ರುಚಿ ಸಂಪದ

 • ಮೊದಲು ಹುಣಿಸೆ ರಸ ಮಾಡಿಕೊಳ್ಳೋಣ :
  ಹುಣಿಸೆ ಹಣ್ಣನ್ನು ಒಂದು ಸಣ್ಣ ಬೌಲಿನಲ್ಲಿ ನೆನೆ ಹಾಕಿ. ನೆಂದ ನಂತರ ರಸ ಕಿವಿಚಿಕೊಳ್ಳಿ. ಈಗ ಹಸಿ ಮೆಣಸಿನಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಮಾಡುವಾಗ ನೀರಿನ ಬದಲಿಗೆ ಹುಣಿಸೆ ರಸ ಹಾಕಿ. ಕೊನೆಯಲ್ಲಿ ಬೆಲ್ಲವನ್ನೂ ಹಾಕಿ ರಸ ತಯಾರಿಸಿಕೊಳ್ಳಿ. ಈರುಳ್ಳಿ, ಟೊಮ್ಯಾಟೋ, ಸೌತೆ ಕಾಯಿ, ಅನಾನಸು, ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ.

  ಈಗ ಪೂರಿಯನ್ನು ಪುಡಿ ಮಾಡಿ ಒಂದು ಅಗಲ ಬಾಯಿಯ ಪಾತ್ರೆಗೆ ಹಾಕಿ. ಅದಕ್ಕೆ ಕಡಲೇ ಬೀಜ, ಬಾಂಬೆ ಮಿಕ್ಸ್ಚರ್, ಹೆಚ್ಚಿದ ತರಕಾರಿಗಳನ್ನು ಮತ್ತು ಅನಾನಸನ್ನು ಹಾಕಿ…

  0
 • ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಇವುಗಳನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಅಗಲ ಬಾಯಿಯ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಅಡುಗೆ ಸೋಡಾ, ಜೀರಿಗೆ, ಹೆಚ್ಚಿಟ್ಟುಕೊಂಡ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಇವುಗಳನ್ನು ಹಾಕಿ ಚೆನ್ನಾಗಿ ಕಲಕಿ ಮಿಶ್ರ ಮಾಡಿ. ನಂತರ ಈ ಮಿಶ್ರಣಕ್ಕೆ ಮೈದಾ ಹಿಟ್ಟನ್ನು ಹಾಕಿ ಕಲೆಸಿ. (ಹಿಟ್ಟು ಸಾಧಾರಣವಾಗಿ ಉದ್ದಿನ ವಡೆಯ ಹಿಟ್ಟಿನ ಹದ ಇರಬೇಕು) ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ. ಎಣ್ಣೆ ಕಾದ ನಂತರ ಕಲೆಸಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಎಣ್ಣೆಯಲ್ಲಿ ಬಿಡಿ.…

  6
 • ನೀರಿನಲ್ಲಿ ನೆನೆಹಾಕಿದ ಅಕ್ಕಿಯೊಂದಿಗೆ ಬಾಳೆಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪುಡಿ ಮಾಡಿದ ಸಕ್ಕರೆ, ಏಲಕ್ಕಿ, ಶುಂಠಿ ಹಾಗೂ ತುರಿದ ಕೊಬ್ಬರಿ ಇವೆಲ್ಲವನ್ನು ಮಿಶ್ರ ಮಾಡಿ ಚೆನ್ನಾಗಿ ನಾದಿ. ಸಣ್ಣ ಸಣ್ಣ ಆಕಾರದಲ್ಲಿ ಉಂಡೆ ಮಾಡಿ. ತುಪ್ಪ/ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಬಿಸಿ ಬಿಸಿ ಬಲು ರುಚಿ .

  3
 • ಕುಕ್ಕರಿನಲ್ಲಿ ತೊಗರಿ ಬೇಳೆ, ನೀರು, ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ಮೂರು – ನಾಲ್ಕು ಬಾರಿ ಕೂಗಿಸಿ, ಕೆಳಗಿಳಿಸಿಕೊಳ್ಳಿ. ಹುಣಿಸೆ ಹಣ್ಣನ್ನು ಸಣ್ಣ ಬೌಲಿನಲ್ಲಿ ನೆನೆಸಿಡಿ. ತರಕಾರಿಯನ್ನು ಹೋಳುಗಳನ್ನಾಗಿ ಮಾಡಿಟ್ಟುಕೊಳ್ಳಿ. ದಪ್ಪ ತಳದ ಬಾಣಲೆಗೆ ಕೊತ್ತಂಬರಿ ಬೀಜ, ಮೆಂತೆ, ಸಾಸಿವೆ, ಉದ್ದಿನ ಬೇಳೆ, ಬ್ಯಾಡಗಿ ಮೆಣಸಿನ ಕಾಯಿ ಮತ್ತು ಒಂದು ಚಮಚ ಎಣ್ಣೆ ಹಾಕಿ ಹುರಿಯಿರಿ. ಕೆಳಗಿಳಿಸುವ ಒಂದು ನಿಮಿಷ ಮೊದಲು ಕರಿಬೇವಿನ ಎಸಳನ್ನು ಹಾಕಿ ಬಾಡಿಸಿ. ಕೆಳಗಿಳಿಸಿದ ನಂತರ ತೆಂಗಿನ ತುರಿ ಹಾಕಿ ಬಾಡಿಸಿ. ಹುರಿದ ಮಸಾಲೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಒಂದು ಅಗಲ ಬಾಯಿಯ ಪಾತ್ರೆಗೆ ಬೆಂದ ಬೇಳೆಯನ್ನು…

