ರುಚಿ ಸಂಪದ

  • ನೆನೆಸಿದ ರಾಗಿಯನ್ನು ರುಬ್ಬಿ ಸೋಸಿ ಹಾಲು ತೆಗೆಯಿರಿ.ಅದಕ್ಕೆ ಬೆಲ್ಲದ ಪುಡಿ ಸೇರಿಸಿ ರುಬ್ಬಿ.ನಂತರ ಹಾಲು, ಬಾದಾಮಿ ತರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಕುಡಿಯಿರಿ.
    ರಾಗಿ ಎಂದಾಕ್ಷಣ ಮೂಗು ಮುರಿಯುವವರಿಗೆ ಇದನ್ನು ರಾಗಿಯದ್ದು ಎಂದು ಹೇಳದೆ ಕುಡಿಯಲು ಕೊಟ್ಟು ನೋಡಿ.

    2
  • ಮೊದಲು ಬೆಣ್ಣೆ ಹಣ್ಣಿನ ತಿರುಳು,ಸಕ್ಕರೆ ಮತ್ತು ೧ ಕಪ್ ಹಾಲನ್ನು ಮಿಕ್ಸಿಗೆ ಹಾಕಿ ತಿರುಗಿಸಿ.ನಂತರ ಉಳಿದ ಹಾಲನ್ನು ಸೇರಿಸಿ ಮತ್ತೊಮ್ಮೆ ತಿರುಗಿಸಿ.ರುಚಿಕರವಾದ ಬೆಣ್ಣೆಹಣ್ಣಿನ ಮಿಲ್ಕ್ ಶೇಕ್ ನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಸವಿಯಿರಿ.

    5
  • ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಬೇಯಿಸಿದ ಕ್ಯಾರೆಟ್ ಹೋಳುಗಳ ಜತೆ ರುಬ್ಬಿಟ್ಟುಕೊಳ್ಳಿ.
    ಒಂದು ಲೋಟ ಹಾಲಿಗೆ ಸಕ್ಕರೆ ಸೇರಿಸಿ ಕುದಿಯಲಿಡಿ.ಸ್ವಲ್ಪ ಹಾಲಿನಲ್ಲಿ ಕಸ್ಟರ್ಡ್ ಪೌಡರನ್ನು ಕಲಸಿ ಕುದಿಯುತ್ತಿರುವ ಹಾಲಿಗೆ ಸೇರಿಸಿ ಕೈಯಾಡಿಸಿ ಮತ್ತೆ ಕುದಿಸಿ, ಆರಲು ಬಿಡಿ. ತಣ್ಣಗಾದ ಮೇಲೆ, ಇದರ ಜತೆಯಲ್ಲಿ ರುಬ್ಬಿದ ಕ್ಯಾರೆಟ್,ಉಳಿದ ಹಾಲು ಎಲ್ಲವನ್ನು ಮಿಕ್ಸಿಗೆ ಹಾಕಿ ತಿರುವಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಸವಿಯಿರಿ.
    ಕ್ಯಾರೆಟ್ ತಿನ್ನದ ಮಕ್ಕಳು ಕೂಡ ಇದನ್ನು ಇಷ್ಟಪಟ್ಟು ಕುಡಿಯುತ್ತಾರೆ.

    4
  • ಅಕ್ಕಿಯನ್ನು ತೊಳೆದು ನೆನೆಸಿಡಿ. ಕಲ್ಲಂಗಡಿ ಹಣ್ಣನ್ನು ತೊಳೆದು ಹಸಿರು ಸಿಪ್ಪೆಯನ್ನು ತೆಳ್ಳಗೆ ತೆಗೆಯಿರಿ. ನಂತರ ಕತ್ತರಿಸಿ ಕೆಂಪು ಹಣ್ಣಿನ ಭಾಗವನ್ನು ಬೇರ್ಪಡಿಸಿ ಉಳಿದ ಬಿಳಿ ಭಾಗವನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ. ನೆನೆದ ಅಕ್ಕಿಯನ್ನು ನೀರು ಬಸಿದು ಮಿಕ್ಸಿಗೆ ಹಾಕಿ. ಜೊತೆಯಲ್ಲೇ ಹೆಚ್ಚಿಟ್ಟುಕೊಂಡ ಕಲ್ಲಂಗಡಿ ಹಣ್ಣಿನ ಸಿಪ್ಪೆಯ‌ ಹೊಳುಗಳನ್ನೂ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಮಾಡುವಾಗ ನೀರನ್ನು ಹಾಕುವ ಅಗತ್ಯವಿಲ್ಲ. ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಬಗ್ಗಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅಳತೆಗೆ ತಕ್ಕಂತೆ ನೀರನ್ನು ಹಾಕಿ. ಹಿಟ್ಟು ಸಾಧಾರಣ ಬರಿ ಅಕ್ಕಿ…

