ಜೋಳದ ಸ್ಪೆಷಲ್ ರೊಟ್ಟಿ
ಬೇಕಿರುವ ಸಾಮಗ್ರಿ
ಮೆಕ್ಕೆ ಜೋಳದ ಹಿಟ್ಟು - ೧ ಕಪ್, ಗೋಧಿ ಹಿಟ್ಟು - ೧ ಕಪ್, ಕಡಲೆ ಹಿಟ್ಟು - ೧ ಕಪ್, ಬಿಳಿ ಜೋಳದ ಹಿಟ್ಟು - ೧ ಕಪ್, ತುರಿದ ಸೌತೇ ಕಾಯಿ - ೨ ಕಪ್, ಹಸಿ ಮೆಣಸಿನಕಾಯಿ ಪೇಸ್ಟ್ - ರುಚಿಗೆ ತಕ್ಕಷ್ಟು, ಎಣ್ಣೆ - ಅರ್ಧ ಚಮಚ, ಅರಶಿನ, ಇಂಗು - ಚಿಟಿಕೆಯಷ್ಟು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿಸೊಪ್ಪು
ತಯಾರಿಸುವ ವಿಧಾನ
ಒಂದು ಪಾತ್ರೆಗೆ ಎಲ್ಲ ಹಿಟ್ಟಿನ ಜೊತೆಗೆ ತುರಿದ ಸೌತೇಕಾಯಿ, ಹಸಿ ಮೆಣಸಿನಕಾಯಿ ಪೇಸ್ಟ್, ಅರಶಿನ ಹುಡಿ, ಇಂಗು, ಉಪ್ಪು, ಕೊತ್ತಂಬರಿ ಸೊಪ್ಪು ಇವೆಲ್ಲವನ್ನು ಬೆರೆಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿ. ೫ ನಿಮಿಷ ಬಿಟ್ಟು ಕೈಯಿಂದ ತಟ್ಟಿ ರೊಟ್ಟಿ ಮಾಡಿ ಎರಡು ಬದಿ ಕೆಂಪಗೆ ಬೇಯಿಸಿದರೆ ಬಿಸಿ ಬಿಸಿ ರೊಟ್ಟಿ ಸಿದ್ಧ. ಉತ್ತರ ಕರ್ನಾಟಕದ ಕಡೆ ಇದನ್ನು ತಾಲಿಪಟ್ಟು ಎನ್ನುತ್ತಾರೆ. ಇದನ್ನು ಬೆಣ್ಣೆ ಅಥವಾ ಮೊಸರಿನ ಜೊತೆ ತಿಂದರೆ ತುಂಬಾ ರುಚಿಯಾಗಿರುತ್ತದೆ.