ಬಸಳೆ ತೊಗರಿಬೇಳೆ ಗಸಿ

ಬಸಳೆ ತೊಗರಿಬೇಳೆ ಗಸಿ

ಬೇಕಿರುವ ಸಾಮಗ್ರಿ

೧ ಪಾವು ತೊಗರಿಬೇಳೆ, ಬಸಳೆಯ ಎಲೆ ೨ ಕಟ್ಟು (ದಂಟು ಬೇಡ), ಹುಳಿ, ತೆಂಗಿನತುರಿ, ಹುರಿದ ಮೆಣಸು ೫ ರಿಂದ ೬, ೧ ನೀರುಳ್ಳಿ, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಮೊದಲು ಕುಕ್ಕರಿನಲ್ಲಿ ತೊಗರಿಬೇಳೆಯನ್ನು ಚೆನ್ನಾಗಿ ಬೇಯಿಸಿ. ನಂತರ ಬಸಳೆಯನ್ನು ಸಣ್ಣದಾಗಿ ಕತ್ತರಿಸಿ ಬೇಯಿಸಿಡಿ. ಮಿಕ್ಸಿಗೆ ತೆಂಗಿನತುರಿ, ಹುಳಿ, ಮೆಣಸು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿರಿ. ನಂತರ ಅದನ್ನು ಬೇಳೆಗೆ ಹಾಕಿ ಕುದಿಸಿರಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದಕ್ಕೆ ಎಣ್ಣೆ ಹಾಕಿದ ನೀರುಳ್ಳಿಯ ಒಗ್ಗರಣೆ ಕೊಡಿ. ಈಗ ಇಡ್ಲಿ, ದೋಸೆ ಜೊತೆ ಅಥವಾ ಊಟದ ಜೊತೆ ತಿನ್ನಲು ಬಸಳೆ ತೊಗರಿಬೇಳೆ ಗಸಿ ರೆಡಿ.

-ಕೆ. ಗಾಯತ್ರಿ ಕಾಮತ್