ಬಾಳೆಕಾಯಿ ಕಬಾಬ್
ಬೇಕಿರುವ ಸಾಮಗ್ರಿ
ಬಾಳೆಕಾಯಿ ೪, ಮೈದಾ - ೨ ಕಪ್, ಅರಸಿನ ಹುಡಿ - ೧ ಚಮಚ, ಮೆಣಸಿನ ಹುಡಿ - ೧ ಚಮಚ, ಜೀರಿಗೆ -೧ ಚಮಚ, ಅಡುಗೆ ಎಣ್ಣೆ - ೨ ಕಪ್, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೈದಾಹಿಟ್ಟು, ಅರಸಿನ, ಮೆಣಸಿನ ಹುಡಿ, ಜೀರಿಗೆ, ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸಬೇಕು. ಅದಕ್ಕೆ ಹಿಟ್ಟಿನ ಮಿಶ್ರಣದಲ್ಲಿ ಬಾಳೆಕಾಯಿಗಳನ್ನು ಅದ್ದಿ ಬೋಂಡಾದಂತೆ ಕರಿಯಬೇಕು. ಈಗ ರುಚಿ ರುಚಿಯಾದ ಬಾಳೆಕಾಯಿ ಕಬಾಬ್ ಸವಿಯಲು ಸಿದ್ಧ. ಸಾಸ್ ಅಥವಾ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.