ರುಚಿ ಸಂಪದ

  • ಕೊತ್ತಂಬರಿ ಬೀಜವನ್ನು ಸುವಾಸನೆ ಬರುವವರೆಗೂ ಹುರಿದುಕೊಳ್ಳುವುದು. ಕೊಬ್ಬರಿತುರಿಯನ್ನೂ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಕರಿಬೇವು ಎಲೆ ಗರಿಗರಿಯಾಗಿ ಹುರಿಯಬೇಕು. ನಾಲ್ಕು ಚಮ್ಮಚ ಎಣ್ಣೆ ಕಾಯಿಸಿ ಸಾಸಿವೆ ಸಿಡಿದ ನಂತರ ಹಿಂಗು ಹಾಕಿ ಅದರಲ್ಲಿ ಒಣಮೆಣಸಿನಕಾಯಿ ಹುರಿದು ತೆಗೆಯಬೇಕು. ಕೊತ್ತಂಬರಿ ಬೀಜದ ಜೊತೆಗೆ ಕರಿಬೇವು, ಕೊಬ್ಬರಿ, ಹುಣಸೇಹಣ್ಣಿನ ಪುಡಿ, ಉಪ್ಪು ಹಾಗೂ ಒಂದು ಸಣ್ಣ ತುಂಡು ಬೆಲ್ಲ ಮತ್ತು ಕರಿದು ತೆಗೆದ ಒಣಮೆಣಸಿನಕಾಯಿ ಸೇರಿಸಿ ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳುವುದು. ಬಾಂಡಲೆಯಲ್ಲಿರುವ ಒಗ್ಗರಣೆ ಎಣ್ಣೆಯಲ್ಲಿ ಇವನ್ನು ಕಲಸಿ ಡಬ್ಬಿಗೆ ತುಂಬಿಡಿ. ಸೂ: ಅಸಿಡಿಟಿ ಇರುವವರಿಗೆ ಊಟಕ್ಕೆ ಮೊದಲು…

    2
  • ಗೋದಿಯನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟಿರಬೇಕು. ಬೆಳಿಗ್ಗೆ ಅದನ್ನು ಬಸಿದು ಮಿಕ್ಸಿಯಲ್ಲಿ ಸ್ವಲ್ಪ ನೀರು ಸೇರಿಸಿ ಅದರ ಹಾಲು ತೆಗೆದುಕೊಳ್ಳುವುದು. ಆ ಹಾಲಿನ ಜೊತೆಗೆ ಒಂದು ತೆಂಗಿನ ಕಾಯಿ ಹೋಳಿನ ಹಾಲನ್ನು ತೆಗೆದು ಬೆರೆಸಬೇಕು. ಅದರ ಜೊತೆಗೆ ೧/೨ ಲೇಟರ್ ಹಾಲು ಬೆರೆಸುವುದು. ಬೆಲ್ಲವನ್ನು ಕರಗಿಸಿ ಫಿಲ್ಟರ್ ಮಾಡಿ, ಯಾಲಕ್ಕಿ ಪುಡಿ ಸೇರಿಸಿ ಅದಕ್ಕೆ ಬೆರೆಸುವುದು. ಒಲೆಯ ಮೇಲೆ ಇಟ್ಟು ಕೈಯಾಡುತ್ತಿರಬೇಕು. ಪಾತ್ರೆ ತಳಬಿಟ್ಟು ಮುದ್ದೆಯಾಗಿ ಬರುವಾಗ ಅದನ್ನು ತುಪ್ಪ ಹಚ್ಚಿದ ತಟ್ಟೆಗೆ ಹಾಕಿ ಆರಿದ ನಂತರ ಅದನ್ನು ಬೇಕಾದ ಆಕಾರಕ್ಕೆ ಸ್ಲೈಸ್ ಮಾಡಿ ಹುರಿದ ದ್ರಾಕ್ಷಿ, ಗೊಡಂಬಿ ಹಾಗೂ ಗಸಗಸೆ ಉದುರಿಸುವುದು. ಸೂ: ೧…

    1
  • ಅಕ್ಕಿಹಿಟ್ಟನ್ನು ಬಾಂಡಲೆಯಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಹುರ್ಗಡ್ಲೆ ಪುಡಿ ಮಾಡಿಕೊಂಡು ಒಂದು ಸೇರಿಗೆ ಒಂದು ಪಾವು ಹುರ್ಗಡ್ಲೆ ಪುಡಿ ಬೆರೆಸಬೇಕು. ಒಂದು ಕಪ್ಪು ಎಣ್ಣೆ ಬಾಂಡಲೆಯಲ್ಲಿಟ್ಟು ಒಂದು ಚಮಚ ಸಾಸಿವೆ ಹಾಕಿ, ಸಿಡಿದ ಮೇಲೆ ಇಂಗು ಹಾಕಿ ಒಣ ಮೆಣಸಿನಕಾಯಿ ಹುರಿದು ತೆಗೆಯಬೇಕು. ಇದರ ಜೊತೆ ಕೊಬ್ಬರಿ ಅಥವಾ ತೆಂಗಿನಕಾಯಿ ತುರಿಯನ್ನು (ಕಾಯಿ ಹಾಕುವಾಗ ಸ್ವಲ್ಪ ಬಿಸಿ ಮಾಡಿಕೊಂಡರೆ ಒಳಿತು) ಸೇರಿಸಿ ಪುಡಿ ಮಾಡಿಕೊಳ್ಳಬೇಕು. ಅದನ್ನು ಹಿಟ್ಟಿಗೆ ಬೆರೆಸಿ ರುಚಿಗೆ ತಕ್ಕಂತೆ ಉಪ್ಪು ಬೆರೆಸಿ ಬಾಂಡಲೆಯಲ್ಲಿ ಉಳಿದಿರುವ ಎಣ್ಣೆಯನ್ನು ಹಿಟ್ಟಿಗೆ ಬೆರೆಸಿ ಕಲಸಿಕೊಳ್ಳುವುದು. ಸ್ವಲ್ಪ ಸ್ವಲ್ಪವಾಗಿ ಹಿಟ್ಟನ್ನು…

