ರುಚಿ ಸಂಪದ

  • 1. ಹಸಿರು ಟೊಮ್ಯಾಟೋ ಕಾಯಿಗಳನ್ನ ಮತ್ತು ಹಸಿ ಮೆಣಸಿನ ಕಾಯಿಗಳನ್ನ ಪಾತ್ರೆಯಲ್ಲಿ ಹಾಕಿ ನೀರು ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ರಿನಲ್ಲಿ ಹಾಕಿದರೆ ಒಂದು ವಿಷಲ್ ಸಾಕು.
    2. ನಂತರ ಎರಡನೇ ಚಿತ್ರದಲ್ಲಿರುವಂತೆ ತುರಿದ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಉರಿಗಡಲೆ ಹಾಕಿ ಒಳಕಲ್ಲಿನಲ್ಲಿ ಅಥವಾ ಮಿಕ್ಸರಿನಲ್ಲಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ. ಕೊನೆಗೆ ಬೇಯಿಸಿದ ಟೊಮ್ಯಾಟೋ, ಮೆಣಸಿನಕಾಯಿಯನ್ನ ಸೇರಿಸಿ ಒಂದೆರಡು ಸುತ್ತು ರುಬ್ಬಿರಿ.
    3. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ, ಇಂಗು, ಕರಿಬೇವಿನ ಎಸಳುಗಳನ್ನ ಹಾಕಿ ನಂತರ ರುಬ್ಬಿಕೊಂಡ ಮಿಶ್ರಣವನ್ನ ಸುರಿದು ಒಂದೆರಡು…

    4
  • ಮಾಡುವ ವಿಧಾನ: ಮೊಧಲು ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆಧು ಹೆಚ್ಚಿಕೊಳ್ಳಿ.(ಸಾಂಬಾರಿಗೆ ಹೆಚ್ಚೋ ಹಾಗೆ) ಬಾಣಲೆಗೆ ಉದ್ದಿನಬೇಳೆ, ಕಡ್ಲೆಬೇಳೆ, ಹಸಿಮೆಣಸು, ಹಾಕಿ ಸ್ವಲ್ಪ ಎಣ್ಣೆ ಹಾಕಿ ಕೆಂಪಾಗುವ ವರೆಗೆ ಹುರಿಧುಕೊಳ್ಳಿ. ನಂತರ ತೆಂಗಿನತುರಿ ಸೇರಿಸಿ ರುಬ್ಬಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕರಿಬೇವು, ಸಾಸಿವೆ, ಉದ್ದಿನಬೇಳೆ ಹಾಕಿ ಒಗ್ಗರಣೆ ಹಾಕಿಕೊಂಡು ಅದಕ್ಕೆ ಹೆಚ್ಚಿಧ ಬೆಂಡೆಕಾಯಿ ಹಾಕಿ ಉಪ್ಪು ಸೇರಿಸಿ ಬಾಡಿಸಿಕೊಳ್ಳಿ. ನಂತರ ರುಬ್ಬಿಧ ಮಿಶ್ರಣ ಸೇರಿಸಿ ಲಿಂಬೆಹುಳಿ ರಸ ಹಿಂಡಿ.

    2
  • ೧. ಮೊದಲು ಆಲೂಗೆಡ್ಡೆ ಮತ್ತು ಬಟಾಣಿ ಬೇಯಿಸಿಟ್ಟುಕೊಳ್ಳಿ.

    ೨. ಖಾರಕ್ಕೆ ಬೇಕಾದ ಸಾಮಾಗ್ರಿಗಳನ್ನು ಒಟ್ಟು ಸೇರಿಸಿ, ಮಿಕ್ಸರ್ ನಲ್ಲಿ ಹಾಕಿ, paste ಮಾಡಿಕೊಳ್ಳಿ.

    ೩. ಸಮ ಪ್ರಮಾಣದ ಹುಣಸೆ ಹುಳಿ ಹಾಗು ಬೆಲ್ಲ ನೀರನ್ನು, mix ಮಾಡಿ. ಈ ನೀರು ೨ ಕಪ್ ಇದ್ದರೆ, ಅದನ್ನು ೧ ಕಪ್ ಗೆ ಒಲೆಯ ಮೇಲೆ ಕುದಿಸಿ, ಇಳಿಸಿ.

