ಆಲೂಗೆಡ್ಡೆ ಗೊಜ್ಜು
![](https://saaranga-aws.s3.ap-south-1.amazonaws.com/s3fs-public/styles/article-landing/public/%E0%B2%86%E0%B2%B2%E0%B3%82%E0%B2%97%E0%B3%86%E0%B2%A1%E0%B3%8D%E0%B2%A1%E0%B3%87.jpg?itok=PoGBhLOM)
ಬೇಕಿರುವ ಸಾಮಗ್ರಿ
ಕತ್ತರಿಸಿದ ಆಲೂಗೆಡ್ಡೆ ಹೋಳುಗಳು - ೨ ಕಪ್, ತೆಂಗಿನ ತುರಿ -ಅರ್ಧ ಕಪ್, ಹುರಿಗಡಲೆ ಹುಡಿ - ೩ ಚಮಚ, ಅರಸಿನ - ೧ ಚಮಚ, ಇಂಗು - ಅರ್ಧ ಚಮಚ, ಒಣ ಮೆಣಸಿನ ಕಾಯಿ -೫-೬ ತುಂಡುಗಳು, ಹೆಚ್ಚಿದ ಕೊತ್ತಂಬರಿ ಸೊಪ್ಪು - ೪ ಚಮಚ, ಎಣ್ಣೆ - ೪ ಚಮಚ, ಸಾಸಿವೆ - ೧ ಚಮಚ, ಜೀರಿಗೆ ಹುಡಿ -೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಆಲೂಗೆಡ್ಡೆ ಹೋಳುಗಳನ್ನು ಬೇಯಿಸಿ. ತೆಂಗಿನಕಾಯಿ ತುರಿ, ಅರಶಿನ, ಇಂಗು, ಹುರಿಗಡಲೆ ಹುಡಿಗಳನ್ನು ಸೇರಿಸಿ ರುಬ್ಬಿ. ಕಾದ ಎಣ್ಣೆಗೆ ಸಾಸಿವೆ-ಜೀರಿಗೆ ಹುಡಿ ಸೇರಿಸಿ ಒಗ್ಗರಣೆ ಮಾಡಿ. ಒಗ್ಗರಣೆಗೆ ಒಣಮೆಣಸಿನ ಕಾಯಿ ತುಂಡುಗಳನ್ನು ಹಾಕಿ ಬಾಡಿಸಿ. ನಂತರ ಬೇಯಿಸಿದ ಆಲೂಗೆಡ್ಡೆ ಹೋಳುಗಳು, ಅರೆದ ಮಿಶ್ರಣ, ಉಪ್ಪು ಹಾಕಿ ಗೊಜ್ಜಿನ ಹದಕ್ಕೆ ನೀರು ಹಾಕಿ ಕುದಿಸಿ ಒಲೆಯಿಂದ ಕೆಳಗಿಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಅಲೂಗೆಡ್ಡೆ ಗೊಜ್ಜು ತಯಾರು.