    0
  • ಇದು ನನ್ನ ಶ್ರೀಮತಿಗೆ ಯಾರೋ ಹೇಳಿದ್ದು - ತುಂಬಾ ಚೆನ್ನಾಗಿರುತ್ತೆ - ಮೈಸೂರ್ ಪಾಕ್ ಥರ ಆದರೇ ಮಾಡೋದು ತೀರಾ ಸಾಧಾರಣ ಮಾಡುವ ವಿಧಾನ ಮೇಲೆ ಹೇಳಿದ ಎಲ್ಲ ಪರಿಕರಗಳನ್ನು ಒಂದು ಬಾಣಲೆಯಲ್ಲಿ ಹಾಕಿ (ಗ್ಯಾಸ್ ಸಿಮ್ ನಲ್ಲಿರಲಿ) ಮೊಗಚುವ ಕೈನಲ್ಲಿ ತಿರುವುತ್ತಾ ಇರಿ - ಹತ್ತು ನಿಮಿಷಗಳ ನಂತರ ಆ ಮಿಶ್ರಣ ಪಾಕವಾಗಿ ಸುಮಧುರ ವಾಸನೆ ಬರುವುದು. ಆಗ ಅದನ್ನು ಒಲೆಯ ಮೇಲಿನಿಂದ ಇಳಿಸಿ ಒಂದು ತಟ್ಟೆಗೆ ತುಪ್ಪ ಸವರಿ - ಅದಕ್ಕೆ ಈ ಪಾಕವನ್ನು ಸುರಿದು - ಸಮವಾಗಿ ತಟ್ಟಿಕೊಳ್ಳಿ ಆ ನಂತರ ಯಾವ ಆಕರಕ್ಕೆ ಬೇಕೋ ಹಾಗೆ ಕತ್ತರಿಸಿಕೊಳ್ಳಿ ತಿಂದು ನೋಡಿ - ನಮ್ಮ ಮನೆಯಲ್ಲಿ ತಿಂಗಳಿಗೊಮ್ಮೆ ಮಕ್ಕಳಿಗೆ ಇದು ಬೇಕೇ ಬೇಕು

    0
  • ಎಲ್ಲ ಬೇಳೆಗಳನ್ನು ಒಂದೊಂದಾಗಿ ಸಂಪಿಗೆ ಬಣ್ಣ ಬರುವಂತೆ ಹದವಾಗಿ ಸಣ್ಣ ಉರಿಯಲ್ಲಿ ಹುರಿಯುವುದು. ಅರಿಸಿನ ಪುಡಿ ಹಾಗೂ ಇಂಗನ್ನು ಸಣ್ಣ ಉರಿಯಲ್ಲಿ ಸೇರಿಸಿ ಹುರಿಯುವುದು. ಹುರಿದಿರುವುದನ್ನು ಎಲ್ಲ ಸೇರಿಸಿ ಮಿಕ್ಸರಿನಲ್ಲಿ ಪುಡಿ ಮಾಡಿಟ್ಟುಕೊಳ್ಳುವುದು. ಉಪಯೋಗಿಸುವ ಬಗೆ: * ಮೆಂತ್ಯದ ಹಿಟ್ಟಿನ ಗೊಜ್ಜು ಮಾಡಬಹುದು. * ಶಾವಿಗೆ ಬಾತ್, ಉಪ್ಪಿಟ್ಟಿಗೆ ಸೇರಿಸಿ ತಿನ್ನಬಹುದು * ಬಿಸಿಯಾದ ಅನ್ನಕ್ಕೆ ಸೇರಿಸಿ ಉಪ್ಪು ತುಪ್ಪ ಹಾಕಿ ತಿನ್ನಬಹುದು. (ಹಿರಿಯರು ಈ ಉಪಯೋಗ ವಿಧಾನವನ್ನು ಆರೋಗ್ಯವಾದುದೆಂದು ಹೇಳುತ್ತಾರೆ)

    (ಬಹಳ ದಿನಗಳವರೆಗೆ ಇಡಬಹುದು - ಕೆಡುವುದಿಲ್ಲ)

    90

    ಕಾಳುಗಳನ್ನು ಸೇರಿಸಿ…

    0