ಬೀಟ್ರೂಟ್ ಗೊಜ್ಜು

ಬೀಟ್ರೂಟ್ ಗೊಜ್ಜು

ಬೇಕಿರುವ ಸಾಮಗ್ರಿ

ಕತ್ತರಿಸಿದ ಬೀಟ್ರೂಟ್ ಹೋಳುಗಳು - ೨ ಕಪ್, ಹುಣಸೆ ರಸ - ೪ ಚಮಚ, ಬೆಲ್ಲದ ಹುಡಿ - ೩ ಚಮಚ, ತೆಂಗಿನಕಾಯಿ ತುರಿ - ಕಾಲು ಕಪ್, ಒಣ ಮೆಣಸಿನ ಕಾಯಿ - ೫-೬, ಬಿಳಿ ಎಳ್ಳಿನ ಹುಡಿ - ೩ ಚಮಚ, ಎಣ್ಣೆ - ೪ ಚಮಚ, ಸಾಸಿವೆ - ೧ ಚಮಚ, ಇಂಗು - ಕಾಲು ಚಮಚ, ಕರಿಬೇವಿನ ಎಲೆಗಳು - ೭-೮, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಬೀಟ್ರೂಟ್ ಹೋಳುಗಳು, ತೆಂಗಿನ ತುರಿ, ಒಣ ಮೆಣಸಿನಕಾಯಿ, ಬಿಳಿ ಎಳ್ಳಿನ ಹುಡಿಗಳನ್ನು ಸೇರಿಸಿ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಸಾಸಿವೆ-ಇಂಗು-ಕರಿಬೇವಿನ ಒಗ್ಗರಣೆ ತಯಾರಿಸಿ. ಒಗ್ಗರಣೆಗೆ, ಹುಣಸೆ ರಸ, ಬೆಲ್ಲದ ಹುಡಿ, ಉಪ್ಪು, ಅರೆದ ಮಿಶ್ರಣ ಹಾಕಿ ಚೆನ್ನಾಗಿ ಕುದಿಸಿ, ಒಲೆಯಿಂದ ಕೆಳಗಿಳಿಸಿ. ರುಚಿಯಾದ ಬೀಟ್ರೂಟ್ ಗೊಜ್ಜು ಸವಿಯಲು ಸಿದ್ಧ.