ಪುನರ್ಪುಳಿ ಸಿಪ್ಪೆ ತಂಬುಳಿ
ಬೇಕಿರುವ ಸಾಮಗ್ರಿ
ಪುನರ್ಪುಳಿ ಸಿಪ್ಪೆ (ಕೋಕಂ) ೩, ಕಾಯಿತುರಿ ೧ ಕಪ್, ಜೀರಿಗೆ ೧ ಚಮಚ, ಬೆಲ್ಲ ನೆಲ್ಲಿಕಾಯಿ ಗಾತ್ರ, ಉಪ್ಪು ರುಚಿಗೆ.
ತಯಾರಿಸುವ ವಿಧಾನ
ಪುನರ್ಪುಳಿ ಸಿಪ್ಪೆ, ಕಾಯಿತುರಿ, ಜೀರಿಗೆ, ಬೆಲ್ಲ, ಉಪ್ಪು ಎಲ್ಲ ಒಟ್ಟಿಗೆ ಹಾಕಿ ನುಣ್ಣಗೆ ರುಬ್ಬಿ ಬೇಕಷ್ಟು ನೀರು ಸೇರಿಸಿದರೆ ತಂಬುಳಿ ತಯಾರಾಯಿತು. ಇದಕ್ಕೆ ಮಜ್ಜಿಗೆ ಸೇರಿಸಲು ಇಲ್ಲ.
- ಸಹನಾ ಕಾಂತಬೈಲು, ಮಡಿಕೇರಿ