    ೪. ಒಂದು ದೊಡ್ಡ ಪಾತ್ರೆಯಲ್ಲಿ, ಕ್ಯಾರೆಟ್ ತುರಿ, ಟೊಮಾಟೊ, ನೀರುಳ್ಳಿ ಬೆರೆಸಿ, ಪುರಿ, ಖಾರ (ರುಚಿಗೆ ತಕ್ಕಷ್ಟು), ಸಿಹಿ (ರುಚಿಗೆ ತಕ್ಕಷ್ಟು), ಬೇಯಿಸಿ mash ಮಾಡಿದ ಆಲೂಗೆಡ್ಡೆ, ಬಟಾಣಿ ಸೇರಿಸಿ. ಕೊನೆಗೆ ಮಂಡಕ್ಕಿ ಸೇರಿಸಿ, mix ಮಾಡಿ.

    ೫. ಬಡಿಸುವ ಮುನ್ನ, ಒಮ್…

    0
  • 1. ದಪ್ಪ ತಳದ ಬಾಣಲೆ/ಪಾತ್ರೆಗೆ 2 ಚಮಚ ತುಪ್ಪ ಹಾಕಿ, ಕಾದ ನಂತರ ತುರಿದ ಬೀಟ್ರೂಟನ್ನ ಹಾಕಿ ಹಸಿತನ ಹೋಗುವವರೆಗೂ ಒಂದೈದು ನಿಮಿಷ ಸಣ್ಣನೆಯ ಉರಿಯಲ್ಲಿ ಬಾಡಿಸಿ.
    2. ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ,ತುರಿದ ಕೊಬ್ಬರಿಯನ್ನ ಹಾಕಿ.ಸಕ್ಕರೆ ಕರಗಿ ಮಿಶ್ರಣವು ಗಟ್ಟಿಯಾಗುವವರೆಗೂ ಚಮಚದಲ್ಲಿ ಕದಡುತ್ತಿರಿ, ತಳ ಹತ್ತಲು ಬಿಡಬೇಡಿ.
    3. ಮಿಶ್ರಣವು ಉಂಡೆ ಕಟ್ಟುವ ಹದಕ್ಕೆ ಬಂದ ನಂತರ ಅದನ್ನ ಬೇರೊಂದು ತಟ್ಟೆಗೆ ಸುರಿದು, ತಣ್ಣಗಾಗುವ ಮೊದಲೇ ಚಮಚದಲ್ಲಿ ಸ್ವಲ್ಪ ತೆಗೆದುಕೊಂಡು ತುಪ್ಪ ಸವರಿಕೊಂಡ ಕೈಗಳದಿಂದ ಉಂಡೆ ಕಟ್ಟಿ. ಅದರ ಮೇಲೊಂದು ಗೋಡಂಬಿ, ಬಾದಾಮಿಯನ್ನ ಇಡಿ ಮತ್ತು ಮೇಲೆ ತುರಿದ ಕೊಬ್ಬರಿಯಿಂದ…

    3
  • ಮುಂಜಾನೆದ್ದು ಬೇಗನೆ ತಿಂಡಿ ಬೇಕು ಅಂತಾದರೆ ಕಾಳುಗಳನ್ನು ಹಾಗೇ ಕುಕ್ಕರಿನಲ್ಲಿ ಸ್ಟೀಮ್ ಮಾಡಿ ಅಥವ ಇಡ್ಲಿ ಕುಕ್ಕರಿನಲ್ಲಿ ಸ್ಟೀಮ್ ಮಾಡಿ ಅದಕ್ಕೆ ಉಪ್ಪು, ಮೆಣಸು ಹಾಕಿ ತಿಂದುಬಿಡಬಹುದು.

    ಪ್ರೋಟೀನ್ಸ್ ಜಾಸ್ತಿ ಇರುವುದರಿಂದ ಇದು ಒಳ್ಳೇದು.

    ಕುಕ್ಕರಿನಲ್ಲಿ ಬೇಯಿಸಿದರೆ ತಿನ್ನೋಕಾಗೋದಿಲ್ಲ. ಸ್ಟೀಮ್ ಮಾಡುವುದು ಎಂದರೆ ಹದವಾಗಿ ಹಬೆಯಲ್ಲಿ ಬೇಯಿಸುವುದು. ಕಾಳುಗಳು ತೀರ ಮೆತ್ತಗಾಗಬಾರದು.

