ಹಣ್ಣುಗಳ ಚಾಟ್

ಹಣ್ಣುಗಳ ಚಾಟ್

ಬೇಕಿರುವ ಸಾಮಗ್ರಿ

ಬಾಳೆ ಹಣ್ಣಿನ ತುಂಡುಗಳು - ೧ ಕಪ್, ಸೇಬಿನ ಹಣ್ಣಿನ ತುಂಡುಗಳು - ಅರ್ಧ ಕಪ್, ಬೀಜ ತೆಗೆದು ಕತ್ತರಿಸಿದ ಕಿತ್ತಳೆ ಹಣ್ಣಿನ ತುಂಡುಗಳು - ಕಾಲು ಕಪ್, ಸ್ಟ್ರಾಬೆರಿ ಹಣ್ಣಿನ ತುಂಡುಗಳು - ಕಾಲು ಕಪ್, ಪನ್ನೀರ್ ತುಂಡುಗಳು - ಕಾಲು ಕಪ್, ನಿಂಬೆ ರಸ - ೨ ಚಮಚ, ಪುದೀನಾ ಎಲೆಗಳು - ೧೦-೧೨, ಸಕ್ಕರೆ - ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಸ್ವಲ್ಪ ಕಾಳು ಮೆಣಸಿನ ಹುಡಿ.

ತಯಾರಿಸುವ ವಿಧಾನ

ಪುದೀನಾ ಎಲೆಗಳು, ನಿಂಬೆ ರಸ, ಕಾಳು ಮೆಣಸಿನ ಹುಡಿಗಳನ್ನು ಸೇರಿಸಿ ರುಬ್ಬಿ. ಪನ್ನೀರಿನ ತುಂಡುಗಳನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಕೊಂಡಿರಿ. ತಟ್ಟೆಯಲ್ಲಿ ಎಲ್ಲಾ ಹಣ್ಣುಗಳನ್ನು ಹರಡಿ ಅರೆದ ಮಿಶ್ರಣ, ಪನ್ನೀರ್ ತುಂಡುಗಳು, ಸಕ್ಕರೆ, ಉಪ್ಪು ಹಾಕಿ ಕಲಕಿದರೆ ಹಣ್ಣಿನ ಚಾಟ್ ತಯಾರು. 

ಹಣ್ಣುಗಳ ಜೊತೆ ಸೌತೇಕಾಯಿ, ಕ್ಯಾರೆಟ್ ಮುಂತಾದ ತರಕಾರಿಗಳನ್ನೂ ಬಳಸಿಕೊಂಡು ಚಾಟ್ ಮಾಡಬಹುದು. ಬೇಸಿಗೆಯಲ್ಲಿ ಇದು ಆರೋಗ್ಯದಾಯಕವೂ ಹೌದು.