    0
  • ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು, ಪುಡಿ ಮಾಡಿ. ಇದಕ್ಕೆ ರುಚಿಗೆ ತಕ್ಕ ಷ್ಟು ಉಪ್ಪು ಮತ್ತು ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಕಲೆಸಿ . ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಲು ಇಡಿ, ಬ್ರೆಡ್ ಸ್ಲೈಸ್‌ನ ಬ್ರೌನ್ ಬಣ್ಣದ ಅಂಚನ್ನು ತೆಗೆದು ಬಿಳಿ ಭಾಗವನ್ನು ಮಾತ್ರ ಉಳಿಸಿಕೊಳ್ಳಿ. ಬ್ರೆಡ್ ಸ್ಲೈಸ್‌ನ್ನು ನೀರಿನಲ್ಲಿ ಅದ್ದಿ, ಕೈಯಿಂದ ನೀರನ್ನು ಒತ್ತಿ ತೆಗೆದು, ಅದರಲ್ಲಿ ಆಲೂಗಡ್ಡೆ ಮಿಶ್ರಣವನ್ನು ತುಂಬಿ, ಅದನ್ನು ರೋಲ್‌ ಮಾಡಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿದರೆ ರುಚಿಯಾದ ಬ್ರೆಡ್ ರೋಲ್ ಸಿದ್ಧ.

    0
  • ಮೊದಲು ಹುಣಿಸೆ ರಸ ಮಾಡಿಕೊಳ್ಳೋಣ :
    ಹುಣಿಸೆ ಹಣ್ಣನ್ನು ಒಂದು ಸಣ್ಣ ಬೌಲಿನಲ್ಲಿ ನೆನೆ ಹಾಕಿ. ನೆಂದ ನಂತರ ರಸ ಕಿವಿಚಿಕೊಳ್ಳಿ. ಈಗ ಹಸಿ ಮೆಣಸಿನಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಮಾಡುವಾಗ ನೀರಿನ ಬದಲಿಗೆ ಹುಣಿಸೆ ರಸ ಹಾಕಿ. ಕೊನೆಯಲ್ಲಿ ಬೆಲ್ಲವನ್ನೂ ಹಾಕಿ ರಸ ತಯಾರಿಸಿಕೊಳ್ಳಿ. ಈರುಳ್ಳಿ, ಟೊಮ್ಯಾಟೋ, ಸೌತೆ ಕಾಯಿ, ಅನಾನಸು, ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ.

    ಈಗ ಪೂರಿಯನ್ನು ಪುಡಿ ಮಾಡಿ ಒಂದು ಅಗಲ ಬಾಯಿಯ ಪಾತ್ರೆಗೆ ಹಾಕಿ. ಅದಕ್ಕೆ ಕಡಲೇ ಬೀಜ, ಬಾಂಬೆ ಮಿಕ್ಸ್ಚರ್, ಹೆಚ್ಚಿದ ತರಕಾರಿಗಳನ್ನು ಮತ್ತು ಅನಾನಸನ್ನು ಹಾಕಿ…

    0
  • ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಇವುಗಳನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಅಗಲ ಬಾಯಿಯ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಅಡುಗೆ ಸೋಡಾ, ಜೀರಿಗೆ, ಹೆಚ್ಚಿಟ್ಟುಕೊಂಡ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಇವುಗಳನ್ನು ಹಾಕಿ ಚೆನ್ನಾಗಿ ಕಲಕಿ ಮಿಶ್ರ ಮಾಡಿ. ನಂತರ ಈ ಮಿಶ್ರಣಕ್ಕೆ ಮೈದಾ ಹಿಟ್ಟನ್ನು ಹಾಕಿ ಕಲೆಸಿ. (ಹಿಟ್ಟು ಸಾಧಾರಣವಾಗಿ ಉದ್ದಿನ ವಡೆಯ ಹಿಟ್ಟಿನ ಹದ ಇರಬೇಕು) ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ. ಎಣ್ಣೆ ಕಾದ ನಂತರ ಕಲೆಸಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಎಣ್ಣೆಯಲ್ಲಿ ಬಿಡಿ.…

    6
  • ನೀರಿನಲ್ಲಿ ನೆನೆಹಾಕಿದ ಅಕ್ಕಿಯೊಂದಿಗೆ ಬಾಳೆಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪುಡಿ ಮಾಡಿದ ಸಕ್ಕರೆ, ಏಲಕ್ಕಿ, ಶುಂಠಿ ಹಾಗೂ ತುರಿದ ಕೊಬ್ಬರಿ ಇವೆಲ್ಲವನ್ನು ಮಿಶ್ರ ಮಾಡಿ ಚೆನ್ನಾಗಿ ನಾದಿ. ಸಣ್ಣ ಸಣ್ಣ ಆಕಾರದಲ್ಲಿ ಉಂಡೆ ಮಾಡಿ. ತುಪ್ಪ/ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಬಿಸಿ ಬಿಸಿ ಬಲು ರುಚಿ .

