ತೊಗರಿಬೇಳೆ ಬೋಂಡಾ
ಬೇಕಿರುವ ಸಾಮಗ್ರಿ
ತೊಗರಿಬೇಳೆ -ಕಾಲು ಕೆ ಜಿ, ಕಡ್ಲೆಬೇಳೆ - ಕಾಲು ಕೆ ಜಿ, ಹಸಿಮೆಣಸು - ೭-೮, ತೆಂಗಿನ ಕಾಯಿ ತುರಿ - ಅರ್ಧ ಗಡಿ (ಕಡಿ), ಈರುಳ್ಳಿ - ೩, ಚಿಟಿಕೆ ಇಂಗು, ಹಸಿ ಶುಂಠಿ ೧ ತುಂಡು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವಿನ ಸೊಪ್ಪು, ರುಚಿಗೆ ತಕ್ಕಷ್ಟು ಹುಡಿ ಉಪ್ಪು
ತಯಾರಿಸುವ ವಿಧಾನ
ತೊಗರಿಬೇಳೆ ಹಾಗೂ ಕಡ್ಲೆಬೇಳೆಯನ್ನು ೨ ರಿಂದ ೩ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಸೋಸಿ, ನೀರು ತೆಗೆದು ಅದಕ್ಕೆ ತೆಂಗಿನ ತುರಿ, ಹೆಚ್ಚಿದ ಹಸಿಮೆಣಸು, ಉಪ್ಪು ಬೆರೆಸಿ ಗಟ್ಟಿಯಾಗಿ ರುಬ್ಬಿಕೊಳ್ಳಿರಿ. ಅದಕ್ಕೆ ಶುಂಠಿ, ಕರಿಬೇವು, ಕೊತ್ತಂಬರಿ, ಇಂಗು, ಈರುಳ್ಳಿ ಸೇರಿಸಿ ಸಣ್ಣ ಉಂಡೆಗಳನ್ನಾಗಿ ಮಾಡಿ. ಒಲೆಯ ಮೇಲೆ ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಈಗ ತೊಗರಿಬೇಳೆ ಬೋಂಡಾ ತಿನ್ನಲು ಸಿದ್ಧ.