    ಸಾಸ್ ತಯಾರಿಸುವುದು ತೀರ ಸುಲಭ. ಟೊಮೆಟೋ, ನೀರುಳ್ಳಿ, ಬೆಳ್ಳುಳ್ಳಿ ಮತ್ತು ಸ್ವಲ್ಪಮಾತ್ರ ಸೋಂಪು ಸ್ವಲ್ಪ ಹುರಿದು ಫೈನ್ ಗ್ರೈಂಡ್ ಮಾಡಿಟ್ಟಿಕೊಂಡು ಮತ್ತೆ ಹುರಿದು ಬೇಯಿಸಿದರಾಯಿತು. ಸ್ಟೀಮ್ ಮಾಡಿದ…

    0
    • ‍ಒಂದು ಕೈಯಾಡಿಸುವಷ್ಟು ದೊಡ್ಡ ಪಾತ್ರೆಯಲ್ಲಿ ಸಕ್ಕರೆ, ಉಪ್ಪು, ಸಾರಿನ ಪುಡಿ, ಕಾಯಿ ತುರಿ, ಅವಲಕ್ಕಿ, ನೀರುಳ್ಳಿ ಹಾಕಿ
    • ಒಗ್ಗರಣೆ ಪಾತ್ರೆಯಲ್ಲಿ, ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕರಿ ಬೇವು, ಮೆಣಸು ಹಾಕಿ, ಪರಿಮಳ ಬಂದೊಡನೆ ಅದನ್ನು ಮೇಲಿನ ಸಾಮಾಗ್ರಿಗಳಿರುವ ಪಾತ್ರಗೆ ಹಾಕಿ
    • ಅವಲಕ್ಕಿಯ ಮೇಲೆ ಸ್ವಲ್ಪ ನೀರು ಚಿಮುಕಿಸಿ, ನಿಂಬೆ ರಸ ಸೇರಿಸಿ
    • ಚೆನ್ನಾಗಿ ಬೆರೆಸಿ (ನಮ್ಮಲ್ಲಿ ಈ ರೀತಿ ಬೆರೆಸುವುದಕ್ಕೆ - ಮೊರೆಸುವುದು ಎನ್ನುತ್ತೇವೆ) 

    ರುಚಿ ನೋಡಿ ನಿಮ್ಮ ಅನಿಸಿಕೆ ತಿಳಿಸಿ‍...

     

     

    4
    • ‍ನೇಂದ್ರ ಬಾಳೆಹಣ್ಣನ್ನು ‍ದುಂಡಗೆ ತುಂಡರಿಸಿಟ್ಟುಕೊಳ್ಳಿ 
    • ತುಂಡು ಮಾಡಿದ ಬಾಳೆಹಣ್ಣನ್ನು ಬಿಸಿಯಾಗಿರುವ ಕಾವಲಿಯ ಮೇಳೆ ಇಟ್ಟು, ತುಪ್ಪ ಸವರಿ ‍ಕೆಂಪಗೆ ಕಾಯಿಸಿ
    • ಮಗ್ಗುಲಾಗಿಸಿ, ಆ ಬದಿಯನ್ನೂ ಕೆಂಪಗೆ ಕಾಯಿಸಿ
    • ಬಿಸಿ ಬಿಸಿ ಇರುವಾಗಲೆ ಸಕ್ಕರೆ ಸೇರಿಸಿ, ಸವಿಯಿರಿ 

     

    ನೇಂದ್ರ ಬಾಳೆಹಣ್ಣು ಮಂಗಳೂರು, ಉಡುಪಿ, ಕೇರಳ ದಲ್ಲಿ ಸಿಗುವಂಥಹ ಬಾಳೆಹಣ್ಣಿನ ‍ಪ್ರಭೇಧ. ‍

    ಇದರ ಪೋಡಿ‍/ ಬಜ್ಜಿ  ಕೂಡ ಮಾಡುತ್ತಾರೆ.  

    2
    • ‍ಒಂದು ಬಾಣಲೆಯಲ್ಲಿ ಎಣ್ಣೆ (ನಿಮ್ಮ ರುಚಿಗೆ ತಕ್ಕಷ್ಟು) ಹಾಕಿ, ಒಲೆಯ ಮೇಲಿಡಿ 
    • ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ, ಮೆಣಸು, ಉದ್ದಿನಬೇಳೆ, ಕರಿಬೇವು ಸೇರಿಸಿ ಒಗ್ಗರಣೆ ಕೊಡಿ 
    • ಜೊತೆಗೆ ಅರಸಿನ ಸೇರಿಸಿ
    • ತುಂಡರಿಸಿದ ಬ್ರೆಡ್ ಹಾಕಿ, ‍ಮಜ್ಜಿಗೆ ಸೇರಿಸಿ, ಚೆನ್ನಾಗಿ mix ಮಾಡಿ
    • ಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ garnish ‍ಮಾಡಿ 

     

    ಸಾಯಂಕಾಲಕ್ಕೆ ಸೂಕ್ತವೆನಿಸಿದ, ಜಟ್-ಪಟ್ ಅಡಿಗೆ ಇದು. 

