ಗೋಳಿಬಜೆ

ಗೋಳಿಬಜೆ

ಬೇಕಿರುವ ಸಾಮಗ್ರಿ

ಮೈದಾ ಹಿಟ್ಟು - ೨ ಕಪ್, ಕಡಲೆ ಹಿಟ್ಟು - ಅರ್ಧ ಕಪ್, ಮೊಸರು - ೨ ಕಪ್, ಕತ್ತರಿಸಿದ ಹಸಿಮೆಣಸಿನಕಾಯಿ - ೮ ತುಂಡುಗಳು, ಶುಂಠಿಯ ತುರಿ - ೧ ಚಮಚ, ಕತ್ತರಿಸಿದ ಕರಿಬೇವಿನ ಎಲೆಗಳು - ೩ ಚಮಚ, ತೆಂಗಿನಕಾಯಿಯ ಚಿಕ್ಕ ತುಂಡುಗಳು - ೧೦, ಜೀರಿಗೆ - ೩ ಚಮಚ, ಸಕ್ಕರೆ - ೧ ಚಮಚ, ಅಡುಗೆ ಸೋಡಾ - ಅರ್ಧ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ

ಮೈದಾ ಹಿಟ್ಟು, ಕಡಲೆ ಹಿಟ್ಟು, ಉಪ್ಪುಗಳನ್ನು ಸೇರಿಸಿ, ಮೊಸರಿನಲ್ಲಿ ಗಟ್ಟಿಯಾಗಿ ಕಲಸಿಡಿ. ಈ ಮಿಶ್ರಣಕ್ಕೆ ಹಸಿ ಮೆಣಸಿನಕಾಯಿ, ಶುಂಠಿಯ ತುರಿ, ಕರಿಬೇವಿನ ಸೊಪ್ಪು, ತೆಂಗಿನ ಕಾಯಿಯ ಚೂರುಗಳು, ಜೀರಿಗೆ, ಸಕ್ಕರೆ, ಅಡುಗೆ ಸೋಡಾ ಬೆರೆಸಿ ಚೆನ್ನಾಗಿ ಕಲಕಿ ದೋಸೆ ಹಿಟ್ಟಿಗಿಂತ ಗಟ್ಟಿಯಾದ ಮಿಶ್ರಣ ತಯಾರಿಸಿ ಅರ್ಧ ಗಂಟೆ ಇಡಿ. ನೆನೆಸಿದ ಮಿಶ್ರಣದಿಂದ ನಿಂಬೆ ಗಾತ್ರದ ಹಿಟ್ಟನ್ನು ಕಾದ ಎಣ್ಣೆಯಲ್ಲಿ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ. ರುಚಿಯಾದ ಗೋಳಿಬಜೆ ಸವಿಯಲು ಸಿದ್ಧ. ಕಾಯಿ ಚಟ್ನಿಯೊಂದಿಗೆ ಬಹಳ ರುಚಿಕರವಾಗಿರುತ್ತದೆ.