ಪೇರಳೆ ಚಿಗುರಿನ ತಂಬುಳಿ

ಪೇರಳೆ ಚಿಗುರಿನ ತಂಬುಳಿ

ಬೇಕಿರುವ ಸಾಮಗ್ರಿ

ಪೇರಳೆ ಚಿಗುರು ೧/೨ ಕಪ್, ಕಾಯಿತುರಿ ೧ ಕಪ್, ಜೀರಿಗೆ ೧ ಚಮಚ, ಮಜ್ಜಿಗೆ ೧ ಕಪ್, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ

ಪೇರಳೆ ಚಿಗುರು ಮತ್ತು ಜೀರಿಗೆಯನ್ನು ಒಟ್ಟಾಗಿ ಬೇಯಿಸಿ. ಉಪ್ಪು, ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ಮಜ್ಜಿಗೆ ಹಾಕಿದರೆ ತಂಬುಳಿ ರೆಡಿ. ಮಕ್ಕಳಿಗೆ ಅಜೀರ್ಣದಿಂದ ಬೇಧಿಯಾದರೆ ಇದು ಒಳ್ಳೆಯ ಮದ್ದು. ದೊಡ್ಡವರಿಗೂ ಉತ್ತಮ.

- ಸಹನಾ ಕಾಂತಬೈಲು, ಮಡಿಕೇರಿ