    3
  • ಕುಕ್ಕರಿನಲ್ಲಿ ತೊಗರಿ ಬೇಳೆ, ನೀರು, ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ಮೂರು – ನಾಲ್ಕು ಬಾರಿ ಕೂಗಿಸಿ, ಕೆಳಗಿಳಿಸಿಕೊಳ್ಳಿ. ಹುಣಿಸೆ ಹಣ್ಣನ್ನು ಸಣ್ಣ ಬೌಲಿನಲ್ಲಿ ನೆನೆಸಿಡಿ. ತರಕಾರಿಯನ್ನು ಹೋಳುಗಳನ್ನಾಗಿ ಮಾಡಿಟ್ಟುಕೊಳ್ಳಿ. ದಪ್ಪ ತಳದ ಬಾಣಲೆಗೆ ಕೊತ್ತಂಬರಿ ಬೀಜ, ಮೆಂತೆ, ಸಾಸಿವೆ, ಉದ್ದಿನ ಬೇಳೆ, ಬ್ಯಾಡಗಿ ಮೆಣಸಿನ ಕಾಯಿ ಮತ್ತು ಒಂದು ಚಮಚ ಎಣ್ಣೆ ಹಾಕಿ ಹುರಿಯಿರಿ. ಕೆಳಗಿಳಿಸುವ ಒಂದು ನಿಮಿಷ ಮೊದಲು ಕರಿಬೇವಿನ ಎಸಳನ್ನು ಹಾಕಿ ಬಾಡಿಸಿ. ಕೆಳಗಿಳಿಸಿದ ನಂತರ ತೆಂಗಿನ ತುರಿ ಹಾಕಿ ಬಾಡಿಸಿ. ಹುರಿದ ಮಸಾಲೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಒಂದು ಅಗಲ ಬಾಯಿಯ ಪಾತ್ರೆಗೆ ಬೆಂದ ಬೇಳೆಯನ್ನು…

    2
  • ಒಣ ಕೊಬ್ಬರಿಯನ್ನು ಕುಟ್ಟಿ ಹದ ಮಾಡಿಕೊಳ್ಳಿ. ನಸುಕಾದ ಬಣಲೆಗೆ ಮೆಣಸು ಹಾಕಿ. ಒಣಮೆಣಸಿನಕಾಯಿ ಎಣಿಸಿ ಹಾಕಿ ಕೊಬ್ಬರಿ ಹಳಕು ಹಾಕಿ ಮೊಗಚು ಕೈಯಾಡಿಸಿ ಆತುರವಿಲ್ಲದೆ ಕಡಲೆಬೇಳೆ ಬೆರಸಿ. ನಿಮಿಷ ಹುರಿದು ಚೆಕ್ಕೆ-ಲವಂಗ ಹಾಕಿ. ಕರಿಬೇವು ಹಾಕಿ ಒಂದೆರಡುಬಾರಿ ಆಡಿಸಿ. ತೊಗರಿಬೇಳೆ ಬೆರಸಿ. ಹುಣಿಸೆ ಹಣ್ಣು ಚೂರು-ಚೂರು ಮಾಡಿ ಹಾಕಿ ಒಂದು ನಿಮಿಷ ಹುರಿಯಿರಿ (ಎಲ್ಲಾ ಸಣ್ಣ ಉರಿಯಲ್ಲಿ) ಧನಿಯ ಹಾಕಿ, ಬೇಳೆ ಕೆಂಡ ಸಂಪಿಗೆ ಬಣ್ಣ ಬರುವವರೆಗೆ (ಎರಡು ನಿಮಿಷ) ಹುರಿಯಿರಿ. ಉರಿ ಆರಿಸಿ ಇಂಗು ಹಾಕಿ 30 ಸೆಕೆಂಡ್ ಕಾಲ ಆಡಿಸುತ್ತಲೇ ಇರಿ.
    ಅದು ತಣ್ಣಗಾಗುವ ಹೊತ್ತಿನಲ್ಲಿ, ಟೊಮ್ಯಾಟೋ ಕೊಚ್ಚಿ, ನಿಮ್ಮಿಷ್ಟ ತರಕಾರಿ…

    0