ಮೆಣಸಿನಕಾಯಿ ಬಜ್ಜಿ

ಮೆಣಸಿನಕಾಯಿ ಬಜ್ಜಿ

ಬೇಕಿರುವ ಸಾಮಗ್ರಿ

ಹೆಬ್ಬಟ್ಟು ಗಾತ್ರದ ಹಸಿಮೆಣಸಿನ ಕಾಯಿ - ೧೦, ಕಡಲೆಹಿಟ್ಟು - ೨ ಕಪ್, ಅಕ್ಕಿ ಹಿಟ್ಟು - ಅರ್ಧ ಕಪ್, ಮೈದಾ ಹಿಟ್ಟು - ಕಾಲು ಕಪ್, ಹುರಿಗಡಲೆ - ಕಾಲು ಕಪ್, ತೆಂಗಿನ ತುರಿ - ಅರ್ಧ ಕಪ್, ಕಡಲೇಕಾಯಿ ಬೀಜ - ೨ ಚಮಚ, ಜೀರಿಗೆ - ೨ ಚಮಚ, ಓಂಕಾಳು - ೧ ಚಮಚ, ಕೊತ್ತಂಬರಿ ಬೀಜ - ೧ ಚಮಚ, ನಿಂಬೆ ರಸ - ೨ ಚಮಚ, ಉಪ್ಪು - ರುಚಿಗೆ ತಕ್ಕಷ್ಟು ಮತ್ತು ಕರಿಯಲು ಎಣ್ಣೆ

ತಯಾರಿಸುವ ವಿಧಾನ

ತೆಂಗಿನ ತುರಿ, ಕಡಲೇಕಾಯಿ ಬೀಜ, ಹುರಿಗಡಲೆ, ಜೀರಿಗೆ, ಓಂಕಾಳು, ಕೊತ್ತಂಬರಿ ಬೀಜ, ನಿಂಬೆರಸ, ಉಪ್ಪುಗಳನ್ನು ಸೇರಿಸಿ ಗಟ್ಟಿಯಾಗಿ ರುಬ್ಬಿ ಮಸಾಲೆ ತಯಾರಿಸಿ. ಹಸಿಮೆಣಸಿನಕಾಯಿಗಳನ್ನು ಉದ್ದಕ್ಕೆ ಸೀಳಿ ಬೀಜಗಳನ್ನು ತೆಗೆದು ರುಬ್ಬಿದ ಮಸಾಲೆಯನ್ನು ತುಂಬಿ, ಕಡಲೆ ಹಿಟ್ಟು, ಅಕ್ಕಿಹಿಟ್ಟು, ಮೈದಾ ಹಿಟ್ಟುಗಳನ್ನು ಸೇರಿಸಿ ೨ ಟೀ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ, ಸ್ವಲ್ಪ ನೀರು ಹಾಕಿ ಇಡ್ಲಿ ಹದಕ್ಕೆ ಕಲಸಿಡಿ. ಮಸಾಲೆ ತುಂಬಿದ ಮೆಣಸಿನಕಾಯಿಗಳನ್ನು ಕಡಲೆ ಹಿಟ್ಟಿನ ಮಿಶ್ರಣದಲ್ಲದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಹೊಂಬಣ್ಣದ ಗರಿಗರಿಯಾದ ಮೆಣಸಿನ ಕಾಯಿ ಬಜ್ಜಿಯನ್ನು ಟೊಮೆಟೋ ಸಾಸ್ ಜೊತೆಯಲ್ಲಿ ಸವಿಯಿರಿ.