ಮಸಾಲಾ ಮಂಡಕ್ಕಿ ಒಗ್ಗರಣೆ
ಬೇಕಿರುವ ಸಾಮಗ್ರಿ
ಮಂಡಕ್ಕಿ (ಚುರುಮುರಿ) - ೩ ಕಪ್, ಕತ್ತರಿಸಿದ ಈರುಳ್ಳಿ - ಅರ್ಧ ಕಪ್, ಹಸಿ ಮೆಣಸಿನಕಾಯಿ - ೩, ಕತ್ತರಿಸಿದ ಟೊಮೆಟೋ - ಅರ್ಧ ಕಪ್, ತುರಿದ ಕ್ಯಾರೆಟ್ - ಅರ್ಧ ಕಪ್, ತೆಂಗಿನಕಾಯಿ ತುರಿ - ಅರ್ಧ ಕಪ್, ಶುಂಠಿ ತುರಿ - ಅರ್ಧ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೨ ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು - ೧ ಚಮಚ, ಸಾಸಿವೆ - ೧ ಚಮಚ, ಇಂಗು - ಕಾಲು ಚಮಚ, ಎಣ್ಣೆ - ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ: ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಹಸಿ ಮೆಣಸಿನಕಾಯಿ, ಟೊಮೆಟೋ, ಕ್ಯಾರೆಟ್, ಶುಂಠಿ ತುರಿ, ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ. ನಂತರ ಮಂಡಕ್ಕಿ ಹಾಕಿ ಚೆನ್ನಾಗಿ ಕೈಯಾಡಿಸಿ ಒಲೆಯಿಂದ ಕೆಳಗಿಳಿಸಿ ತೆಂಗಿನತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮಸಾಲಾ ಮಂಡಕ್ಕಿ ಸವಿಯಲು ಸಿದ್ಧ.