ಹಳದಿ ಸಾಂಬಾರು !
ಮಂಗಳೂರು ಸೌತೆ (ಸಾಂಬಾರ್ ಸೌತೆ), ಹಲಸಿನ ಕಾಯಿ ಸೊಳೆ, ನೀರುಳ್ಳಿ ೧-೨, ಅರಸಿನ ಹುಡಿ, ಸ್ವಲ್ಪ ಬೆಲ್ಲ, ಚಿಟಿಕೆ ಉಪ್ಪು, ಒಣ ಮೆಣಸು ೬-೮, ತೆಂಗಿನ ಕಾಯಿ ತುರಿ ೨ ಕಪ್, ಸ್ವಲ್ಪ ಹುಣಸೇ ಹುಳಿ, ಜೀರಿಗೆ ಕಾಲು ಚಮಚ, ಉದ್ದಿನ ಬೇಳೆ ಕಾಲು ಚಮಚ, ಸ್ವಲ್ಪ ಇಂಗು, ೧೦ ಎಸಳು ಕರಿ ಬೇವು, ಬೆಳ್ಳುಳ್ಳಿ, ಬೇಕಿದ್ದಲ್ಲಿ ಹಲಸಿನ ಬೀಜ
ಸೌತೆಕಾಯಿ ಹೋಳಿನೊಂದಿಗೆ ಹಲಸಿನಕಾಯಿ ಸೊಳೆ, ನೀರುಳ್ಳಿ ಕತ್ತರಿಸಿ ಸೇರಿಸಿ. ಉಪ್ಪು, ಚಿಟಿಕೆ ಅರಶಿನ ಪುಡಿ, ಸ್ವಲ್ಪ ಬೆಲ್ಲ ಹಾಕಿ ಬೇಯಿಸಬೇಕು. ತೆಂಗಿನಕಾಯಿ ತುರಿಗೆ ಸ್ವಲ್ಪ ಹುಣಿಸೇಹುಳಿ ಸೇರಿಸಿ. ಒಣಮೆಣಸು, ಜೀರಿಗೆ, ಉದ್ದಿನಬೇಳೆ, ಮೆಂತೆ, ಕಾಲು ಚಮಚ ಅರಶಿನಪುಡಿ, ಚಿಟಿಕೆ ಇಂಗು, ಕರಿಬೇವು ಹುರಿದು ಸೇರಿಸಿ ನುಣ್ಣಗೆ ರುಬ್ಬಿಕೊಂಡು ,ಬೆಂದ ಹೋಳಿಗೆ ಸೇರಿಸಿ, ಸಣ್ಣ ಉರಿಯಲ್ಲಿ ಕುದಿಸಬೇಕು. ಬೆಳ್ಳುಳ್ಳಿ ಒಗ್ಗರಣೆ ಹಾಕಬೇಕು. ಇದಕ್ಕೆ ಬೇಯಿಸಿದ ಹಲಸಿನಬೀಜ ಸೇರಿಸಿದರೆ ತುಂಬಾ ರುಚಿ.
ಮಂಗಳೂರು ಸೌತೆ, ಹಲಸಿನಕಾಯಿ ಸೊಳೆ(ತೊಳೆ), ನೀರುಳ್ಳಿ ಅರಶಿನ ಬೆಂದಿ(ಹಳದಿ ಸಾಂಬಾರು) ರೆಡಿ. ಅರಶಿನ ಬೆಂದಿ ಘಮಘಮ ಪರಿಮಳದೊಂದಿಗೆ ದೋಸೆ, ಊಟ, ಚಪಾತಿ, ಪೂರಿ ಎಲ್ಲದಕ್ಕೂ ಸೇರಿಸಿ ತಿನ್ನಲು ಬಲು ರುಚಿ.
-ರತ್ನಾ ಕೆ.ಭಟ್, ತಲಂಜೇರಿ