ಚಟ್ಟಂಬಡೆ

ಚಟ್ಟಂಬಡೆ

ಬೇಕಿರುವ ಸಾಮಗ್ರಿ

ಕಡಲೆಬೇಳೆ - ೨ ಕಪ್, ತೆಂಗಿನ ತುರಿ - ೧ ಕಪ್, ಅಕ್ಕಿ ಹಿಟ್ಟು - ೨ ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು - ೩ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೩ ಚಮಚ, ಇಂಗು - ಅರ್ಧ ಚಮಚ, ಮೆಣಸಿನ ಹುಡಿ - ೨ ಚಮಚ, ಶುಂಠಿ ತುರಿ - ೧ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಕಡಲೆಬೇಳೆಯನ್ನು ಒಂದು ಗಂಟೆ ಕಾಲ ನೆನೆಸಿ ಬಸಿದು ತರಿತರಿಯಾಗಿ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಅಕ್ಕಿ ಹಿಟ್ಟು, ತೆಂಗಿನ ತುರಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಇಂಗು, ಮೆಣಸಿನ ಹುಡಿ, ಶುಂಠಿ ತುರಿ, ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಚಟ್ಟಂಬಡೆಯ ಹದಕ್ಕೆ ಗಟ್ಟಿಯಾಗಿ ಕಲಸಿ. ಕಲಸಿದ ಮಿಶ್ರಣದಿಂದ, ಚಿಕ್ಕ ಉಂಡೆ ಮಾಡಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ. ಗರಿಗರಿಯಾದ ಚಟ್ಟಂಬಡೆ, ಕಾಯಿ ಚಟ್ನಿಯೊಂದಿಗೆ ಇಲ್ಲವೇ ಮೊಸರಿನಲ್ಲಿ ನೆನೆಯಿಟ್ಟು ತಿನ್ನಲು ಬಹಳ ರುಚಿಕರ.