ಮೊದಲಿಗೆ ಬಟಾಟೆಯನ್ನು ಚೆನ್ನಾಗಿ ತೊಳೆದು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. ಅದಕ್ಕೆ ಫಿಷ್ ಫ್ರೈ /ಬೋಂಡಾ ಮಸಾಲವನ್ನು ನೀರಿನಲ್ಲಿ ಕಲಸಿ ಪೇಸ್ಟ್ ತರಹ ಮಾಡಿ ಚೆನ್ನಾಗಿ ತಾಗಿಸಿ. ಉಪ್ಪು ಬೇಕಾದಲ್ಲಿ ರುಚಿಗೆ ತಕ್ಕಷ್ಟು ಹಾಕಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಮಸಾಲೆ…
ರುಚಿ ಸಂಪದ
ಮೊದಲಿಗೆ ನೀರುಳ್ಳಿಯನ್ನು ಉದ್ದಕ್ಕೆ ಸಪೂರವಾಗಿ ಕತ್ತರಿಸಬೇಕು. ಅದಕ್ಕೆ ಉಪ್ಪುಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಅದು ನೀರು ಬಿಟ್ಟು ಕೊಳ್ಳುತ್ತೆ. ಆಗ ಅದಕ್ಕೆ ಮೆಣಸಿನ ಹುಡಿ, ಜೀರಿಗೆ, ಕರಿಬೇವು ಹಾಕಿ ಚೆನ್ನಾಗಿ ಬೆರೆಸಿ ನಂತರ ಅದಕ್ಕೆ ಹಿಡಿಯುವಷ್ಟು ಕಡಲೇ ಹಿಟ್ಟು ಬೆರೆಸಿ. ಅಗತ್ಯ ಇದ್ದಲ್ಲಿ ಮಾತ್ರ ಸ್ವಲ್ಪ ನೀರು…
0ಮೊದಲಿಗೆ ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಬೌಲ್ ನಲ್ಲಿ ಹಾಕಿಡಿ. ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾದ ಬಳಿಕ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ,ಕರಿಬೇವಿನ ಸೊಪ್ಪು, ಜೀರಿಗೆ, ಒಣಮೆಣಸು, ಸಣ್ಣದಾಗಿ ಕತ್ತರಿಸಿದ ನೀರುಳ್ಳಿ ಹಾಕಿ. ನೀರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ…
0ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಬೆಳ್ಳುಳ್ಳಿ, ಸಾಸಿವೆ, ಉದ್ದಿನ ಬೇಳೆ, ಒಣಮೆಣಸು, ಕರಿಬೇವು, ಸಣ್ಣದಾಗಿ ಕತ್ತರಿಸಿದ ನೀರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಸಣ್ಣದಾಗಿ ಕತ್ತರಿಸಿದ ಬಟಾಟೆ, ಕತ್ತರಿಸಿದ ಟೋಮೇಟೋ, ಸಣ್ಣದಾಗಿ ಕತ್ತರಿಸಿದ ಹಸಿ ಮೆಣಸು ಹಾಕಿ. ಬಟಾಟೆ ಬೇಯಲು ಬೇಕಾದಷ್ಟು…
1ಮೊದಲು ಶಾವಿಗೆಯನ್ನು ಕಾವಲಿಯಲ್ಲಿ ಹಾಕಿ ಹುರಿಯಿರಿ. ನಂತರ ಬಾಣಲೆಗೆ ತೆಂಗಿನ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿದ ಕಾಯಿಮೆಣಸು, ಕತ್ತರಿಸಿದ ಈರುಳ್ಳಿ, ಉದ್ದಿನ ಬೇಳೆ, ಕಡಲೇ ಬೇಳೆ, ಕರಿ ಬೇವಿನ ಸೊಪ್ಪು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಹುರಿದ ಶ್ಯಾವಿಗೆಯನ್ನು ಹಾಕಿ, ಒಲೆಯನ್ನು ಸಣ್ಣದು ಮಾಡಿ, ಬೇಯಲು…
