ಹಾಕಿ ಬೆಚ್ಚಗೆ ಕಟ್ಟಿಡಿ. ಜೋರಾಗಿ ಮಳೆ ಬರುವ ಸಮಯ ಮಳೆಗಾಲದಲ್ಲಿ ಚಳಿಗೆ ಜಗಿಯಲು ಚೆನ್ನಾಗಿರುತ್ತದೆ.
  ಅತಿ ಸುಲಭವಾಗಿ ಮಾಡುವ ರುಚಿಕರ ತಿನಿಸು. ಮಕ್ಕಳಿಗಂತೂ ಹೆಚ್ಚು ಪ್ರಿಯವಾಗುತ್ತದೆ.

  6
 • ಅಕ್ಕಿಯನ್ನು ತೊಳೆದು ನೆನೆಸಿಡಿ. ತರಕಾರಿಯನ್ನು ಹೆಚ್ಚಿಕೊಂಡು ಬೇಯಿಸಿಕೊಳ್ಳಿ. ನೆನೆಸಿದ ಅಕ್ಕಿ, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಇವುಗಳನ್ನೆಲ್ಲ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಬೆಂದ ತರಕಾರಿಗೆ ಜೊತೆಗೆ ಹಾಕಿ ಉಪ್ಪು ಮಿಶ್ರ ಮಾಡಿ ಕುದಿಸಿ. ಒಂದೆರಡು ಕುದಿ ಬಂದನಂತರ ಕೆಳಗಿಸಿ. ನಂತರ ಒಗ್ಗರಣೆ ಮಾಡಿ. ತಣ್ಣಗಾದ ನಂತರ ಮೊಸರು ಹಾಕಿ ಚೆನ್ನ್ನಾಗಿ ಮಿಶ್ರ ಮಾಡಿ. ಈಗ ಪಳದ್ಯ ಸವಿಯಲು ತಯಾರಾಗಿ.

  ಸೂಚನೆ : ಅಕ್ಕಿಯ ಬದಲಿಗೆ ಕಡಲೆ ಬೇಳೆ ಉಪಯೋಗಿಸಿದರೆ ಮಜ್ಜಿಗೆ ಹುಳಿಯಾಗುತ್ತದೆ

  1
 • ಟೊಮೆಟೊ, ಕ್ಯಾರೆಟ್, ಹಾಗೂ ಈರುಳ್ಳಿಯನ್ನು ದೊಡ್ಡ ದೊಡ್ಡ ತುಂಡುಗಳನ್ನಾಗಿ ಮಾಡಿ. ಅದಕ್ಕೆ ದಾಲ್ಚಿನಿ ಹಾಕಿ 6 ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಎರಡು ವಿಸಲ್ ಬರುವವರೆಗೆ ಬೇಯಿಸಿ ತಣಿದ ಮೇಲೆ ಸೋಸಿರಿ. ನಂತರ ಉಪ್ಪು ಮತ್ತು ಅರ್ದ ಚಮಚ ಸಕ್ಕರೆ ಸೇರಿಸಿ ೧೦ ನಿಮಿಷ ಕುದಿಸಿರಿ. ಸೂಪ್ ಬಾಲ್‌ಗಳಿಗೆ ಎರಡೆರಡು ಹುರಿದ ಬ್ರೆಡ್ ತುಂಡುಗಳನ್ನು ಹಾಕಿ ಬೇಕಿದ್ದಲ್ಲಿ ಒಂದು ಸಣ್ಣ ಬೆಣ್ಣೆ ಉಂಡೆ ಹಾಕಿ, ಕರಿಮೆಣಸಿನ ಪುಡಿ ಸೇರಿಸಿ ಬಿಸಿಬಿಸಿಯಾಗಿ ಸೇವಿಸಿರಿ.

  0