ಹಲಸಿನ ಹಣ್ಣಿನ ಪಾಯಸ

ಹಲಸಿನ ಹಣ್ಣಿನ ಪಾಯಸ

ಬೇಕಿರುವ ಸಾಮಗ್ರಿ

ಹಲಸಿನ ಹಣ್ಣಿನ ತೊಳೆ ೨೫, ತುಪ್ಪ ೨ ಚಮಚ, ಬೆಲ್ಲ ಒಂದುವರೆ ಕಪ್, ತೆಂಗಿನ ಕಾಯಿ ಹಾಲು ಅಥವಾ ಹಸುವಿನ ಹಾಲು ೨ ಕಪ್, ಏಲಕ್ಕಿ ಹುಡಿ, ಗೋಡಂಬಿ ಚೂರುಗಳು.

 

ತಯಾರಿಸುವ ವಿಧಾನ

ಹಲಸಿನ ಹಣ್ಣಿನ ತೊಳೆಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿರಿ. ಕುಕ್ಕರಿನಲ್ಲಿ ಎರಡು ವಿಸಿಲ್ ಹಾಕಿ ಕೆಳಗಿಳಿಸಿ. ಬಾಣಲೆಗೆ ತುಪ್ಪ ಹಾಕಿ  ಬೇಯಿಸಿದ ಹಣ್ಣಿನ ಮಿಶ್ರಣವನ್ನು ಸೇರಿಸಿ ೧೦ ನಿಮಿಷ ಸಣ್ಣ ಉರಿಯಲ್ಲಿ ಮಗುಚಿ. ಬೆಲ್ಲ ಕುದಿಸಿ ಕರಗಿಸಿ ಸೋಸಿ ಸೇರಿಸಿ. ತೆಂಗಿನಕಾಯಿ ಹಾಲು ಅಥವಾ ಹಸುವಿನ ಹಾಲು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಏಲಕ್ಕಿ ಹುಡಿ ಹಾಕಿ, ಗೋಡಂಬಿ ತುಪ್ಪದಲ್ಲಿ ಹುರಿದು ಹಾಕಿ ೧೦ ನಿಮಿಷ ಮುಚ್ಚಿಡಿ. ಹಲಸಿನ ಹಣ್ಣಿನ ಪಾಯಸ ರೆಡಿ.(ನಾನು ದನದ ಹಾಲಿನಲ್ಲಿ ತಯಾರಿಸಿರುವೆ)

(ಹಣ್ಣಿನ ತೊಳೆಗಳನ್ನು ಚೆನ್ನಾಗಿ ಹುರಿದು ಸಹ ಮಾಡಬಹುದು. ತೊಳೆಗಳು ತುಂಬಾ ಸಿಹಿಯಿದ್ದಾಗ ಬೆಲ್ಲ ಕಡಿಮೆ ಸಾಕು. ತೆಂಗಿನಕಾಯಿ ಹಾಲಿನಲ್ಲಿ ಅಥವಾ ಹಸುವಿನ ಹಾಲಿನಲ್ಲಿ ಎರಡರಲ್ಲೂ ಪಾಯಸ ಮಾಡಬಹುದು. ಒಣಕೊಬ್ಬರಿಯನ್ನು ಸಣ್ಣಗೆ ಕತ್ತರಿಸಿ ತುಪ್ಪ ಹಾಕಿ ಹುರಿದು ಸೇರಿಸಬಹುದು.)

-ರತ್ನಾ ಕೆ.ಭಟ್ ತಲಂಜೇರಿ