ವೆಜಿಟೇಬಲ್ ಪ್ಯಾಟೀಸ್

ವೆಜಿಟೇಬಲ್ ಪ್ಯಾಟೀಸ್

ಬೇಕಿರುವ ಸಾಮಗ್ರಿ

ಸಣ್ಣಗೆ ಹೆಚ್ಚಿದ ಬೀನ್ಸ್ - ಅರ್ಧ ಕಪ್, ಕ್ಯಾರೆಟ್ ತುರಿ - ಅರ್ಧ ಕಪ್, ತರಿಯಾಗಿ ಹುಡಿ ಮಾಡಿದ ಕಡಲೇ ಕಾಯಿ ಬೀಜ - ಅರ್ಧ ಕಪ್, ಆಲೂಗಡ್ಡೆ ತುರಿ - ೧ ಕಪ್, ಕತ್ತರಿಸಿದ ಈರುಳ್ಳಿ - ಅರ್ಧ ಕಪ್, ಹೆಚ್ಚಿದ ಹಸಿ ಮೆಣಸಿನಕಾಯಿ - ೫-೬ ತುಂಡುಗಳು, ಕತ್ತರಿಸಿದ ಕೊತ್ತಂಬರಿ ಸೊಪ್ಪು - ಕಾಲು ಕಪ್, ಬ್ರೆಡ್ ಸ್ಲೈಸ್ ೫-೬, ಎಣ್ಣೆ - ಕಾಲು ಕಪ್, ಗರಮ್ ಮಸಾಲೆ - ೩ ಚಮಚ, ಇಂಗು - ಕಾಲು ಚಮಚ, ಚಿರೋಟಿ ರವೆ - ಮುಕ್ಕಲು ಕಪ್, ಸಾಸಿವೆ - ೧ ಚಮಚ, ಉಪ್ಪು - ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ

ಕಾದ ಎಣ್ಣೆಗೆ ಸಾಸಿವೆ- ಇಂಗಿನ ಒಗ್ಗರಣೆ ಮಾಡಿ. ಹಸಿ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಬಾಡಿಸಿ, ಬೀನ್ಸ್, ಕ್ಯಾರೆಟ್ ತುರಿ, ಆಲೂಗಡ್ಡೆ ತುರಿಗಳನ್ನು ಹಾಕಿ ಸ್ವಲ್ಪ ನೀರಿನೊಂದಿಗೆ ಬೇಯಿಸಿ. ಈ ಮಿಶ್ರಣಕ್ಕೆ ಉಪ್ಪು, ಗರಮ್ ಮಸಾಲೆ ಹುಡಿ, ಕೊತ್ತಂಬರಿ ಸೊಪ್ಪು ಹಾಕಿ ಕೈಯಾಡಿ ಒಲೆಯಿಂದ ಕೆಳಗಿಡಿಸಿ. ತರಕಾರಿ ಮಿಶ್ರಣ ತಣಿದ ಮೇಲೆ, ಬ್ರೆಡ್ ಚೂರು ಹಾಗೂ ಕಡಲೇ ಬೀಜದ ತರರಿ ಸೇರಿಸಿ, ವಡೆಯಾಕಾರದಲ್ಲಿ ತಟ್ಟಿ, ಚಿರೋಟಿ ರವೆಯಲ್ಲಿ ಹೊರಳಿಸಿ, ಕಾಯಿಸಿ ಎಣ್ಣೆ ಸವರಿದ ತವಾದ ಮೇಲೆ ಎರಡೂ ಬದಿಯನ್ನು ಹೊಂಬಣ್ಣ ಬರುವವರೆಗೆ ಬೇಯಿಸಿದರೆ ವೆಜಿಟೇಬಲ್ ಪ್ಯಾಟೀಸ್ ತಯಾರು.