ಗರಿ ಗರಿ ನಿಪ್ಪಟ್ಟು

ಗರಿ ಗರಿ ನಿಪ್ಪಟ್ಟು

ಬೇಕಿರುವ ಸಾಮಗ್ರಿ

ಅಕ್ಕಿ ಹಿಟ್ಟು ೨ ಕಪ್, ಮೈದಾ ಹಿಟ್ಟು ೧ ಕಪ್, ಚಿರೋಟಿ ರವೆ- ಅರ್ಧ ಕಪ್, ತರಿಯಾಗಿ ಹುಡಿ ಮಾಡಿದ ಹುರಿಗಡಲೆ - ೩ ಚಮಚ, ತರಿಯಾಗಿ ಹುಡಿ ಮಾಡಿದ ಕಡಲೇಕಾಯಿ ಬೀಜ - ೩ ಚಮಚ, ಕತ್ತರಿಸಿದ ಈರುಳ್ಳಿ - ೩ ಚಮಚ, ಮೆಣಸಿನ ಹುಡಿ - ೨ ಚಮಚ, ಇಂಗು - ಅರ್ಧ ಚಮಚ, ತರಿಯಾಗಿ ಹುಡಿ ಮಾಡಿದ ಎಳ್ಳು - ೧ ಚಮಚ, ವನಸ್ಪತಿ (ಡಾಲ್ಡಾ) - ೨ ಚಮಚ, ಕತ್ತರಿಸಿದ ಬೇವಿನ ಸೊಪ್ಪು - ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ

ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಕಡಲೆಕಾಯಿ ಬೀಜ, ಹುರಿಗಡಲೆಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಇಂಗು, ವನಸ್ಪತಿ, ಈರುಳ್ಳಿ, ಕರಿಬೇವು, ಉಪ್ಪು, ಮೆಣಸಿನ ಹುಡಿ, ಎಳ್ಳು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದುಕೊಂಡು ವಡೆಯಾಕಾರದಲ್ಲಿ ತಟ್ಟಿ ಕಾಯಿಸಿದ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಗರಿ ಗರಿ ನಿಪ್ಪಟ್ಟು ರೆಡಿ.