  2
 • ಒಣ ಕೊಬ್ಬರಿಯನ್ನು ಕುಟ್ಟಿ ಹದ ಮಾಡಿಕೊಳ್ಳಿ. ನಸುಕಾದ ಬಣಲೆಗೆ ಮೆಣಸು ಹಾಕಿ. ಒಣಮೆಣಸಿನಕಾಯಿ ಎಣಿಸಿ ಹಾಕಿ ಕೊಬ್ಬರಿ ಹಳಕು ಹಾಕಿ ಮೊಗಚು ಕೈಯಾಡಿಸಿ ಆತುರವಿಲ್ಲದೆ ಕಡಲೆಬೇಳೆ ಬೆರಸಿ. ನಿಮಿಷ ಹುರಿದು ಚೆಕ್ಕೆ-ಲವಂಗ ಹಾಕಿ. ಕರಿಬೇವು ಹಾಕಿ ಒಂದೆರಡುಬಾರಿ ಆಡಿಸಿ. ತೊಗರಿಬೇಳೆ ಬೆರಸಿ. ಹುಣಿಸೆ ಹಣ್ಣು ಚೂರು-ಚೂರು ಮಾಡಿ ಹಾಕಿ ಒಂದು ನಿಮಿಷ ಹುರಿಯಿರಿ (ಎಲ್ಲಾ ಸಣ್ಣ ಉರಿಯಲ್ಲಿ) ಧನಿಯ ಹಾಕಿ, ಬೇಳೆ ಕೆಂಡ ಸಂಪಿಗೆ ಬಣ್ಣ ಬರುವವರೆಗೆ (ಎರಡು ನಿಮಿಷ) ಹುರಿಯಿರಿ. ಉರಿ ಆರಿಸಿ ಇಂಗು ಹಾಕಿ 30 ಸೆಕೆಂಡ್ ಕಾಲ ಆಡಿಸುತ್ತಲೇ ಇರಿ.
  ಅದು ತಣ್ಣಗಾಗುವ ಹೊತ್ತಿನಲ್ಲಿ, ಟೊಮ್ಯಾಟೋ ಕೊಚ್ಚಿ, ನಿಮ್ಮಿಷ್ಟ ತರಕಾರಿ…

  0
 • ಕುಕ್ಕರ್ ನಲ್ಲಿ ಬೆಣ್ಣೆಯನ್ನು ಕರಗಿಸಿ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಪೇಸ್ಟ ಸೇರಿಸಿ ಫ್ರೈ ಮಾಡಿ. ನಂತರ ಅದಕ್ಕೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಹಸಿ ಬಟಾಣಿ, ಟೊಮ್ಯಾಟೋ ಪ್ಯುರಿ ಸೇರಿಸಿ, ೩ ಗ್ಲಾಸ್ ನೀರು ಹಾಕಿ ೫-೬ ನಿಮಿಷಗಳ ಕಾಲ ಕುಕ್ಕರ್ ನಲ್ಲಿ ಬೇಯಿಸಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ೨-೩ ನಿಮಿಷಗಳ ಕಾಲ ಕುದಿಸಿ, ಅರ್ಧ ಕಪ್ ಹಾಲಿನಲ್ಲಿ ಕಾರ್ನ ಫ್ಲೋರ್ ಮಿಕ್ಸ್ ಮಾಡಿ ಸೇರಿಸಿ, ಉಪ್ಪು ಹಾಗೂ ಪೆಪ್ಪರ್ ಸೇರಿಸಿ, ಅಲಂಕಾರಕ್ಕೆ ಚೀಸ್ ತುರಿದು ಹಾಕಿ. ಬಿಸಿ ಬಿಸಿ ಸೂಪ್ ಚಳಿಗೆ ಹಿತವಾಗಿರುತ್ತದೆ.

