ಗರಿಗರಿ ಕೋಡುಬಳೆ

ಗರಿಗರಿ ಕೋಡುಬಳೆ

ಬೇಕಿರುವ ಸಾಮಗ್ರಿ

ಅಕ್ಕಿ ಹಿಟ್ಟು - ೨ ಕಪ್, ತೆಂಗಿನಕಾಯಿ ತುರಿ - ೧ ಕಪ್, ಮೈದಾ ಹಿಟ್ಟು - ೨ ಚಮಚ, ಕೆಂಪು ಮೆಣಸಿನ ಕಾಯಿ - ೩ ಚಮಚ, ಇಂಗು - ಅರ್ಧ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಅಕ್ಕಿ ಹಿಟ್ಟು, ಮೈದಾ ಹಿಟ್ಟು ಹಾಗೂ ಉಪ್ಪು ಸೇರಿಸಿಡಿ. ಕೆಂಪು ಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ತೆಂಗಿನಕಾಯಿ, ಇಂಗುಗಳೊಂದಿಗೆ ಸೇರಿಸಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿ ಸ್ವಲ್ಪ ಹಿಟ್ಟು ತೆಗೆದುಕೊಂಡು ಕೋಡುಬಳೆ ಆಕಾರದಲ್ಲಿ ಸುತ್ತಿ ಕಾದ ಎಣ್ಣೆಯಲ್ಲಿ ಕರಿಯಿರಿ. ರುಚಿಯಾದ, ಗರಿಗರಿಯಾದ ಕೋಡುಬಳೆ ಸವಿಯಲು ಸಿದ್ಧ.