ರುಚಿ ಸಂಪದ

  • ಮೊದಲಿಗೆ ಸಿಹಿಗುಂಬಳಕಾಯಿ ತುರಿದು ಕುಕ್ಕರ್ ನಲ್ಲಿ ಕೇವಲ ಒಂದು ಸೀಟಿ ಕೂಗಿಸಿ ಬೇಯಿಸಿ ಇಟ್ಟು ಕೊಳ್ಳಬೇಕು.ಬೆಲ್ಲ ಕುದಿಸಿ ಸೋಸಿ ಸ್ವಲ್ಪ ನೂಲಿನೆಳೆ ಪಾಕ ಮಾಡಿಟ್ಟುಕೊಳ್ಳಬೇಕು.ನಂತರ ಗೋಧಿಹಿಟ್ಟನ್ನು ಎರಡು ಚಮಚ ತುಪ್ಪದಲ್ಲಿ ಸ್ವಲ್ಪ ಕೆಂಪಗೆ ಘಮ್ ಎನ್ನುವ ಹಾಗೆ ಹುರಿದು ಇದಕ್ಕೆ ಬೇಯಿಸಿದ ಸಿಹಿಗುಂಬಳಕಾಯಿ, ಬೆಲ್ಲ ,ಏಲಕ್ಕಿ ಪುಡಿ,ಎಲ್ಲವನ್ನು ಹಾಕಿ ಚೆನ್ನಾಗಿ ಕಲೆಸಿ ಪುಟ್ಟ ಉಂಡೆ ಮಾಡಿ ಕಜ್ಜಾಯದಂತೆ ಒತ್ತಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಬೇಕು.ಬಿಸಿಬಿಸಿ ಕಜ್ಜಾಯ ತಿನ್ನಲು ರೆಡಿ.

    0
  • ಮಾಡುವ ವಿಧಾನ - ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿಯಾದ ನಂತರ ಸಾಸಿವೆ ಜೀರಿಗೆ ಸಿಡಿಸಿ. ಕರಿಬೇವು ಈರುಳ್ಳಿಯನ್ನು ಮತ್ತು ಟೊಮ್ಯಾಟೋ ಹಾಕಿ ಚೆನ್ನಾಗಿ ಬಾಡಿಸಿ. ಚನ್ನಾಗಿ ಬೆಂದ ನಂತರ ಅಚ್ಚ ಕಾರದ ಪುಡಿ ಮತ್ತು ಉಪ್ಪು ಸೇರಿಸಿ ಮತ್ತಷ್ಟು ಬಾಡಿಸಿ ಈಗ ರವೆ ಹಾಕಿ ಚೆನ್ನಾಗಿ ಮಿಶ್ರಗೊಳಿಸಿ. ನಂತರ 3 ಲೋಟ ನೀರನ್ನು ಸೇರಿಸಿ 8 ರೊಂದ 10 ನಿಮಿಷ ಗಟ್ಟಿಯಾಗುವ ತನಕ ಆಡಿಸುತ್ತಲೇ ಇರಿ. ಈಗ ನಿಮ್ಮ ಟೊಮ್ಯಾಟೋ ಉಪ್ಪಿಟ್ಟು ಸವಿಯಲು ತಟ್ಟೆಗೆ ಹಾಕಿ ಕೊತ್ತಂಬರಿ ಸೊಪ್ಪು ಉದುರಿಸಿ. ಆಹಾ ಇಂಥ ಸವಿಯಾದ ಉಪ್ಪಿಟ್ಟು.

    0
  • ಬೆಂಡೆಕಾಯಿಯನ್ನು ಬಿಲ್ಲೆ (ಅರ್ಧ ಇಂಚು ದಪ್ಪ) ಆಕಾರದಲ್ಲಿ ಹೆಚ್ಚಿಕೊಂಡು, ಬಾಣಲೆಯಲ್ಲಿ 4 ಟೀ ಚಮಚ ಎಣ್ಣೆಯೊಂದಿಗೆ ಹುರಿಯಿರಿ. ಬೆಂಡೆಕಾಯಿ ಸ್ವಲ್ಪ ಕಪ್ಪು ಆಗುವ ರೀತಿ. ನಂತರ ಹಸಿ ಮೆಣಸಿನಕಾಯಿಯನ್ನು ಅದೇ ರೀತಿ ಹುರಿದು ಕೊಳ್ಳಿ. ಬೆಂಡೆಕಾಯಿ ಒಂದನ್ನು ಬಿಟ್ಟು ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸರ್ ಗೆ ಹಾಕಿ ರುಬ್ಬಿಕೊಳ್ಳಿ ನಂತರ ತಣ್ಣಗಾದ ಹುರಿದ ಬೆಂಡೆಕಾಯಿಯನ್ನು ಸೇರಿಸಿ ಸ್ವಲ್ಪ ಮಾತ್ರವೇ ರುಬ್ಬಿಕೊಳ್ಳಿ. ಈಗ ಬೆಂಡೆಕಾಯಿ ಚಟ್ನಿ ಸವಿಯಲು ಸಿದ್ಧ. ಚಪಾತಿ ಹಾಗು ರೊಟ್ಟಿಯೊಂದಿಗೆ ತುಂಬಾ ರುಚಿಯಾಗಿರುತ್ತದೆ.