  0
 • ದಪ್ಪ ತಳವಿರುವ ಬಾಣಲೆಗೆ ಎಣ್ಣೆ ಹಾಕಿ ಸ್ಟೌ ಮೇಲಿಡಿ. ಎಣ್ಣೆ ಬಿಸಿಯಾದ ನಂತರ ಉದ್ದಿನ ಬೇಳೆ ಹಾಕಿ ಹುರಿದು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ. ನಂತರ ಬಾಣಲೆಗೆ ಬ್ಯಾಡಗಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಅರ್ಧ ಹುರಿದಾದಾಗ ಹೀರೇಕಾಯಿ ಸಿಪ್ಪೆ ಹಾಕಿ ಬಾಡಿಸಿ. ನಂತರ ಬಾಡಿಸಿದ ಹೀರೇಕಾಯಿ ಸಿಪ್ಪೆ, ಮೆಣಸಿನಕಾಯಿ, ತೆಂಗಿನ ತುರಿ, ಉಪ್ಪು ಮತ್ತು ಹುಣಿಸೆ ಹಣ್ಣು, ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ತಿರುವಿಕೊಳ್ಳಿ. ಪೂರಾ ನುಣ್ಣಗಾಗುವ ಮೊದಲು ಹುರಿದ ಉದ್ದಿನ ಬೇಳೆ ಹಾಕಿ ತರಿತರಿಯಾಗಿ ತಿರುವಿ ಒಂದು ಬೌಲಿಗೆ ಬಗ್ಗಿಸಿಕೊಳ್ಳಿ. ನಂತರ ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. ರುಚಿ…

  3
 • ದಪ್ಪ ತಳವಿರುವ ಬಾಣಲೆಯನ್ನು ಒಲೆಯ ಮೇಲಿರಿಸಿ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಆದಾಗ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಜೀರಿಗೆ ಹಾಗೂ ಮೆಣಸಿನ ಕಾಯಿ ಹಾಕಿ ಬಾಡಿಸಿ. ನಂತರ ಸಬ್ಬಕ್ಕಿ ಹಾಕಿ ಹುರಿಯಿರಿ. ಒಲೆಯಿಂದ ಕೆಳಗಿಳಿಸಿ ಸಬ್ಬಕ್ಕಿ ಮಿಶ್ರಣ ಆರಿದ ನಂತರ, ಮಜ್ಜಿಗೆ ಹಾಕಿ, ಉಪ್ಪು, ಕಡಲೆಕಾಯಿ ಬೀಜ ಸೇರಿಸಿ ಒಂದು ಗಂಟೆ ನೆನೆಯಲು ಬಿಡಿ. ಕೊತ್ತಂಬರಿ ಸೊಪ್ಪು, ಮೊಸರು ಹಾಕಿ ಚೆನ್ನಾಗಿ ಕಲಕಿ. ರುಚಿ ರುಚಿಯಾದ ಮೊಸರು ಸಬ್ಬಕ್ಕಿ ರೆಡಿ.

  0
 • ಮೊದಲು ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು, ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಗರಿಬೇಳೆ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ ಬೇಯಿಸಿ. ಬೇಳೆಯನ್ನು ತುಂಬಾ ಬೇಯಿಸಬೇಡಿ. ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಸೊಪ್ಪನ್ನು ಹಾಕಿ, ರುಚಿಗೆ ತಕ್ಕ ಷ್ಟು ಉಪ್ಪನ್ನು ಹಾಕಿ, ಸೊಪ್ಪು ಬೇಯುವವರೆಗೂ ಬೇಯಿಸಿ.

  ನಂತರ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಜಾಲರಿಯಲ್ಲಿ ಸೋಸಿಕೊಂಡು ಸೊಪ್ಪಿನ ನೀರನ್ನು ಮತ್ತು ಸೊಪ್ಪನ್ನು ಬೇರೆ ಬೇರೆಯಾಗಿ ತೆಗೆದಿಟ್ಟುಕೊಳ್ಳಿ.

  ಮಸಾಲೆಗೆ:
  ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ…

  0
 • ಹುರುಳಿಕಾಳನ್ನು 10ಗಂಟೆಗಳ ಕಾಲ ನೆನೆಸಿಡಿ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಎರಡು ಗಂಟೆ ನೆನಸಿಡಿ. ಅಕ್ಕಿಯನ್ನು ತರಿತರಿಯಾಗಿ, ಉದ್ದಿನಬೇಳೆಯನ್ನು ನುಣ್ಣಗೆ ರುಬ್ಬಿ, ಎರಡನ್ನೂ ಬೆರೆಸಿ ಹುದುಗಲು ಬಿಡಿ. ಹುರುಳಿಕಾಳನ್ನು ನುಣ್ಣಗೆ ರುಬ್ಬಿ , ಹುದುಗಿದ ಅಕ್ಕಿ, ಉದ್ದಿನಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಉಪ್ಪು ಸೇರಿಸಿ ಕಲಸಿಕೊಳ್ಳಿ, ತಕ್ಷಣ ಲೋಟದಲ್ಲಿ ಹಾಕಿ, ಕಡುಬಿನ ರೀತಿಯಲ್ಲಿ ಹಬೆಯಲ್ಲಿ ಬೇಯಿಸಿ. ಬಿಸಿಯಿರುವಾಗ ಮೃದುವಾದ ಈ ಸುರುಳಿ ಕಡುಬನ್ನು ಬೆಣ್ಣೆ ಮತ್ತು ಕಾಯಿ ಚಟ್ನಿಯೊಂದಿಗೆ ಸವಿಯಿರಿ.

  0