ಅನನಾಸ್ ಹಣ್ಣಿನ ಗೊಜ್ಜು
ಬೇಕಿರುವ ಸಾಮಗ್ರಿ
ಅನನಾಸ್ ಹಣ್ಣಿನ ಹೋಳುಗಳು - ೨ ಕಪ್, ತೆಂಗಿನ ತುರಿ - ಅರ್ಧ ಕಪ್, ಬೆಲ್ಲದ ಹುಡಿ - ೩ ಚಮಚ, ಒಣ ಮೆಣಸಿನಕಾಯಿ - ೭-೮, ಮೆಂತ್ಯದ ಕಾಳುಗಳು - ೧ ಚಮಚ, ಚೆಕ್ಕೆ - ೧, ಎಣ್ಣೆ - ೪ ಚಮಚ, ಸಾಸಿವೆ - ೧ ಚಮಚ, ಇಂಗು - ಕಾಲು ಚಮಚ, ಕರಿಬೇವಿನ ಎಲೆ - ೮-೧೦, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಅನನಾಸ್ ಹಣ್ಣಿನ ಹೋಳುಗಳನ್ನು ಎಣ್ಣೆಯಲ್ಲಿ ಬಾಡಿಸಿ ಬೇಯಿಸಿಡಿ. ಇಣ ಮೆಣಸಿನಕಾಯಿ, ಮೆಂತ್ಯದ ಕಾಳುಗಳು, ಚೆಕ್ಕೆಗಳನ್ನು ಎಣ್ಣೆಯಲ್ಲಿ ಹುರಿದು ತೆಂಗಿನಕಾಯಿ ತುರಿಯೊಂದಿಗೆ ರುಬ್ಬಿ. ಎಣ್ಣೆ ಕಾಯಿಸಿ ಸಾಸಿವೆ-ಇಂಗು-ಕರಿಬೇವು ಹಾಕಿ ಒಗ್ಗರಣೆ ಮಾಡಿ.
ಒಗ್ಗರಣೆಗೆ ರುಬ್ಬಿದ ಮಿಶ್ರಣ, ಬೆಲ್ಲದ ಹುಡಿ, ಉಪ್ಪು, ಬೇಯಿಸಿದ ಅನನಾಸ್ ಹೋಳುಗಳನ್ನು ಹಾಕಿ ಕುದಿಸಿ. ರುಚಿಯಾದ ಅನನಾಸ್ ಗೊಜ್ಜು, ಚಪಾತಿಯೊಂದಿಗೆ ತಿನ್ನಲು ಬಹಳ ರುಚಿಕರ.