0ಈರುಳ್ಳಿ ಮತ್ತು ಕಾಯಿಮೆಣಸನ್ನು ಸಣ್ಣಗೆ ತುಂಡರಿಸಿಕೊಳ್ಳಿ. ಗೋಧಿ ಹಿಟ್ಟಿಗೆ ಮೊಟ್ಟೆಯನ್ನು ಒಡೆದು ಹಾಕಿ ಅದರಲ್ಲೇ ಹಿಟ್ಟನ್ನು ಕಲಸಿ. ತುಂಬಾ ದಪ್ಪವಾಗದಂತೆ ಸ್ವಲ್ಪ ನೀರನ್ನು ಹಾಕ ಬಹುದು. ದೋಸೆ ಹಿಟ್ಟಿನಷ್ಟು ಹದಕ್ಕೆ ಬಂದ ಬಳಿಕ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಕಾಯಿಮೆಣಸು, ಬೇವು ಮತ್ತು ಕೊತ್ತಂಬರಿ ಸೊಪ್ಪು, ರುಚಿಗೆ…
0ತಯಾರಿಕಾ ವಿಧಾನ: ಮೊದಲಿಗೆ ಬಾಳೆದಿಂಡಿನ ನಾರನ್ನು ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ. ಅರ್ಧ ಗಂಟೆ ನೆನೆಯಲು ಹಾಕಿದ ಅಕ್ಕಿ ಹಾಗೂ ತೊಗರಿ ಬೇಳೆಯನ್ನು ಜಾಲರಿಯಲ್ಲಿ ನೀರು ಹೋಗುವಂತೆ ಜಾಲಾಡಿ. ಬಾಳೆದಿಂಡನ್ನು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು ತರಿ ತರಿಯಾಗಿ ನೀರನ್ನು ಹಾಕದೇ…
0ಮೊದಲಿಗೆ ಕರಿಬೇವನ್ನು ಚೆನ್ನಾಗಿ ತೊಳೆದು ಸ್ವಚ್ಚ ಗೊಳಿಸಿ. ಒಣ ಕೊಬ್ಬರಿಯನ್ನು ತುರಿದು ಇಡಿ. ಕರಿ ಬೇವು ಮತ್ತು ಮೆಣಸನ್ನು ಪ್ರತ್ಯೇಕವಾಗಿ ಹುರಿಯಿರಿ. ಕಡಲೇ ಬೇಳೆಯನ್ನು ಹುರಿದು ನಯವಾಗಿ ಹುಡಿಯಾಗುವಂತೆ ಮಿಕ್ಸಿಯಲ್ಲಿ ಹುಡಿ ಮಾಡಿರಿ. ಕೊಬ್ಬರಿ ತುರಿಯನ್ನು ತುಪ್ಪದಲ್ಲಿ ಹುರಿಯಿರಿ. ಇಂಗನ್ನು…
0ತಯಾರಿಕಾ ವಿಧಾನ: ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಮತ್ತು ಕೆಂಪು ಮೆಣಸನ್ನು ಹಾಕಿ ಹುರಿಯಿರಿ. ಸಾಸಿವೆ ಸಿಡಿದ ನಂತರ ಕತ್ತರಿಸಿದ ಗೇರು ಬೀಜಗಳನ್ನು ಬಾಣಲೆಗೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯುವಷ್ಟು ಸ್ವಲ್ಪ ನೀರು ಹಾಕಿ, ಬಾಣಲೆಯ ಬಾಯಿ ಹಾಕಿ ಸ್ವಲ್ಪ ಸಮಯದವರೆಗೆ ಬೇಯಿಸಿ. ಬೆಂದ ಮೇಲೆ ತೆಂಗಿನ ತುರಿ, ಸ್ವಲ್ಪ ಇಂಗಿನ ನೀರು, ಚಿಟಿಕೆಯಷ್ಟು ಸಕ್ಕರೆ ಹಾಕಿ ಮಗುಚಿ ಕೆಳಗಿಡಿ. ಗೇರುಬೀಜದ ಜೊತೆ ಎಳೆಯ ತೊಂಡೆಕಾಯಿಗಳನ್ನೂ ಕತ್ತರಿಸಿ ಜೊತೆಯಲ್ಲೇ ಬೆರೆಸಿ ಪಲ್ಯ ತಯಾರಿಸಿದರೆ ಇನ್ನೂ…
0ವಿಧಾನ ತಿಳಿಸುವ ಮುಂಚೆ :
ಹಾಗಲಕಾಯಿ ಎಂದಾಕ್ಷಣ ಕೆಲವರು ಮುಖ ಮುದುರಿಕೊಳ್ಳುತ್ತದೆ , ಎಷ್ಟು ಬೆಲ್ಲ ಹಾಕಿ ಮಾಡಿದರೂ ಕೆಲವರಿಗೆ ಇಷ್ಟವಾಗುವುದಿಲ್ಲ , ಆದರೆ ಈ ರೀತಿ ಮಾಡಿದ ಗೊಜ್ಜು ಎಲ್ಲರು ಇಷ್ಟ ಪಡುತ್ತಾರೆ . ನನಗೆ ಬಂದ ಅನುಭವದಲ್ಲಿ ಹಾಗಲಕಾಯಿ ತಿನ್ನಲ್ಲ ಅನ್ನುವವರು ಇಷ್ಟಪಟ್ಟು ತಿಂದಿದ್ದಾರೆ . ತಪ್ಪದೇ ಪ್ರಯತ್ನ ಮಾಡಿ ಹಾಗೂ ಹಾಗಲಕಾಯಿಂದಿರುವ ಪ್ರಯೋಜನವನ್ನ ಪಡೆದುಕೊಳ್ಳಿ .
ಸೂಚನೆ: ಮೇಲೆ ತಿಳಿಸಿರುವ ಅಳತೆಯಂತೆಯೇ ಮಾಡುವ ಅವಶ್ಯಕತೆ ಇರುವುದಿಲ್ಲ , ನಿಮ್ಮ ರುಚಿಗೆ ತಕ್ಕಷ್ಟು ಕಾರ ಮತ್ತು ಹುಳಿ ಬಳಸಿಕೊಳ್ಳಿ .
ಮಾಡುವ ವಿಧಾನ :
೧. ಹಾಗಲಕಾಯಿ…0