    ಮಾಡಿ ನೋಡಿ ನಿಮ್ಮ ಅನಿಸಿಕೆ ತಿಳಿಸಿ. ‍

    2
    • ‍ಅಕ್ಕಿ ತೊಳೆದು, ಅರ್ಧ ಗಂಟೆ ನೀರಿನಲ್ಲಿ ನೆನೆಯಲು ಇಡಿ 
    • ಕಾಯಿ ತುರಿದು, ರುಬ್ಬಿಕೊಂಡು, ಕಾಯಿ ಹಾಲು ತಯಾರಿಸಿ 
    • ಒಂದು ಪಾತ್ರೆಯಲ್ಲಿ (cooker ‍ಆದರೆ ಉತ್ತಮ), ಎಣ್ಣೆಹಾಕಿ ಒಲೆಯ ಮೇಲಿಡಿ
    • ಎಣ್ಣೆ ಕಾದ ಮೇಲೆ, ಸಾಸಿವೆ, ಕಡಲೆಬೇಳೆ, ಹಸಿರು ಮೆಣಸು, ಕರಿಬೇವು, ದ್ರಾಕ್ಷಿ, ಗೋಡಂಬಿ ಹಾಕಿ ಒಗ್ಗರಣೆ ಕೊಡಿ
    • ಇ‍ದಕ್ಕೆ ಕಾಯಿ ಹಾಲು, ಅಕ್ಕಿ ಹಾಕಿ, ಅಕ್ಕಿ ಬೇಯಲು ಬಿಡಿ 

    ಬಿಸಿ ಬಿಸಿ ಕೊಕನಟ್ ರೈಸಿ ರೆಡಿ. 

    ಕಾಯಿ ಹಾಲಿನಲ್ಲೇ ಬೆಂದ ಅಕ್ಕಿ, ರುಚಿಯಾಗಿರುತ್ತದೆ. ‍

    ನಿಮ್ಮ ಗಮದಲ್ಲಿರಲಿ: 

    ೧ ಕಪ್ ಅಕ್ಕಿಗೆ, ೨ ಕಪ್ ಕಾಯಿ ಹಾಲು…

    0
    • ಬೆಳಗ್ಗೆ ಎದ್ದೊಡನೆ ದೋಸೆ ಅಕ್ಕಿ ನೆನೆಸಿಟ್ಟುಕೊಳ್ಳಿ.
    • ಕಾಯಿ ತುರಿ, ಉಪ್ಪು, ಹುಳಿ, ಬೆಲ್ಲ, ಕೊತ್ತಂಬರಿ ಬೀಜ, ಜೀರಿಗೆ, ಬ್ಯಾಡಗಿ ಮೆಣಸು ಸೇರಿಸಿ ರುಬ್ಬಿಕೊಳ್ಳಿ.
    • ಈ ಮಿಶ್ರಣಕ್ಕೆ ನೆನೆದ ಅಕ್ಕಿಯನ್ನು ಸೇರಿಸಿ ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ.
    • ಹಾಗೆ ತಯಾರಾದ ಹಿಟ್ಟಿಗೆ ಕ್ಯಾಬೇಜ್ ಅನ್ನು ಜೊತೆ ಸೇರಿಸಿ ಇಡಿ.
    • Cooker ಅಥವಾ ಇಡ್ಲಿ ಅಟ್ಟದಲ್ಲಿ ನೀರು ಹಾಕಿ ಒಲೆಯ ಮೇಲೆ ಇಡಿ.
    • ಒಂದು ಅಗಲದ ಪಾತ್ರೆಯನ್ನು ನೀರಿನ ಮೇಲಿಟ್ಟು, ತಯಾರಿಸಿದ ಮಿಶ್ರಣವನ್ನು ಒಂದೊಂದೆ ಹಿಡಿಯಂತೆ, ಈ ಪಾತ್ರೆಯಲ್ಲಿ ಇಡಿ.
    • ಹವೆ/ಹಬೆಯಲ್ಲಿ ಬೇಯಿಸಿ.
    • ೨೦…
    4