    2
  • ಒಂದು ದೊಡ್ಡ ತೋತಾಪುರಿ ಮಾವಿನ ಕಾಯನ್ನು [ಹಸಿರು ಸಿಪ್ಪೆ ಇರಬೇಕು] ತೊಳೆದು ಸಿಪ್ಪೆ ತೆಗೆಯಿರಿ. ಒಳಗಿನ ಕಾಯಿಯನ್ನು ವಾಟೆಯಿಂದ‌ ಬೇರ್ಪಡಿಸಿ ತುರಿಯಿರಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುರಿದ ಕಾಯನ್ನು ಹಾಕಿ ಹತ್ತು ನಿಮಿಷ ಬಾಡಿಸಿ. ನಂತರ ಮಾವಿನ ತುರಿಯಷ್ಟೇ ಅಳತೆಯಲ್ಲಿ ಸಕ್ಕರೆಯನ್ನು ಸೇರಿಸಿ. ಸುಮಾರು ಮೂವತ್ತು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಆಗಾಗ‌ ಕೈಯಾಡಿಸುತ್ತಾ ಬೇಯಿಸಿ. ಮಿಶ್ರಣವು ಪಾತ್ರೆಯ ತಳವನ್ನು ಬಿಡಲು ಆರಂಭಿಸುತ್ತಿದ್ದಂತೆಯೇ ಒಂದು ಚಿಟಿಕೆ ಉಪ್ಪು ಸೇರಿಸಿ . ಪಾತ್ರೆಯನ್ನು ಒಲೆಯಿಂದ ಇಳಿಸಿ ಮೂವತ್ತು ನಿಮಿಷ ತಣಿಯಲು ಬಿಡಿ. ನಂತರ ಗಾಳಿಯಾಡದಂತೆ ಜಾಡಿಯಲ್ಲಿ ತುಂಬಿಸಿಡಿ. ಹುಳಿ‍‍‍ ‍‍‍ಸಿಹಿ…

    3
  • ಈ ಮೇಲೆ ಬರೆದಿರುವ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಕಲೆಸಿ/ mix ಮಾಡಿ. 

    ‍ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ‍ ಖಾದ ನಂತರ, ‍mix ಅನ್ನು ಸ್ವಲ್ಪ‍ ಸ್ವಲ್ಪ‍‍ ತೆಗೆದುಕೊಂಡು, ಕಾಯಿಸಿ. 

    ‍ಕೆಂಪಗೆ ಕರಿದ, ಬಿಸಿ ಬಿಸಿ ವಡೆ ರೆಡಿ. 

    2
  • ಬೆಳಗ್ಗೆ ಹೆಸರು ಬೇಳೆ ಮತ್ತು ಅವಲಕ್ಕಿ ಸೇರಿಸಿ, ನೆನೆಯಲು ಇಡಿ. 

    ‍ಮಧ್ಯಾಹ್ನದ ವೇಳೆ ಬೇಕಾಗುವಷ್ಟು ನೀರು ಸೇರಿಸಿ, mixer/grinder ‍ನಲ್ಲಿ ತಿರುವಿ, ಹಿಟ್ಟು ತಯಾರಿಸಿಕೊಳ್ಳಿ. 

    ‍ಹಿಟ್ಟಿಗೆ ಅಕ್ಕಿ ರವೆ ಸೇರಿಸಿ, ಬೆರೆಸಿಕೊಳ್ಳಿ. 

    ‍ಮಾರನೆ ದಿನಕ್ಕೆ ರುಚಿಯಾದ ಇಡ್ಲಿ ತಯಾರಿಸಲು, ಹಿಟ್ಟು ಉಕ್ಕಿರುತ್ತದೆ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಇಡ್ಲಿ ಅಟ್ಟಕ್ಕೆ ಹಿಟ್ಟು ಹೊಯ್ದು, ಬಿಸಿ ಬಿಸಿ ಇಡ್ಲಿ ತಯಾರಿಸಿ, ಚಟ್ನಿ/ಸಾಂಬಾರ್ ನೊಂದಿಗೆ ಬಡಿಸಿ. 

    3