ಉಪ್ಪಿನಕಾಯಿ ಮಿಡಿ ತಂಬುಳಿ.

ಉಪ್ಪಿನಕಾಯಿ ಮಿಡಿ ತಂಬುಳಿ.

ಬೇಕಿರುವ ಸಾಮಗ್ರಿ

ಉಪ್ಪಿನಕಾಯಿ ಮಿಡಿ ೨, ತೆಂಗಿನತುರಿ ೧ ಕಪ್, ಮಜ್ಜಿಗೆ ೨ ಸೌಟು, ಒಗ್ಗರಣೆಗೆ ಎಣ್ಣೆ, ಮೆಣಸು, ಸಾಸಿವೆ .

ತಯಾರಿಸುವ ವಿಧಾನ

ಉಪ್ಪಿನ ಕಾಯಿ ಮಿಡಿಯನ್ನು ತೊಳೆದು ಹೆಚ್ಚಿನ ಖಾರ ತೆಗೆದುಬಿಡಬೇಕು. ಆಮೇಲೆ ಮಾವಿನ ಮಿಡಿಯನ್ನು ತೆಂಗಿನತುರಿಯನ್ನು ನುಣ್ಣಗೆ ಬೀಸಬೇಕು. ಆ ಮಿಶ್ರಣ ವನ್ನು ಮಜ್ಜಿಗೆ ಬೇಕಿದ್ದರೆ ಉಪ್ಪು , ನೀರು ಸ್ವಲ್ಪ ಹಾಕಿ ಕುದಿಸಬೇಕು. ಸಣ್ಣ ಕುದಿ ಬಂದಾಗ ಮೆಣಸು, ಸಾಸಿವೆ ಎಣ್ಣೆ ಹಾಕಿ ಒಗ್ಗರಣೆ ಕೊಟ್ಟರೆ ರುಚಿ ರುಚಿಯಾದ ಪರಿಮಳಯುಕ್ತ ತಂಬುಳಿ ತಯಾರು. 

-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